ಸಿದ್ದಾಪುರ, ಡಿ. ೨೫: ಇತ್ತೀಚೆಗೆ ಹುಣಸೂರು ನಗರದಲ್ಲಿ ನಡೆದಿದ್ದ ಕೊಡಗಿನ ಪಾಲಿಬೆಟ್ಟದ ಚಂಗಪ್ಪ ಎಂಬವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಉತ್ತರಪ್ರದೇಶದವನಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಚಂಗಪ್ಪ ಅವರ ಸ್ನೇಹಿತ ಸತೀಶ್ ದುಬೆ ಬಂಧಿತ ಆರೋಪಿಯಾಗಿದ್ದು, ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಡಿ.೨೦ರAದು ಹುಣಸೂರು ನಗರದ ದೇವರಾಜು ಅರಸು ಪ್ರತಿಮೆ ಬಳಿ ಇರುವ ಭವಾನಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಚಂಗಪ್ಪನ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಈ ಸಂಬAಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ. ಸೀಮಾಲಾಟ್ಕರ್ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ದೇವೇಂದ್ರ ಮತ್ತು ದೀಪಕ್ರನ್ನೊಳಗೊಂಡ ತಂಡವನ್ನು ರಚಿಸಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡವು ಒಂದೇ ದಿನದಲ್ಲಿ ಕೊಲೆಯಾದ ವ್ಯಕ್ತಿಯ ಪತ್ತೆ ಹಚ್ಚಿದ್ದಲ್ಲದೆ, ಪ್ರಕರಣಕ್ಕೆ ಸಂಬAಧಿಸಿದ ಆರೋಪಿ ಸತೀಶ್ ದುಬೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ ಎಂದು ಎಸ್.ಪಿ. ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಕೊಲೆಯಾದ ಚಂಗಪ್ಪ (೫೩), ಸತೀಶ್ ದುಬೆ ಸ್ನೇಹಿತರಾಗಿದ್ದು, ಕೊಡಗಿನಲ್ಲಿ ತಮ್ಮ ಸಂಬAಧಿ ಸಾವಿನ ಹಿನ್ನೆಲೆಯಲ್ಲಿ ಬೆಂಗಳೂರಿನಿAದ ಬಾಡಿಗೆ ಕಾರಿನಲ್ಲಿ ಬಂದಿದ್ದರು. ರಾತ್ರಿ ಬೆಂಗಳೂರಿಗೆ ವಾಪಸ್ ತೆರಳುವ ಸಂದರ್ಭ ಸ್ನಾನ ಮಾಡಲು ಹೆದ್ದಾರಿ ಬದಿಯ ಹುಣಸೂರಿನ ಲಾಡ್ಜ್ವೊಂದರಲ್ಲಿ ರೂಂ ಮಾಡಿದ್ದರು. ಈ ವೇಳೆ ಕಾರು ಚಾಲಕ ಕಾರ್ಯ ನಿಮಿತ್ತ ತುರ್ತಾಗಿ ಹೋಗಬೇಕೆಂದು ಬಾಡಿಗೆ ಹಣ ಪಡೆದು ರಾತ್ರಿಯೇ ವಾಪಸ್ ತೆರಳಿದ್ದಾರೆ.
ನಂತರ ಸ್ನೇಹಿತರಿಬ್ಬರು ಮದ್ಯಪಾನ ಮಾಡಿದ್ದಾರೆ. ಈ ವೇಳೆ ಚಂಗಪ್ಪ ಅವರ ಬಳಿಯಿದ್ದ ಹಣಕ್ಕಾಗಿ ಸತೀಶ್ ದುಬೆ ಜಗಳವಾಡಿದ್ದು, ಇಟ್ಟಿಗೆ ಫ್ಯಾಕ್ಟರಿ ಬಳಿ ಬಂದಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡ ವೇಳೆ ಚೆಂಗಪ್ಪ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಈ ಸಂದರ್ಭ ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಚಂಗಪ್ಪ ಅವರನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. -ಎಸ್.ಎಂ. ಮುಬಾರಕ್