ಮಡಿಕೇರಿ, ಡಿ. ೨೫: ಕೊಡಂಬೂರು ಶ್ರೀ ಭದ್ರಕಾಳಿ ದೇವಾಲಯದಲ್ಲಿ ವಿಜೃಂಭಣೆಯಿAದ ಶ್ರೀ ಚಂಡಿಕಾ ಹವನ ಹೋಮ ನಡೆಯಿತು.
ಮೂರ್ನಾಡು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಬಂದು ನೆರೆದಿದ್ದ ಭಕ್ತ ಸಮೂಹ ಎರಡೂ ದಿನ ನಡೆದ ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಪೂರ್ಣಾಹುತಿ ಇತ್ಯಾದಿ ವಿಶೇಷ ಪೂಜೆಗಳಲ್ಲಿ ಭಾಗಿಯಾದರು. ಎರಡೂ ದಿನ ಅನ್ನ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಮೂಡೇರ ಅಶೋಕ್ ಹಾಗೂ ಸದಸ್ಯರು ವ್ಯವಸ್ಥೆ ಏರ್ಪಡಿಸಿದ್ದು, ಪ್ರಧಾನ ಅರ್ಚಕ ರಘುಪತಿ ಭಟ್ ನೇತೃತ್ವದಲ್ಲಿ ಮೈಸೂರಿನ ವಿದ್ವಾನ್ ಲಂಬೋದರ ಭಟ್ ನೇತೃತ್ವದ ತಂಡ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿದರು.