ಮಡಿಕೇರಿ, ಡಿ. ೨೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ, ಐರನ್ ಸೈಟ್ ಶೂರ‍್ಸ್ ಹಾಗೂ ಕಾವೇರಿ ಯುವಕ ಸಂಘ, ಮಾಯಮುಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ ಹಾಗೂ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

.೨೨ರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುತ್ತರಿರ ನಂಜಪ್ಪ ಪ್ರಥಮ, ಬಡುವಂಡ ಶ್ಲೋಕ್ ಸುಬ್ಬಯ್ಯ ದ್ವಿತೀಯ, ಬಾಚಮಂಡ ಲವ ತೃತೀಯ, .೨೨ರ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಳ್ಳಿಚಂಡ ವರುಣ್ ಪ್ರಥಮ, ನೆಲ್ಲೀರ ಧನು ದ್ವಿತೀಯ, ಕೆಲೇಟಿರ ಪವಿತ ತೃತೀಯ, ೧೨ ಬೋರ್ ತೆಂಗಿನಕಾಯಿ ಸ್ಪರ್ಧೆಯಲ್ಲಿ ಬಡುವಂಡ ದೇವಯ್ಯ ಪ್ರಥಮ, ಕೆಚೀರ ಶಬ್ದ್ ಬೆಳ್ಯಪ್ಪ ದ್ವಿತೀಯ, ಕೊಣಿಯಂಡ ಚಿಣ್ಣಪ್ಪ ತೃತೀಯ ಸ್ಥಾನ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಆಪಟ್ಟೀರ ಟಾಟೂ ಮೊಣ್ಣಪ್ಪ ವಹಿಸಿ ಮಾತನಾಡುತ್ತಾ, ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ಗಳು ಹೆಚ್ಚೆಚ್ಚು ನಡೆಯುವುದರಿಂದ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ. ಸಂಘ - ಸಂಸ್ಥೆಗಳು ಗ್ರಾಮೀಣ ಮಟ್ಟದ ಕ್ರೀಡಾಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡುವಲ್ಲಿ ಕ್ರೀಡಾ ಇಲಾಖೆ ಸಹಕರಿಸುವಂತಾಗಲಿ ಎಂದರು.

ಸಭೆಯಲ್ಲಿ ಐರನ್ ಲೆಗ್ಗ್ ಶೂರ‍್ಸ್ ಅಧ್ಯಕ್ಷ ಆಪಟ್ಟೀರ ಅಯ್ಯಪ್ಪ, ಪ್ರಮುಖರಾದ ಶಾಂತೆಯAಡ ಮಧು ಮಾಚಯ್ಯ, ಕೊಣಿಯಂಡ ಸಂಜು, ಆಪಟ್ಟೀರ ಶ್ಯಾಂ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.