ಮಡಿಕೇರಿ, ಡಿ. ೨೪: ಅತ್ಯಂತ ಕುತೂಹಲ ಮೂಡಿಸಿದ್ದ ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ನಿಯಮಿತ ಬ್ಯಾಂಕ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತರು ಅತೀ ಹೆಚ್ಚು ಸ್ಥಾನ ಪಡೆದು ಕೊಂಡಿದ್ದಾರೆ.

ನಗರದ ಬಾಲಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು ೧,೬೧೪ ಮತಗಳ ಪೈಕಿ ೧,೩೭೨ ಮಂದಿ ಮತಚಲಾಯಿಸಿದರು.

ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಮೀಸಲು, ಪ್ರವರ್ಗ ಎ ಹಾಗೂ ಬಿ ವಿಭಾಗಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದ ೭ ಸ್ಥಾನಕ್ಕೆ ೨೦ ಮಂದಿ, ಮಹಿಳಾ ಕ್ಷೇತ್ರದ ೨ ಸ್ಥಾನಕ್ಕೆ ೪, ಪರಿಶಿಷ್ಟ ಜಾತಿ ಕ್ಷೇತ್ರದ ೧ ಸ್ಥಾನಕ್ಕೆ ೨, ಪರಿಶಿಷ್ಟ ಪಂಗಡ ಕ್ಷೇತ್ರದ ೧ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು.

ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಲ್ಲಿ ಬಿಜೆಪಿ ಬೆಂಬಲಿತರು ಸಾಮಾನ್ಯ ಕ್ಷೇತ್ರದ ಒಂದು ಸ್ಥಾನ ಹೊರತುಪಡಿಸಿ ಬೇರೆಲ್ಲ ವಿಭಾಗದಲ್ಲಿ ಜಯ ಸಾಧಿಸಿ ಸ್ಪಷ್ಟಬಹುಮತ ದಾಖಲಿಸಿದ್ದಾರೆ.

ಮತಗಳ ವಿವರ

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಕನ್ನಂಡ ಸಂಪತ್ ೬೪೯ ಮತಗಳು, ಆರಾಧನ ಗಿರೀಶ್ ೫೯೫, ಸಿ.ಕೆ. ಬಾಲಕೃಷ್ಣ ೬೮೫, ಬಿ.ಕೆ. ಜಗದೀಶ್ ೭೩೮, ಬಿ.ವಿ. ರೋಶನ್ ೫೩೧, ಜಿ.ಎಂ. ಸತೀಶ್ ಪೈ ಗೋಕುಲ ೬೫೮ ಮತ ಗಳಿಸಿ ಗೆಲುವು ದಾಖಲಿಸಿದರೆ ವಿ.ಆರ್. ಮನುಮಂಜುನಾಥ್ ೩೯೪ ಮತ ಪಡೆದು ಸೋಲು ಅನುಭವಿಸಿದರು

ರಾಜೇಶ್ ಯಲ್ಲಪ್ಪ ೭೯೮ ಮತ ಗಳಿಸಿ ಕಾಂಗ್ರೆಸ್ ಬೆಂಬಲಿತರಾಗಿ ಗೆಲುವು ಸಾಧಿಸಿದ ಏಕೈಕ ಸ್ಪರ್ಧಿಯಾಗಿದ್ದಾರೆ.

