\ಕುಶಾಲನಗರ, ಡಿ. ೨೪: ಹನುಮ ಜಯಂತಿ ಅಂಗವಾಗಿ ಕುಶಾಲನಗರ ದಲ್ಲಿ ಅಲಂಕೃತ ವಿವಿಧ ಮಂಟಪಗಳ ಅದ್ಧೂರಿಯ ಶೋಭಾ ಯಾತ್ರೆ ನಡೆಯಿತು.

ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ೩೮ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ದೊಂದಿಗೆ ಹನುಮ ಜಯಂತಿ ಆಚರಿಸುವ ದಶಮಂಟಪಗಳ ಸಮಿತಿಯ ನೇತೃತ್ವದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ಎಂಟು ಮಂಟಪಗಳ ೫ನೇ ವರ್ಷದ ಶೋಭಾಯಾತ್ರೆ ಜನ ಮನ ರಂಜಿಸಿತು.

ಕುಶಾಲನಗರ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ದೇವಾಲಯದ ಅರ್ಚಕರಾದ ಡಾ. ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ವತಿಯಿಂದ ಸಂಜೆ ಅಲಂಕೃತ ಮಂಟಪದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಭವ್ಯ ಮೆರವಣಿಗೆ ನಡೆಯಿತು. ರಥ ಬೀದಿಯ ಮೂಲಕ ಆಗಮಿಸಿದ ಭವ್ಯ ಮಂಟಪ ಗಣಪತಿ ದೇವಾಲಯ ಬಳಿ ಬಂದು ಮುಖ್ಯ ರಸ್ತೆಯಲ್ಲಿ ಬೈಚನಹಳ್ಳಿ ತನಕ ಸಾಗಿ ಮಾರಿಯಮ್ಮ ದೇವಾಲಯ ಬಳಿ ಪೂಜೆ ಸಲ್ಲಿಸಿ ನಂತರ ಹಿಂತಿರುಗಿತು. ಯುವತಿಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಉತ್ಸವ ಸಮಿತಿಯ ಅಧ್ಯಕ್ಷ ವಿ.ಎಚ್. ಪ್ರಶಾಂತ್, ಕಾರ್ಯದರ್ಶಿ ನವನೀತ್ ಪೊನ್ನಟಿ, ಮತ್ತಿತರ ಪ್ರಮುಖರು ಇದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥÀರ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವರಿಗೆ ಅರ್ಪಿಸಿದ ಲಾಡು ಗಳನ್ನು ಭಕ್ತಾದಿಗಳಿಗೆ ಹಂಚಿದರು.

ಸAಜೆ ೭ ಗಂಟೆಗೆ ಕುಶಾಲನಗರ ಹೆಚ್‌ಆರ್‌ಪಿ ಕಾಲೋನಿಯಿಂದ ಬಂದ ಅಂಜನಿಪುತ್ರ ಸೇವಾ ಸಮಿತಿಯ ಮಂಟಪ ಸಮಿತಿಯ ಅಧ್ಯಕ್ಷರಾದ ಡಿ.ಸಿ. ಮಂಜುನಾಥ್ ನೇತೃತ್ವದಲ್ಲಿ ಅದ್ಧೂರಿ ಅಲಂಕಾರದೊAದಿಗೆ ಆಂಜ ನೇಯನ ವಿವಿಧ ಕಲಾಕೃತಿಗಳನ್ನೊ ಳಗೊಂಡು ಆಕರ್ಷಿಸಿತು.

ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿಯಿಂದ ಸಮಿತಿಯ ಅಧ್ಯಕ್ಷರಾದ ಜಗದೀಶ್ ನೇತೃತ್ವದಲ್ಲಿ ನಡೆದ ಮಂಟಪ ಮೆರವಣಿಗೆಯಲ್ಲಿ ಸಾಗಿ ಗಣಪತಿ ದೇವಾಲಯ ಬಳಿ ಬಂದು ನಂತರ ಹಿಂತಿರುಗಿತು. ಮಾದಾಪಟ್ಟಣ ಗ್ರಾಮದಿಂದ ಪ್ರವೀಣ್, ಗೋಪಾಲ್ ಸರ್ಕಲ್, ಬಳಿಯ ಗಜಾನನ ಯುವಕ ಸಂಘದ ವತಿಯಿಂದ ಸುನಿಲ್ ನೇತೃತ್ವದಲ್ಲಿ ಮಂಟಪ ಮೆರವಣಿಗೆಯಲ್ಲಿ ಪಾಲ್ಗೊಂ ಡಿತ್ತು. ಜನತಾ ಕಾಲೋನಿ ಬಳಿಯಿಂದ ದ್ವಾರಕಾ ಉತ್ಸವ ಸಮಿತಿ ಆಶ್ರಯದಲ್ಲಿ ಶೈಲೇಶ್ ಅಧ್ಯಕ್ಷತೆಯ ಸಮಿತಿಯ ಮಂಟಪ ಶೋಭಾ ಯಾತ್ರೆಯಲ್ಲಿ ಭಾಗಿಯಾಯಿತು. ಗುಡ್ಡೆಹೊಸೂರು ಬಳಿಯ ವೀರಾಂಜನೇಯ ಸೇವಾ ಸಮಿತಿ ಮಂಟಪ ಶಶಿಕುಮಾರ್ ನೇತೃತ್ವದಲ್ಲಿ ಕೂಡಿಗೆಯ ಹನುಮ ಸೇನಾ ಸೇವಾ ಸಮಿತಿ ಮಂಟಪ ಶಿವಕುಮಾರ್ ನೇತೃತ್ವದಲ್ಲಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದವು. ಒಟ್ಟು ಎಂಟು ಮಂಟಪಗಳು ಕುಶಾಲನಗರದ ಗಣಪತಿ ದೇವಾಲಯ ಬಳಿ ಬಂದು ನೆರೆದವರ ಮನಸೂರೆಗೊಂಡವು.

