ಮಡಿಕೇರಿ, ಡಿ. ೨೨: ಪ್ರಸಕ್ತ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಷ್ಟಿçÃಯ ವಿದೇಶಿ ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ. ೩೧ ರವರೆಗೆ ಅವಧಿ ವಿಸ್ತರಿಸಲಾಗಿದೆ. ಪೋಷಕರ ವಾರ್ಷಿಕ ಆದಾಯ ರೂ. ೬ ಲಕ್ಷಗಳ ಒಳಗಿದ್ದಲ್ಲಿ ೨ ವರ್ಷಗಳ ಕೋರ್ಸ್ಗೆ ಗರಿಷ್ಠ ರೂ.೨೦ ಲಕ್ಷ ಹಾಗೂ ರೂ. ೬ ಲಕ್ಷದಿಂದ ರೂ. ೧೫ ಲಕ್ಷಗಳ ಒಳಗಿದ್ದಲ್ಲಿ ೨ ವರ್ಷಗಳ ಕೋರ್ಸ್ಗೆ ರೂ. ೧೦ ಲಕ್ಷಗಳ ಗರಿಷ್ಠ ಮಿತಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಇಲಾಖಾ ವೆಬ್ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದು. ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗಪಡಿಸಿ ಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್ ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಹಾಗೂ ಕಚೇರಿ ದೂ. ೦೮೨೭೨-೨೨೫೫೨೮, ಮಾಹಿತಿ ಕೇಂದ್ರ, ಮಡಿಕೇರಿ ೦೮೨೭೨-೨೨೦೨೧೪ನ್ನು ಸಂಪರ್ಕಿ ಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ. ದಿವಾಕರ ತಿಳಿಸಿದ್ದಾರೆ.