ಉಳಿದಂತೆ ಕಾಂಗ್ರೆಸ್ ಬೆಂಬಲದಿAದ ಸ್ಪರ್ಧಿಸಿದ್ದ ಅಂಬೇಕಲ್ಲು ನವೀನ್ ಕುಶಾಲಪ್ಪ ೫೦೦ ಮತಗಳು, ಆಪಾಡಂಡ ಅಚ್ಚಯ್ಯ ೩೦೧, ಕೆ.ಯು. ಅಶ್ರಫ್ ೩೮೦, ಟಿ.ಹೆಚ್. ಉದಯಕುಮಾರ್ ೩೬೭, ಬಿ.ಪಿ. ಗುರುಕಿರಣ್ ೩೮೦, ಜಿ.ಸಿ ಜಗದೀಶ್ ೩೧೭, ಸ್ವತಂತ್ರö್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪೊನ್ನಚ್ಚನ ಮಧು ೪೫೧, ಧನಂಜಯ ೨೦೯, ಧರ್ಮಪಾಲ್ ೨೪೪, ಎನ್.ಬಿ. ಪಾಲಕ್ಷ ೯೮, ಎನ್.ಎ. ಸತೀಶ್ ಪೈ ೨೧೭, ಎಂ. ಖಲೀಲ್ ೧೩೪ ಮತಗಳನ್ನು ಪಡೆದು ಸೋಲು ಅನುಭವಿಸಿದರು. ೭೩ ಮತಗಳು ತಿರಸ್ಕೃತಗೊಂಡವು.

ಪರಿಶಿಷ್ಟ ಜಾತಿ ವಿಭಾಗದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಎಸ್.ಸಿ ಸತೀಶ್ ೬೬೦ ಮತಗಳಿಂದ ಜಯಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ವಿಶಾಲ್ ನಂದಕುಮಾರ್ ೬೫೪ ಮತಗಳನ್ನು ಪಡೆದರು. ೬೦ ಮತಗಳು ತಿರಸ್ಕೃತಗೊಂಡವು.

ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಕೆ.ಆರ್. ನಾಗೇಶ್ ೯೩೩ ಮತಗಳನ್ನು ಪಡೆದು ವಿಜಯ ಸಾಧಿಸಿದರು. ಕಾಂಗ್ರೆಸ್ ಬೆಂಬಲಿತ ವಾಸುದೇವ್ ೩೫೮ ಮತಗಳನ್ನು ಪಡೆದರೆ ೮೧ ಮತಗಳು ತಿರಸ್ಕೃತಗೊಂಡವು.

ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಾದ ಕೇಟೋಳಿರ ಮಾಚಮ್ಮ ೮೦೮ ಹಾಗೂ ಪ್ರತಿಭಾ ಶೆಟ್ಟಿ ೬೮೮ ಮತಗಳಿಂದ ಗೆಲುವು ದಾಖಲಿಸಿದರು. ಕಾಂಗ್ರೆಸ್ ಬೆಂಬಲಿತರಾದ ಸಂಗೀತಾ ೫೦೭, ಕೂಡಕಂಡಿ ಕಾವೇರಮ್ಮ ಸೋಮಣ್ಣ ೫೯೩ ಮತಪಡೆದರೆ ೩೨ ಮತಗಳು ತಿರಸ್ಕೃತಗೊಂಡವು.

ಪ್ರವರ್ಗ ಎ ಕ್ಷೇತ್ರದಿಂದ ೭೦೯ ಮತಗಳಿಂದ ಬಿಜೆಪಿ ಬೆಂಬಲಿತ ಬಿ.ಎಂ. ರಾಜೇಶ್ ಗೆಲುವಿನ ನಗೆಬೀರಿದರು. ಕಾಂಗ್ರೆಸ್ ಬೆಂಬಲಿತ ಪ್ರಕಾಶ್ ಆಚಾರ್ಯ ೫೯೭ ಮತಗಳಿಂದ ಸೋಲೊಪ್ಪಿಕೊಂಡರು. ೭೧ ಮತಗಳು ತಿರಸ್ಕೃತಗೊಂಡವು.

ಪ್ರವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮಹೇಶ್ ಜೈನಿ ೭೪೫ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಬೆಂಬಲಿತ ಮಂಡೀರ ಸದಾ ಮುದ್ದಪ್ಪ ೫೫೪ ಮತ ಪಡೆದು ಪರಭಾವಗೊಂಡರು. ೭೪ ಮತಗಳು ತಿರಸ್ಕೃತಗೊಂಡವು.

ಚುನಾವಣಾಧಿಕಾರಿಯಾಗಿ ಬಿ.ಕೆ. ವಿಜಯೇಂದ್ರ ಕಾರ್ಯನಿರ್ವಹಿಸಿದರು.