ಮಡಿಕೇರಿ, ಡಿ. ೨೫: ಕೊಡಗರಹಳ್ಳಿಯ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾಗೆ ಬಾಲ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಕೊಡಗು ವಿದ್ಯಾಲಯದಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ೩೧ನೇ ರಾಷ್ಟಿçÃಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶ್ರೀಶಾ ಮಂಡಿಸಿದ ‘ಕಲುಷಿತಗೊಳ್ಳುತ್ತಿರುವ ನದಿಯ ತೀರಗಳು’ ಕುರಿತ ಸಂಶೋಧನಾ ಪ್ರಬಂಧಕ್ಕೆ ಈ ಪ್ರಶಸ್ತಿ ಸಿಕ್ಕಿದೆ.
ಈ ವಿದ್ಯಾರ್ಥಿನಿಯೊಂದಿಗೆ ೮ ಮಂದಿ ಕಿರಿಯ ವಿಜ್ಞಾನಿಗಳು ಜನವರಿ ಮೊದಲ ವಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಕೊಡಗು ವಿದ್ಯಾಲಯದ ೩ ತಂಡಗಳು ಆಯ್ಕೆಯಾಗುವಲ್ಲಿ ಸಫಲವಾದವು.
ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ಸತತ ೨ನೇ ವರ್ಷವೂ ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಆಯ್ಕೆಯಾದರು. ತೊರೆನೂರು ಸರ್ಕಾರಿ ಪ್ರೌಢಶಾಲೆ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳೂ ಸತತ ೨ನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ನಗರ ಕಿರಿಯ ವಿಭಾಗ: ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ಮತ್ತು ಶ್ಲೋಕ್ ಅಯ್ಯಪ್ಪ (ಜೇನು ಕೃಷಿಯ ಮಹತ್ವ: ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ), ಇದೇ ಶಾಲೆಯ ಎಂ.ಪಿ.ಯಾಶಿಕಾ ಶೆಟ್ಟಿ ಮತ್ತು ಯಶ್ ಕಾರಿಯಪ್ಪ (ಪರಿಸರ ವ್ಯವಸ್ಥೆಯಲ್ಲಿ ಏಡಿಗಳ ಕ್ಷೀಣಿಸುವಿಕೆ: ಮಾರ್ಗದರ್ಶಿ ಶಿಕ್ಷಕಿ: ಟಿ.ಜಯಶ್ರೀ)
ಗ್ರಾಮಾಂತರ ಕಿರಿಯ ವಿಭಾಗ: ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್. ಶ್ರೀಶಾ ಮತ್ತು ಟಿ.ಎಸ್. ಶೃಜನ್ಯ (ಕಲುಷಿತಗೊಳ್ಳುತ್ತಿರುವ ನದಿ ತೀರಗಳು: ಮಾರ್ಗದರ್ಶಿ ಶಿಕ್ಷಕಿ: ಎಂ.ಟಿ. ಶೋಭಾದಾಸ್)
ಪೊನ್ನಂಪೇಟೆ ಬಳಿಯ ಕಿರಗೂರು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ.ಶ್ರೇಯಸ್ ಮತ್ತು ವೈ.ಆರ್.ಕೃತಿಕ್ (ಮಾರಕವಾದ ಪ್ಲಾಸ್ಟಿಕ್ - ಪುನರ್ ಬಳಕೆ ಹಾದಿಯಲ್ಲಿ. ಮಾರ್ಗದರ್ಶಿ ಶಿಕ್ಷಕಿ: ಎಂ.ಎ.ಶ್ರೀಜ)
ಗ್ರಾಮಾAತರ ಹಿರಿಯ ವಿಭಾಗ: ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ (ವನ್ಯಜೀವಿಗಳು ಮತ್ತು ಮಾನವ ಸಂಘರ್ಷ: ಕಾಡಾನೆಗಳ ಸುಳಿಯಲ್ಲಿ ರೈತಾಪಿ ಜನ: ಮಾರ್ಗದರ್ಶಿ ಶಿಕ್ಷಕಿ : ಟಿ.ವಿ.ಶೈಲಾ)
ತೊರೆನೂರು ಸರ್ಕಾರಿ ಪ್ರೌಢಶಾಲೆಯ ಟಿ.ಎ.ಪುಷ್ಪಾ ಮತ್ತು ಎ.ಆರ್.ಪೂರ್ವಿಕಾ (ಸೊಳ್ಳೆಗಳ ಚೆಲ್ಲಾಟ - ಜನರಿಗೆ ಪ್ರಾಣ ಸಂಕಟ. ಮಾರ್ಗದರ್ಶಿ ಶಿಕ್ಷಕಿ: ಬಿ.ಪಿ.ಸವಿತಾ)
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಮತ್ತು ಕೆ.ವಿ.ಇಶ್ರತ್ (ಸಾಂಕ್ರಾಮಿಕ ರೋಗ ತಡೆಗಟ್ಟಿ ಆರೋಗ್ಯ ಕಾಪಾಡಿ: ಮಾರ್ಗದರ್ಶಿ ಶಿಕ್ಷಕಿ: ಬಿ.ಡಿ.ರಮ್ಯಾ)
ನಗರ ಹಿರಿಯ ವಿಭಾಗ: ಮಡಿಕೇರಿನಗರದ ಕೊಡಗು ವಿದ್ಯಾಲಯದ ಪಿ.ವಿ.ಲಕ್ಷ್ಯಾ ಮತ್ತು ಎಂ.ಭವಿಷ್ಯ (ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ - ಬದುಕಿ ಮತ್ತು ನಮ್ಮನ್ನು ಬದುಕಲು ಬಿಡಿ - ಆನೆಗಳ ಜತೆ ಸಹಬಾಳ್ವೆ ಜೀವನಕ್ಕೆ ಕರೆ: ಮಾರ್ಗದರ್ಶಿ ಶಿಕ್ಷಕಿ : ಪಿ.ಎಸ್.ಪೊನ್ನಮ್ಮ)
ಬಾಲವಿಜ್ಞಾನಿಗಳಿಗೆ ಕುಶಾಲನಗರದ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಸತೀಶ್ ಪ್ರಶಸ್ತಿ ಪ್ರದಾನ ಮಾಡಿದರು. ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ನವೀನ್ ಗೌಡ, ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ. ಪ್ರೇಮ ಕುಮಾರ್, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ಸಂಪನ್ಮೂಲ ವ್ಯಕ್ತಿ ಜಿ. ಶ್ರೀನಾಥ್, ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ, ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಮುನಿರ್ ಅಹ್ಮದ್, ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ರೋಟರಿ ವುಡ್ಸ್ನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ವಿಜ್ಞಾನ ಪರಿಷತ್ತಿನ ಪದಾಧಿಕಾರಿ ಎಂ.ಎನ್. ವೆಂಕಟನಾಯಕ, ಸದಸ್ಯರಾದ ಜಿ. ಶ್ರೀನಾಥ್, ಎಸ್.ಎಚ್. ಈಶ, ಟಿ.ವಿ. ಶೈಲಾ, ಗೈಡ್ಸ್ ಕ್ಯಾಪ್ಟನ್ ಸಿ.ಎಂ. ಸುಲೋಚನಾ ಭಾಗವಹಿಸಿದ್ದರು.