ಅAದಾಜು ಇಪ್ಪತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರಪೇಟೆ ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ನೆರೆಯ ಪಿರಿಯಾಪಟ್ಟಣ ಹುಣಸೂರು ಅರಕಲಗೂಡು ಮತ್ತಿತರ ಕಡೆಗಳಿಂದ ತಂಡೋಪ ತಂಡವಾಗಿ ಹನುಮ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ದೃಶ್ಯ ಕಂಡುಬAತು.

ದಶಮAಟಪÀಗಳ ಸಮಿತಿ ಅಧ್ಯಕ್ಷ ರಾದ ಎಂ.ಡಿ. ಕೃಷ್ಣಪ್ಪ, ಕಾರ್ಯದರ್ಶಿ ಕೆ.ಎನ್. ದೇವರಾಜ್, ಖಜಾಂಚಿ ಡಿ.ಪಿ. ಗಿರೀಶ್ ಮತ್ತು ತಂಡದ ಸದಸ್ಯರು ದಶಮಂಟಪಗಳ ಸಂಪೂರ್ಣ ಉಸ್ತು ವಾರಿ ವಹಿಸಿದ್ದರು. ವಿವಿಧ ಮಂಟಪ ಗಳ ಜೊತೆ ನೂರಾರು ಮಂದಿ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ಕುಶಾಲನಗರ ಕಾರು ನಿಲ್ದಾಣದಲ್ಲಿ ಜೇಂಕಾರ್ ಆರ್ಕೆಸ್ಟಾç ವತಿಯಿಂದ ಸಂಗೀತ ಸಂಜೆ ನಡೆಯಿತು. ಡಿವೈ ಎಸ್‌ಪಿ ಆರ್.ವಿ. ಗಂಗಾಧರಪ್ಪ ಸಂಗೀತ ಸಂಜೆಗೆ ಚಾಲನೆ ನೀಡಿದರು.

ಶೋಭಾಯಾತ್ರೆ ಸಂದರ್ಭ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನವಿದ್ದ ಕಾರಣ ಪೊಲೀಸರು ಮತ್ತು ಸ್ವಯಂಸೇವಕರು ಯಾವುದೇ ತೊಡಕು ಉಂಟಾಗದAತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ದೃಶ್ಯ ಕಂಡುಬAತು. ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮ ರಾಜನ್ ಅವರು ಕುಶಾಲನಗರದಲ್ಲಿ ಮೊಕ್ಕಾಂ ಹೂಡಿದ್ದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಉಪಸ್ಥಿತಿಯಲ್ಲಿ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮತ್ತು ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಎಂಟು ಪೊಲೀಸ್ ವೃತ್ತ ನಿರೀಕ್ಷಕರು, ೩೫ಕ್ಕೂ ಅಧಿಕ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳು, ವಿವಿಧ ಠಾಣೆಗಳ ಎಎಸ್‌ಐಗಳು ಸೇರಿದಂತೆ ಸುಮಾರು ೪೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆಯಕಟ್ಟಿನ ಜಾಗಗಳಲ್ಲಿ ಹತ್ತಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಐದು ಸಶಸ್ತç ದಳ ಮತ್ತು ಎರಡು ಕೆಎಸ್ ಆರ್‌ಪಿ ತುಡಕಡಿಗಳನ್ನು ಭದ್ರತೆಗೆ ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸ ಲಾಗಿತ್ತು. ರಾತ್ರಿ ೧೦.೩೦ ಕ್ಕೆ ಹನುಮ ಜಯಂ ತಿಯ ಸಮಾರೋಪ ಸಮಾರಂಭ ನಡೆಯಿತು. -ಚಂದ್ರಮೋಹನ್