ಸಿದ್ದಾಪುರ, ಡಿ. ೨೪: ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಕಂಬೀರAಡ ನಂದಾ ಗಣಪತಿ ಎಂಬವರ ಕಾಫಿ ತೋಟದಲ್ಲಿ ಕಾಡಾನೆಗಳು ರಾತ್ರಿ ವೇಳೆ ದಾಂಧಲೆ ನಡೆಸುತ್ತಿವೆ. ಫಸಲಿರುವ ನೂರಾರು ಅಡಿಕೆ ಮರಗಳನ್ನು ಎಳೆದು ಹಾಕಿ ತುಳಿದು ಧ್ವಂಸಗೊಳಿಸಿವೆ.

ಫಸಲಿರುವ ಕಾಫಿ ಗಿಡಗಳನ್ನು ನಾಶಗೊಳಿಸಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ನಂದಾ ಗಣಪತಿ ತಿಳಿಸಿದ್ದಾರೆ.

ಒಂಟಿ ಸಲಗದ ದಾಂಧಲೆ: ಕರಡಿಗೋಡು ಗ್ರಾಮದಲ್ಲಿ ಬೃಹತ್ ಗಾತ್ರದ ಒಂಟಿ ಸಲಗವೊಂದು ಸಂಜೆಯಾಗುತ್ತಲೇ ಕಾಫಿ ತೋಟದೊಳಗೆ ಸುತ್ತಾಡುತ್ತಾ ದಾಂಧಲೆ ನಡೆಸುತ್ತಿದ್ದು ಭಯದ ವಾತಾವರಣ ಮೂಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

-ವಾಸು