ಕುಶಾಲನಗರ, ಡಿ. ೨೧: ಉಡುಪಿ ಶ್ರೀ ಪುತ್ತಿಗೆ ಪರ್ಯಾಯೋತ್ಸವ ೨೦೨೪-೨೬ ಇದೇ ಬರುವ ಜನವರಿ ೨೦೨೪ ರಲ್ಲಿ ನಡೆಯಲಿದೆ. ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಡಗೂಡಿ ಸರ್ವಜ್ಞ ಸಿಂಹಾಸನವನ್ನು ಆರೋಹಣ ಮಾಡುವ ಮೂಲಕ ಚತುರ್ಥ ಬಾರಿಗೆ ಶ್ರೀ ಕೃಷ್ಣ ಪೂಜಾ ಪರ್ಯಾಯದೀಕ್ಷಿತರಾಗುವ ಸಂಭ್ರಮದ ನಡುವೆ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಇದೀಗ ಕಳೆದ ಒಂದು ವರ್ಷದಿಂದ ಕೊಡಗು ಜಿಲ್ಲೆಯ ಧಾರ್ಮಿಕ ನಗರಿ ಎಂದೇ ಪ್ರಖ್ಯಾತಿಗೊಳ್ಳುತ್ತಿರುವ ಕುಶಾಲನಗರದಲ್ಲಿ ಕಂಡುಬರುತ್ತಿದೆ. ಬಹುತೇಕ ಭಕ್ತರಲ್ಲಿ ಭಗವದ್ಗೀತೆಯ ಬೆಳಕು ಚೆಲ್ಲುವ ಕಾಯಕ ಯಶಸ್ವಿಯಾಗಿ ನಡೆಯುತ್ತಿರುವುದನ್ನು ಗಮನಿಸಬಹುದು.

ಅಂತರರಾಷ್ಟಿçÃಯ ಮಟ್ಟದಲ್ಲಿ ಭಗವಂತನ ವಿಶೇಷ ಪ್ರಾರ್ಥನೆ ಮೂಲಕ ಕೃಷ್ಣಪ್ರಜ್ಞೆಯ ಜಾಗೃತಿ ಮೂಡಿಸುವುದರೊಂದಿಗೆ ಮಾನವ - ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾಯಕ ಮತ್ತೆ ಈ ಭಾಗದಲ್ಲಿ ಬಹುತೇಕರು ಕೈಗೆತ್ತಿಕೊಂಡಿದ್ದಾರೆ.

ಭಗವದ್ಗೀತೆಯ ಕುರಿತು ಅನೇಕ ದಾರ್ಶನಿಕರು ಸಂತ ಶ್ರೇಷ್ಠ ಜ್ಞಾನಗಳ ಸಹಿತ ಸಾಹಿತ್ಯ ಲೋಕದ ದಿಗ್ಗಜರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡುವುದರೊಂದಿಗೆ ಶ್ರೀ ಕೃಷ್ಣನ ಲೀಲಾಮೃತವನ್ನು ಕೊಂಡಾಡಿದ್ದಾರೆ.

ಈ ಭಗವದ್ಗೀತೆಯ ಕುರಿತು ಈಗ ಉಡುಪಿ ಶ್ರೀ ಕೃಷ್ಣ ಸನ್ನಿಧಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೂರದೃಷ್ಟಿಯ ಸಂಕಲ್ಪ ಮಾಡಿ ತಮ್ಮ ೨೦೨೪ ನೇ ವರ್ಷದ ಪರ್ಯಾಯ ಚಾತುರ್ಮಾಸ್ಯ ಪರ್ವಕಾಲದಲ್ಲಿ ೨೦೨೬ ರ ಅವಧಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ ನೀಡಿ ದೇಶ ವಿದೇಶಗಳಲ್ಲಿ ಭಕ್ತ ಕೋಟಿಗೆ ಅಪೂರ್ವ ಅವಕಾಶ ಕಲ್ಪಿಸಿದ್ದಾರೆ.

