*ಮೂರ್ನಾಡು, ಡಿ. ೨೨: ಮೌಲ್ಯಯುತವಾದ ಶಿಕ್ಷಣದಿಂದಾಗಿ ಉತ್ತಮ ಶಾಲೆಗಳು ನಿರ್ಮಾಣಗೊಳ್ಳುತ್ತವೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಸ್ಪೂರ್ತಿ ನೀಡುವಂತಾಗಬೇಕು ಎಂದು ಬೆಂಗಳೂರು ಶ್ರೀ ಕಾವೇರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೆಮೀ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯ ಪೋಷಕರ ದಿನಾಚರಣೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಶಿಕ್ಷಣ ಎಂಬುದು ಜಗತ್ತನ್ನು ನೋಡಲು ಒಂದು ಕಿಟಕಿ, ಆದುದರಿಂದ ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.
ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಕಲಿಯುವುದಿಲ್ಲ; ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನೂ ಅವರ ಅಭಿರುಚಿಗೆ ಹೊಂದಿಕೊAಡು ಮನದಟ್ಟಾಗುವಂತೆ ಪಾಠ ಮಾಡುವ ನಿಟ್ಟಿನಲ್ಲಿ ಮಾರುತಿ ವಿದ್ಯಾಸಂಸ್ಥೆಯ ಪ್ರಯತ್ನ ಬಹುದೊಡ್ಡದು ಎಂದು ಅವರು ಶ್ಲಾಘಿಸಿದರು.
ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಂಡAಡ ಕೆ. ಅಪ್ಪಚ್ಚು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಉಪಾದ್ಯಕ್ಷ ಚೇಂದ್ರಿಮಾಡ ಗಿಲ್ ಸೋಮಯ್ಯ, ಕಾರ್ಯದರ್ಶಿ ಬಡುವಂಡ ಅರುಣ್ ಅಪ್ಪಚ್ಚು, ನಿರ್ದೇಶಕರಾದ ಬಡುವಂಡ ನೀಲಮ್ಮ, ಮುಂಡAಡ ನೀಲಮ್ಮ ಮುತ್ತಣ್ಣ, ಚೇಂದ್ರಿಮಾಡ ರೂಪಾ ಸೋಮಯ್ಯ, ಬಡುವಂಡ ಕನ್ನು ಅಪ್ಪಚ್ಚು, ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸುಮಿತ ಎಂ.ಎA., ಉಪ ಪ್ರಾಂಶುಪಾಲೆ ಹೇಮಾವತಿ ಎಂ.ಜಿ. ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ವಿಭಾಗದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಪ್ರಾರ್ಥನೆ, ನಿರೂಪಣೆ ಹಾಗೂ ವಂದನಾರ್ಪಣೆ ಶಾಲಾ ವಿದ್ಯಾರ್ಥಿಗಳಿಂದ ಜರುಗಿತು.