ಪಾಲಿಬೆಟ್ಟ, ಡಿ. ೨೨: ಹುಣಸೂರಿನ ಎಪಿಎಂಸಿ ಬಳಿ ತಾ.೧೯ರ ಮಂಗಳವಾರ ರಾತ್ರಿ ಕೊಲೆಯಾದ ವ್ಯಕ್ತಿಯನ್ನು ಗುರುವಾರ ಹುಣಸೂರು ನಗರ ಪೊಲೀಸರು ಪಾಲಿಬೆಟ್ಟದ ದಿ. ಬಡುವಮಂಡ ಕಾಳಪ್ಪನವರ ಪುತ್ರ ವಿನು ಚಂಗಪ್ಪ (೫೨) ಎಂದು ಪತ್ತೆ ಹಚ್ಚಿದ್ದಾರೆ.
ಮೃತ ಚಂಗಪ್ಪನಿಗೆ ಪಾಲಿಬೆಟ್ಟದಿಂದ ೨ ಕಿ.ಮೀ. ದೂರದ ಮೇಕೂರು ಎಂಬಲ್ಲಿ ಕಾಫಿ ತೋಟದ ಮಧ್ಯದಲ್ಲಿ ಮನೆಯೊಂದು ಇದ್ದು, ತೋಟವನ್ನು ಬೇರೆಯವರಿಗೆ ಭೋಗ್ಯಕ್ಕೆ ನೀಡಿ ಬೆಂಗಳೂರಿನಲ್ಲಿ ವಾಸವಿದ್ದರು. ಕೆಲವು ವರ್ಷಗಳಿಂದ ಇವರ ಪತ್ನಿ ಸವಿತಾ ಕೂಡ ಇವರನ್ನು ತೊರೆದಿದ್ದರು.
ಮೃತ ಚಂಗಪ್ಪ ಡಿ.೧೯ರಂದು ಅವರ ಅಕ್ಕನ ಗಂಡ ಮಂಡೇಪAಡ ಭರತ್ ಅವರ ಸಾವಿಗೆ ಬಾಡಿಗೆ ಕಾರಿನಲ್ಲಿ ತನ್ನ ಸ್ನೇಹಿತ ಸಂತೋಷ್ ಡುಬೆಯೊಂದಿಗೆ ತೆರಳಿ ಅಂತ್ಯಕ್ರಿಯೆ ಮುಗಿಸಿ, ಪಾಲಿಬೆಟ್ಟ ಸಮೀಪದ ಅವರ ಮನೆಗೆ ಬಂದು ಕೆಲ ಕಾಲ ಕಳೆದು ವಾಪಸ್ಸು ಬೆಂಗಳೂರಿಗೆ ತೆರಳುವಾಗ ಹುಣಸೂರಿನಲ್ಲಿ ಕೊಲೆಯಾಗಿದ್ದಾರೆ.
ಹುಣಸೂರು ಪೊಲೀಸರಿಗೆ ಡಿ.೨೧ ರಂದು ವಿಚಾರ ತಿಳಿದು ಈ ಸಂಬAಧ ಎಸ್.ಪಿ ಅವರ ಸೂಚನೆ ಮೆರೆಗೆ ಅಡಿಷನಲ್ ಎಸ್ಪಿ ಡಾ.ನಂದಿನಿ ಅವರ ನಿರ್ದೇಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹುಣಸೂರು ನಗರ ಪೊಲೀಸರ ತಂಡ ಮಾಹಿತಿ ಕಲೆಹಾಕಿ ಚಂಗಪ್ಪ ಅವರ ಬೆಂಗಳೂರಿನಲ್ಲಿರುವ ಮನೆಗೆ ತೆರಳಿ ಮೃತರ ಅಣ್ಣನ ಮೊಬೈಲ್ ಸಂಖ್ಯೆಯನ್ನು ಪಡೆದು ಅವರಿಗೆ ಮಾಹಿತಿ ನೀಡಿದಾಗ ಅಣ್ಣ, ಮುತ್ತಣ್ಣ ಹುಣಸೂರಿನ ಶವಾಗಾರಕ್ಕೆ ತೆರಳಿ ತನ್ನ ತಮ್ಮನದೆಂದು ಗುರುತಿಸಿ ಪೊಲೀಸರಿಗೆ ದೃಢಪಡಿಸಿದ್ದಾರೆ.
ಚಂಗಪ್ಪ ಅವರ ಜೊತೆಯಲ್ಲಿದ್ದ ಸ್ನೇಹಿತ ಹಾಗೂ ಬಾಡಿಗೆ ಕಾರಿನ ಚಾಲಕ ಇಬ್ಬರೂ ನಾಪತ್ತೆಯಾಗಿದ್ದಾರೆ. ಹಣಕ್ಕೋಸ್ಕರ ಈ ಕೊಲೆ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಲವು ವರ್ಷಗಳಿಂದ ಸಂತೋಷ್ ಡುಬೆ ಮೃತರ ಸ್ನೇಹಿತನಾಗಿದ್ದು, ಮೃತರ ಎಲ್ಲಾ ವ್ಯವಹಾರಗಳು ಬಲ್ಲವರಾಗಿರುತ್ತಾರೆ. ಚಂಗಪ್ಪ ಕೊಡಗಿಗೆ ಬರುವಾಗ ಸಂತೋಷ್ ಕೂಡ ಅವರೊಂದಿಗೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಚಂಗಪ್ಪನವರ ಮೊಬೈಲ್ ಕಾಣದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮೈಸೂರಿನ ಕೆ.ಆರ್. ಅಸ್ಪತ್ರೆಯಿಂದ ಮೃತ ದೇಹವನ್ನು ಪಡೆದು ಅಣ್ಣ ಮುತ್ತಣ್ಣ ಅಮ್ಮತ್ತಿ ಸಮೀಪದ ಕಾವಾಡಿ ಬಳಿ ಇರುವ ಬಡವಮಂಡ ಕುಟುಂಬದ ಐನ್ ಮನೆ ಬಳಿಯ ಸ್ಮಶಾನದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಚಾಲಕ ಇಬ್ಬರೂ ನಾಪತ್ತೆಯಾಗಿದ್ದಾರೆ. ಹಣಕ್ಕೋಸ್ಕರ ಈ ಕೊಲೆ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಲವು ವರ್ಷಗಳಿಂದ ಸಂತೋಷ್ ಡುಬೆ ಮೃತರ ಸ್ನೇಹಿತನಾಗಿದ್ದು, ಮೃತರ ಎಲ್ಲಾ ವ್ಯವಹಾರಗಳು ಬಲ್ಲವರಾಗಿರುತ್ತಾರೆ. ಚಂಗಪ್ಪ ಕೊಡಗಿಗೆ ಬರುವಾಗ ಸಂತೋಷ್ ಕೂಡ ಅವರೊಂದಿಗೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಚಂಗಪ್ಪನವರ ಮೊಬೈಲ್ ಕಾಣದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮೈಸೂರಿನ ಕೆ.ಆರ್. ಅಸ್ಪತ್ರೆಯಿಂದ ಮೃತ ದೇಹವನ್ನು ಪಡೆದು ಅಣ್ಣ ಮುತ್ತಣ್ಣ ಅಮ್ಮತ್ತಿ ಸಮೀಪದ ಕಾವಾಡಿ ಬಳಿ ಇರುವ ಬಡವಮಂಡ ಕುಟುಂಬದ ಐನ್ ಮನೆ ಬಳಿಯ ಸ್ಮಶಾನದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.