ಎಲ್ಲಾ ಕಾಲಕ್ಕೂ ಮನುಕುಲದ ಏಳಿಗೆಗೆ ಅದೊಂದು ಅದ್ಭುತ ಅನುಭವ ನೀಡುವ ಗ್ರಂಥವಾಗಿ ಭಗವದ್ಗೀತೆ ಎಲ್ಲೆಡೆ ಲೋಕ ವಿಖ್ಯಾತಗೊಂಡಿದೆ.

ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ವಿವಿಧೆಡೆ ಭಗವದ್ಗೀತೆಯ ಬರವಣಿಗೆ ಯಜ್ಞ ಆರಂಭಗೊAಡು ಅಂದಾಜು ೧೫ ತಿಂಗಳು ಕಳೆದಿದೆ.

ಕುಶಾಲನಗರದ ಮನೆ ಮನೆಗಳಲ್ಲಿ ಭಗವದ್ಗೀತೆ ಅಭಿಯಾನ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಅಭಿಯಾನದ ಚಟುವಟಿಕೆಗಳಿಗೆ ವಿಶೇಷ ಸಮಿತಿಯೊಂದು ಜಿಲ್ಲಾ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಣಿಜ್ಯ ನಗರಿ ಕುಶಾಲನಗರ ಇದರ ಪ್ರಮುಖ ಕೇಂದ್ರವಾಗಿದೆ.

ಉಡುಪಿಯ ಪುತ್ತಿಗೆ ಶ್ರೀಗಳು ಸಂಕಲ್ಪ ಮಾಡಿದಂತೆ ಮುಂದಿನ ಎರಡು ವರ್ಷಗಳ ಕಾಲ ಮಿತಿಯಲ್ಲಿ ಸರ್ವ ಜನಾಂಗದ ಆಸಕ್ತರು ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದೆ ಲಿಖಿತ ರೂಪದಲ್ಲಿ ೭೦೦ ಗೀತೆಯ ಶ್ಲೋಕಗಳನ್ನು ಬರೆದು ಶ್ರೀಮಠಕ್ಕೆ ತಲುಪಿಸುವ ಯೋಜನೆ ಇದಾಗಿದೆ.

ಈ ಸಂಬAಧ ಆಸಕ್ತರುಗಳಿಗೆ ಭಗವದ್ಗೀತೆಯ ಮುದ್ರಿತ ಹಾಗೂ ಬರವಣಿಗೆಗೆ ಬೇಕಾದ ಪುಸ್ತಕವನ್ನು ಶ್ರೀ ಮಠವೇ ತಲುಪಿಸಿಕೊಡುತ್ತಿದೆ.

ಈ ಯಜ್ಞದಲ್ಲಿ ಪಾಲ್ಗೊಳ್ಳುವ ಜನರಿಗೆ ರೂ. ೨೫೮ ಮೊತ್ತ ಪಡೆಯುವುದರೊಂದಿಗೆ ಗೀತಾ ಲೇಖನ ಆರಂಭಿಸಲು ಸೂಚನೆ ದೊರೆತಿದೆ.

ಭಗವದ್ಗೀತೆ ಲೇಖನ ಬರೆದ ಗೀತೆ ಪ್ರತಿಯನ್ನು ಉಡುಪಿ ಶ್ರೀ ಕೃಷ್ಣನಿಗೆ ಚಾತುರ್ಮಾಸ್ಯ ಪರ್ವಕಾಲದಲ್ಲಿ ಸಮರ್ಪಿಸಿ ಪ್ರಸಾದದೊಂದಿಗೆ ಪುಸ್ತಕವನ್ನು ಬರೆದವರಿಗೆ ಹಿಂತಿರುಗಿಸುವ ಯೋಜನೆ ಇದಾಗಿದ್ದು, ಅದನ್ನು ಅವರವರ ಮನೆಯ ದೇವರ ಕೋಣೆಯಲ್ಲಿ ಇರಿಸುವ ಭಕ್ತಿಯ ಕಾಯಕವಾಗಿದೆ.

