ಮAಥರ್ ಇಂಗಿತ
ಕುಶಾಲನಗರ, ಡಿ. ೨೨: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಸರ್ಕಾರಿ ಇಂಜಿನಿಯ ರಿಂಗ್ ಕಾಲೇಜಿನಲ್ಲಿ ನವೀಕರಿಸ ಬಹುದಾದ ಇಂಧನ ಸಂಪನ್ಮೂಲಗಳ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂಥರ್ ಗೌಡ, ಮುಗಿದು ಹೋಗುತ್ತಿರುವ ಫಾಸಿಲ್ ಇಂಧನ ಮೂಲಗಳಿಗೆ ಪರ್ಯಾಯವಾಗಿ ನಾವು ಪರಿಸರ ಸ್ನೇಹಿ ನವೀಕರಿಸಬಹುದಾದ ಬದಲಿ ಇಂಧನ ಮೂಲಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಜಿಲ್ಲೆಯ ಹಾರಂಗಿ ಅಣೆಕಟ್ಟಿನ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ ಶಾಸಕರು, ಇದರಿಂದ ನೀರಾವರಿ ಇಲಾಖೆಯ ವಿದ್ಯುತ್ ಬಿಲ್ ಪಾವತಿಯನ್ನು ತಪ್ಪಿಸುವ ಮೂಲಕ ಹಾರಂಗಿ ಅಣೆಕಟ್ಟು ಕಚೇರಿ ಬಳಕೆ ಜೊತೆಗೆ ಸ್ಥಳೀಯವಾಗಿ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಿ ಪವರ್ ಗ್ರಿಡ್ಗೂ ನೀಡಬಹುದು ಎಂದರು.
ಇAಧನ ಸಂರಕ್ಷಣೆ ಮತ್ತು ಶಕ್ತಿಯ ಸಮರ್ಥ ಬಳಕೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಇಂತಹ ಕಾರ್ಯಾಗಾರ ಸಹಕಾರಿಯಾಗಿದೆ.
ನಾವು ಪರಿಸರ ಸ್ನೇಹಿ ಇಂಧನ ಬಳಕೆ ಮಾಡುವ ಮೂಲಕ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ದಿಟ್ಟ ಹೆಜ್ಜೆ ಇಡಬೇಕು. ನಾವು ನಮ್ಮ ಮನೆ, ಕಟ್ಟಡಗಳು, ಕಚೇರಿ ಹೀಗೆ ಲಭ್ಯವಿರುವ ಸ್ಥಳಗಳ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನಾಲ್ಗಳನ್ನು ಅಳವಡಿಸುವ ಮೂಲಕ ನಮ್ಮ ಸ್ವಂತ ಬಳಕೆಗೆ ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳಿಂದ ನಾವು ಎದುರಿಸುತ್ತಿರುವ ಪ್ರವಾಹ ಹಾಗೂ ಬರ ಪರಿಸ್ಥಿತಿಯ ಸವಾಲುಗಳನ್ನು ಎದುರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು ಎಂದು ಶಾಸಕ ಡಾ. ಮಂಥರ್ ಗೌಡ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಸತೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಇಂಧನ ಬೇಡಿಕೆ ಹೆಚ್ಚುತ್ತಿರುವ ಕಾರಣದಿಂದಾಗಿ ಭವಿಷ್ಯತ್ತಿನ ದೃಷ್ಠಿಯಿಂದ ನಾವು ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿ ಸೌರಶಕ್ತಿ, ಪವನ ಶಕ್ತಿ, ಮತ್ತಿತರ ನವೀಕರಿಸಬಹುದಾದ ಇಂಧನ ಮೂಲಗಳ ಸದ್ಬಳಕೆ ಮಾಡಬೇಕಿದೆ ಎಂದರು. ಇಂಧನ ಸಂರಕ್ಷಣೆ ಮತ್ತು ಶಕ್ತಿಯ ಸಮರ್ಥ ಬಳಕೆಯ ಕಡೆಗೆ ಸಮಾಜ ದಲ್ಲಿ ನಿರಂತರವಾಗಿ ಬದಲಾವಣೆ ಯನ್ನು ತರಲು ಹಾಗೂ ಇಂಧನ ದಕ್ಷತೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಾಗಾರ ಗಳು ಸಹಕಾರಿಯಾಗಿವೆ ಎಂದರು. ನವೀಕರಿಸಬಹುದಾದ ಇಂಧನ ಶಕ್ತಿಯ ಮಹತ್ವ ಹಾಗೂ ಸೌರಶಕ್ತಿ ಭವಿಷ್ಯದ ಶಕ್ತಿ ಕುರಿತು ಉಪನ್ಯಾಸ ನೀಡಿದ ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಇಂದು ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಸಂಶೋಧನೆ ನಡೆದಿದ್ದು, ಮಾಲಿನ್ಯ ರಹಿತ ಶಕ್ತಿ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಭೂ ಉಷ್ಣ ಶಕ್ತಿ, ಜೈವಿಕ ಶಕ್ತಿ ಹಾಗೂ ಎಥನಾಲ್ನಂತಹ ಶಕ್ತಿ ಉತ್ಪಾದನೆ ಮಾಡುವ ಮೂಲಕ ದೇಶದಲ್ಲಿ ಇಂಧನ-ಶಕ್ತಿ ಸದ್ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಪರಿಸರ ಸ್ನೇಹಿ ಇಂಧನ ಮೂಲಗಳಾದ ನವೀಕರಿಸಬಹುದಾದ ಸೌರಶಕ್ತಿ, ಪವನ ಶಕ್ತಿ, ಜೈವಿಕ ಇಂಧನ, ಭೂ ಶಕ್ತಿ ಬಳಕೆಗೆ ನಾವು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು. ‘ಶಕ್ತಿ ಸಂರಕ್ಷಣೆ’ ಕುರಿತು ಮೈಸೂರು ವಿದ್ಯಾವರ್ಧಕ ಇಂಜಿನಿಯರಿAಗ್ ಕಾಲೇಜಿನ ಸಿವಿಲ್ ಇಂಜಿನಿಯರಿAಗ್ ವಿಭಾಗದ ಸಹ ಪ್ರಾಧ್ಯಾಪಕಿ ಬಿ.ಎಸ್. ಶಿಲ್ಪಾ ಉಪನ್ಯಾಸ ನೀಡಿದರು. ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಬಿ. ಪರಶಿವಮೂರ್ತಿ, ಡಾ. ಎಸ್. ರಂಗನಾಥ್, ಪ್ರೊ. ಟಿ. ಪವಿತ್ರ, ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಜಿ. ಶ್ರೀಹರ್ಷ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಕಾಲೇಜಿನ ಅಧೀಕ್ಷಕರಾದ ಹೆಚ್.ಎ. ರೂಪ ಕಾರ್ಯಕ್ರಮ ನಿರ್ವಹಿಸಿದರು. ಸಹ ಪ್ರಾಧ್ಯಾಪಕಿ ರಾಧಿಕಾ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ ಎಂ.ಎಸ್. ಸುರೇಶ್ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ. ಹೇಮಲತಾ ಮತ್ತು ಗ್ರಂಥಪಾಲಕರಾದ ಡಾ. ಸತ್ಯಶ್ರೀ ಅತಿಥಿ ಪರಿಚಯ ಮಾಡಿದರು.
ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕುರಿತು ವಸ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಸಂರಕ್ಷಣೆ ಕುರಿತು ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು. ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಕುರಿತು ವಸ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.