ಗೋಣಿಕೊಪ್ಪಲು, ಡಿ. ೨೨: ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಅವಕಾಶಗಳು ದೊರೆತಲ್ಲಿ ನೈಜ ಪ್ರತಿಭೆಗಳು ಹೊರಹೊಮ್ಮಲು ಅವಕಾಶವಾಗಲಿದೆ.

ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳು ಹೆಚ್ಚಾಗಿ ನಡೆಯುವಂತಾಗಲಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಕರೆ ನೀಡಿದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬ನೇ ವಿಭಾಗದ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಕಾವೇರಿ ಸಂಘದಿAದ ಆಯೋಜನೆಗೊಂಡಿದ್ದ ಹೊನಲು ಬೆಳಕಿನ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕ್ರೀಡೆಗೆ ಬೇಕಾದ ಮೈದಾನಗಳು, ಹೊನಲು ಬೆಳಕಿನ ವ್ಯವಸ್ಥೆ, ಬಾಸ್ಕೆಟ್ ಬಾಲ್ ಮೈದಾನಗಳು ಸೇರಿದಂತೆ ಕ್ರೀಡೆಗೆ ಅಗತ್ಯವಿರುವ ಶಾಶ್ವತ ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಇದರಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆೆ. ಕ್ರೀಡಾ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಿರುವ ತರಬೇತುದಾರರು ಕೂಡ ಲಭ್ಯವಾಗಬೇಕು. ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿರುವ ಟರ್ಫ್ ಮೈದಾನದಂತೆ ಇನ್ನೊಂದು ಮೈದಾನ ನಿರ್ಮಾಣ ಮಾಡಲು ಯೋಜನೆ ತಯಾರಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಕ್ರೀಡೆಗಾಗಿ ಮಾಡಲಾಗುವುದು.

ಕಾವೇರಿ ಸಂಘದ ಅಧ್ಯಕ್ಷ ಶಾಂತೆಯAಡ ಮಧುಮಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೇಜರ್ ಚೋನಿರ ಗಾಯಾನ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನ್ನಕ್ಕಮನೆ ಸೌಮ್ಯಬಾಲು, ಸದಸ್ಯರಾದ ಬಿ.ಎನ್. ಪ್ರಕಾಶ್, ರತಿ ಅಚಪ್ಪ, ಸೇರಿದಂತೆ ಗಣ್ಯರು ಮಾತನಾಡಿದರು.

ವೇದಿಕೆಯಲ್ಲಿ ಕಾವೇರಿ ಸಂಘದ ಕಾರ್ಯದರ್ಶಿಗಳಾದ ರಫೀಕ್ ಹಾಗೂ ಸುನೀಲ್, ಉಪಾಧ್ಯಕ್ಷೆ ಧನಲಕ್ಷಿö್ಮ, ಖಜಾಂಚಿ ಚೋನಿರ ಸತ್ಯ, ನಿರ್ದೇಶಕರುಗಳಾದ ಸೌಮ್ಯ ಕೃಷ್ಣ, ಬಿಂದು, ಶೈಲಜ, ಭವಿಷ್ಯತ್, ಪ್ರವೀಣ್, ರಜಾಕ್, ಮುಕ್ತಾರ್ ಬೇಗ್ ಸೇರಿದಂತೆ ಇನ್ನಿತರರ ಪ್ರಮುಖರು ಉಪಸ್ಥಿತರಿದ್ದರು. ಶೋಭಾ ಶ್ರೀನಿವಾಸ್ ಪ್ರಾರ್ಥಿಸಿ, ಕಾವೇರಿ ಪ್ರಶಾಂತ್ ನಿರೂಪಿಸಿ, ರಫೀಕ್ ಸ್ವಾಗತಿಸಿ ಮಧುಮಾಚಯ್ಯ ವಂದಿಸಿದರು. ಬಡಾವಣೆಯ ನಿವಾಸಿಗಳಿಗೆ ಮಹಿಳಾ ಹಾಗೂ ಪುರುಷ ವಿಭಾಗದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬಡಾವಣೆ ನಿವಾಸಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಸಕ ಎ.ಎಸ್. ಪೊನ್ನಣ್ಣನವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.