ನಾವು ಬರೆಯುವ ಭಗವದ್ಗೀತೆ ಭವಿಷ್ಯದಲ್ಲಿ ಮನೆಯಲ್ಲಿ

ಶ್ರೀ ಕೃಷ್ಣ ಮತ್ತು ಹಿರಿಯರ ಸ್ಮರಣೆಯೊಂದಿಗೆ ಅಧ್ಯಯನ ಪೂಜಾ ಗ್ರಂಥವಾಗಿ ಬೆಳಗಬೇಕೆನ್ನುವುದು

ಶ್ರೀ ಸುಗುಣೇಂದ್ರತೀರ್ಥರ ಸಂದೇಶವಾಗಿದೆ.

ಜಗತ್ತಿನ ಮಾರ್ಗದರ್ಶಕ ಗ್ರಂಥವಾದ ಭಗವದ್ಗೀತೆಯ

ವಿಶೇಷ ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪ. ಪೂ. ಶ್ರೀ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಪ್ರಿಯ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿ ಮತ್ತು ಮಾರ್ಗದರ್ಶನದೊಂದಿಗೆ, ಅವರ ಐತಿಹಾಸಿಕ ಪರ್ಯಾಯ ಪೂರ್ವ ಸಂಚಾರ- ದಕ್ಷಿಣ ಭಾರತ ಪರಿಕ್ರಮ ಯಾತ್ರೆ - ಸಂದರ್ಭದಲ್ಲಿ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರ ಸಮಿತಿ, ಕುಶಾಲನಗರ, ಕೊಡಗು ಜಿಲ್ಲೆ, ಸಂಯೋಜಿಸುವ, ೧೦೦೮ಕ್ಕೂ ಅಧಿಕ ಯಜ್ಞಕರ್ತರ ಭಾಗವಹಿಸುವಿಕೆಯೊಂದಿಗೆ, ಕೊಡಗು ಜಿಲ್ಲಾ ವ್ಯಾಪ್ತಿಯ ಬೃಹತ್ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರದಾನ ಸಮಾರಂಭ ವಿಶ್ವಾದ್ಯಂತದ ಕೋಟಿ ಭಕ್ತರ ಕೈಯಿಂದ ಭಗವದ್ಗೀತಾ ಶ್ಲೋಕಗಳನ್ನು ಬರೆಸಿ, ಶ್ರೀ ಶ್ರೀಗಳ ಮೂಲಕ ಉಡುಪಿ ಕೃಷ್ಣನಿಗೆ ಅರ್ಪಿಸಿ, ಪುನರಪಿ ಪ್ರಸಾದ ರೂಪವಾಗಿ ಸ್ವೀಕರಿಸಿ, ನಮ್ಮ ಮನೆಯ ದೇವರ ಕೋಣೆಯಲ್ಲಿ ಶಾಶ್ವತವಾಗಿ ಇರಿಸಿಕೊಂಡು, ಮುಂದಿನ ಪೀಳಿಗೆಗೆ ಗೀತೆಯ ಮೌಲ್ಯಗಳನ್ನು ಹಸ್ತಾಂತರಿಸುವ, ಪೂಜ್ಯ ಶ್ರೀಪಾದರ, ಮಹೋನ್ನತ ಜಾಗತಿಕ ಧಾರ್ಮಿಕ ಸಂಕಲ್ಪ.

ಸAಸ್ಥಾನ ಪೂಜಾ

ಸಾಕ್ಷಾತ್ ಶ್ರೀಮಧ್ವಾಚಾರ್ಯರೇ ಶ್ರೀಮದುಪೇಂದ್ರ ತೀರ್ಥ ಪೀಠದ ಮೂಲಯತಿಗಳಿಗೆ ಕರುಣಿಸಿದ, ಸುಮಾರು ೭೦೦ಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದ ಪಟ್ಟದ ದೇವರಾಗಿದ್ದುಕೊಂಡು ಪ್ರತಿನಿತ್ಯ, ಅವಿಚ್ಛಿನ್ನವಾಗಿ ಷೋಡಪೋಪಚಾರ ಪೂಜೆ ಸ್ವೀಕರಿಸಿಕೊಂಡು

(ಮೊದಲ ಪುಟದಿಂದ) ಅವಶ್ಯಕತೆಯನ್ನು ಮುಂದಿನ ಪೀಳಿಗೆಗೆ ತಿಳಿ ಹೇಳುವುದು ಪ್ರತಿಯೊಬ್ಬರ ಕೆಲಸವಾಗಿದೆ ಎಂದು ಸುಗುಣೇಂದ್ರÀ ತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಹೇಳುತ್ತಾರೆ. ಆಧ್ಯಾತ್ಮಿಕವಾಗಿ ತಮ್ಮನ್ನು ಆಕರ್ಷಿಸಿ ಜೀವನ ಪರಿವರ್ತನೆ ಮಾಡಿದ ಪರಿಯನ್ನು ಎಲ್ಲೆಡೆ ಜನರಿಗೆ ವಿವರಿಸುತ್ತಾರೆ.

ಖಿನ್ನತೆ, ಮಾನಸಿಕ ಕ್ಷೆÆÃಭೆ ಮೊದಲಾದ ಮನೋವ್ಯಾಧಿಗಳು ದಿನೇ ದಿನೇ ಚಿಕ್ಕ ಮಕ್ಕಳಲ್ಲಿಯೂ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಗೀತೆಯೊಂದೇ ಅದಕ್ಕೆ ಸೂಕ್ತ ಪರಿಹಾರ ಎನ್ನುತ್ತಾರೆ ಶ್ರೀಗಳು.

ದೇಶವಿದೇಶ ಸುತ್ತಾಡಿದ ಶ್ರೀಗಳು ನೆರೆಯ ತೆಲಂಗಾಣ, ಮಹಾರಾಷ್ಟç ಹಾಗೂ ರಾಜ್ಯದ ವಿವಿಧೆಡೆ ತೆರಳಿ ಭಗವದ್ಗೀತೆ ಯಜ್ಞದ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಧಾರ್ಮಿಕ ಅಭಿಯಾನ ಮುಂದುವರಿದಿದೆ.

ಪೂರ್ಣಾವಧಿ ಗೀತ ಪ್ರಚಾರಕರು ಸಂಕರ್ಷಣ ಪ್ರಮುಖರೂ ಆಗಿರುವ ಉಡುಪಿಯ ಪುತ್ತಿಗೆ ಮಠದಲ್ಲಿ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿದ್ವಾನ್ ರಮಣ ಆಚಾರ್ ಅವರು ಈ ಅಭಿಯಾನದ ಹಿನ್ನೆಲೆಯಲ್ಲಿ ಉತ್ತರ ಭಾರತದ ಎಲ್ಲೆಡೆ ಓಡಾಡಿ ಒಂದು ಕೋಟಿ ಪುಸ್ತಕಗಳನ್ನು ಬರೆಯುವ ಯಜ್ಞ ಕಾಯಕ ಯಶಸ್ವಿಯಾಗುವಂತೆ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದಾರೆ.

ಕುಶಾಲನಗರಕ್ಕೆ ಹಲವು ಬಾರಿ ಭೇಟಿ ನೀಡಿ ಸ್ಥಳೀಯರ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿರುವ ರಮಣ ಆಚಾರ್ ಈ ಅಭಿಯಾನ ಯಶಸ್ವಿ ಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

೨೦೨೬ರ ಪರ್ಯಾಯದಲ್ಲಿ ಅಮೆರಿಕಾದ ಸಾವಿರ ಜನ ಭಕ್ತಾದಿಗಳು ಭಗವದ್ಗೀತೆಯನ್ನು ಕಂಠಪಾಠ ಮಾಡಿ ಅದನ್ನು ಉಡುಪಿ ಕ್ಷೇತ್ರದಲ್ಲಿ ಒಪ್ಪಿಸುವ ಸಂಕಲ್ಪ ಮಾಡಿರುವುದಾಗಿ ರಮಣ ಆಚಾರ್ಯ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥರು ಒಂದು ಕೋಟಿ ಜನರಿಂದ ಗೀತೆ ಬರೆಸುವ ಸಂಕಲ್ಪ ತೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ

ವಿಶ್ವಗೀತಾ ಪರ್ಯಾಯ ಹೆಸರಿನಲ್ಲಿ ಜನರಲ್ಲಿ ಆಧ್ಯಾತ್ಮಿಕ ಜ್ಞಾನ ಬೆಳೆಸಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಉಂಟಾಗುವ ನಂಬಿಕೆ ಇದೆ ಎನ್ನುತ್ತಾರೆ ಅವರು. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಭಗವದ್ಗೀತೆ ಯಜ್ಞ ಕಾರ್ಯಕ್ಕೆ ಮೂಲ ಕುಶಾಲನಗರ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಪದ್ಮ ಪುರುಷೋತ್ತಮ್, ರಮಾ ವಿಜಯೇಂದ್ರ, ಲಕ್ಷಿö್ಮ ಮಂಜುನಾಥ್ ಎಂಬವರುಗಳು ಪ್ರಮುಖ ಕಾರಣ ಎನ್ನುವುದನ್ನು ಇಲ್ಲಿ ನೆನಪಿಸಬೇಕಾಗಿದೆ. ಒಂದು ಬಾರಿ ಉಡುಪಿಗೆ ಭಜನಾ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭ ಮಠದ ಪ್ರಮುಖರು ಇವರ ಧಾರ್ಮಿಕ ಆಸಕ್ತಿಯನ್ನು ಗಮನಿಸುವುದರೊಂದಿಗೆ ಈ ಯಜ್ಞದ ಕಾರ್ಯ ಭಾರವನ್ನು ಒಪ್ಪಿಸಿದ್ದರು.

ಯಶಸ್ವಿಯಾಗಿ ಮಾಡಿದ ಈ ಕಾರ್ಯದ ನಡುವೆ ಕುಶಾಲನಗರದ ಧಾರ್ಮಿಕ ಸಮಾಜ ಸೇವಕರಾದ ಜನಾರ್ದನ್ ವಸಿಷ್ಠ ಅವರು ಈ ಕಾಯಕಕ್ಕೆ ಕೈಜೋಡಿಸುವುದರೊಂದಿಗೆ ಸ್ಥಳೀಯ ಗಣ್ಯರ ಸಮಿತಿ ಒಂದನ್ನು ರಚಿಸುವಲ್ಲಿ ಯಶಸ್ವಿಯಾದರು.

ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಒಂದು ರಚನೆಯಾಗಿ ಆ ಮೂಲಕ ಕುಶಾಲನಗರ ಸೇರಿದಂತೆ ವಿವಿಧೆಡೆ ಇದುವರೆಗೆ ಒಟ್ಟು ೨೪೪೩ ಭಗವದ್ಗೀತೆ ಪುಸ್ತಕಗಳ ಬರವಣಿಗೆ ಕಾಯಕ ಮುಂದುವರಿದಿದೆ.

ಜೊತೆಗೆ ಸಮಿತಿಯ ಸದಸ್ಯರು ಉಚಿತ ಪುಸ್ತಕಗಳನ್ನು ಕೂಡ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಯ ಕೆಲವು ಆಸಕ್ತರಿಗೆ ಉಚಿತವಾಗಿ ನೀಡಿದ್ದಾರೆ.

೨೦೨೬ ಪರ್ಯಾಯದ ಅವಧಿಯ ಒಳಗಾಗಿ ಕೊಡಗು ಜಿಲ್ಲೆಯಿಂದ ೧೦೮೦೦ ಸಂಖ್ಯೆಯ ಭಗವದ್ಗೀತೆ ಪುಸ್ತಕಗಳನ್ನು ಬರೆದು ಮಠಕ್ಕೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದು ಸಮಿತಿಯ ಪ್ರಮುಖರಾದ ಜನಾರ್ಧನ್ ವಸಿಷ್ಠ ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ..

ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ. ದಿನೇಶ್ ಅವರು ಕೂಡ ಹಲವು ಉಚಿತ ಪುಸ್ತಕಗಳನ್ನು ನೀಡುವ ಮೂಲಕ ಈ ಅಭಿಯಾನಕ್ಕೆ ಶಕ್ತಿ ತುಂಬಿದ್ದಾರೆ. ಗಣಪತಿ ದೇವಾಲಯ ಸೇರಿದಂತೆ ನಗರದ ಎಲ್ಲಾ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಈ ಅಭಿಯಾನದ ಬಗ್ಗೆ ಮಾಹಿತಿ ನೀಡುವ ಕೆಲಸ ಮುಂದುವರಿದಿದೆ.

ಅಭಿಯಾನದಲ್ಲಿ ಸಣ್ಣಪುಟ್ಟ ಮಕ್ಕಳು ಕೂಡ ಪಾಲ್ಗೊಂಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಈ ಸಂಬAಧ ಸಮಿತಿಯ ಸಭೆಗಳು ನಡೆದಿದ್ದು, ಅಭಿಯಾನ ಧನಾತ್ಮಕವಾಗಿ ಮುಂದುವರೆದಿದೆ ಎನ್ನುತ್ತಾರೆ ಕೋಟಿ ಗೀತಾ ಲೇಖನ ಯಜ್ಞ ಸಮಿತಿಯ ಜಿಲ್ಲಾ ಸಂಚಾಲಕರಾದ ಎಸ್.ಕೆ. ಸತೀಶ್.

ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಕಳೆದ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಚಾಲನೆ ನೀಡಲಾಗಿ ಶ್ರೀಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಅಭಿಯಾನದ ಕೊಡಗು ಜಿಲ್ಲಾ ಗೌರವಾಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್, ಸಂಚಾಲಕರುಗಳಾಗಿ ‘ಶಕಿ’್ತ ಸಂಪಾದಕರಾದ ಜಿ. ಚಿದ್ವಿಲಾಸ್, ಶ್ರೀಮತಿ ರಮಾ, ಜನಾರ್ಧನ್ ಭಟ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಯೋಗ ಗುರು ಮಧುಸೂದನ್ ನೇತೃತ್ವದಲ್ಲಿ ಕುಶಾಲನಗರ ತಾಲೂಕು ಸಂಚಾಲಕರಾಗಿ ಬಿ.ಆರ್. ನಾಗೇಂದ್ರ ಪ್ರಸಾದ್, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ದಾಮೋದರ್, ವೀರಾಜಪೇಟೆ ತಾಲೂಕು ಸಂಚಾಲಕರಾಗಿ ಮಂಜುನಾಥ ಮಲ್ಯ, ಪೊನ್ನಂಪೇಟೆ ತಾಲೂಕು ಸಂಚಾಲಕರಾಗಿ ಬೋಪಣ,್ಣ ಮಡಿಕೇರಿ ತಾಲೂಕು ಸಂಚಾಲಕರಾಗಿ ರಂಜಿತ್ ಅವರನ್ನು ನೇಮಿಸುವುದರೊಂದಿಗೆ ಜಿಲ್ಲೆಯಲ್ಲಿ ಅಭಿಯಾನಕ್ಕೆ ಚಾಲನೆ ದೊರೆತಿದೆ.

ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಡಾ. ಸುಗುಣೇಂದ್ರ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಕ್ಷಿಣ ಭಾರತ ಪರಿಕ್ರಮ ಯಾತ್ರೆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡುವ ಧಾರ್ಮಿಕ ಕಾರ್ಯಕ್ರಮ ಈ ತಿಂಗಳ ೨೬ ಮತ್ತು ೨೭ ರಂದು ಕುಶಾಲನಗರದಲ್ಲಿ ನಡೆಯಲಿದೆ.

ಕೋಟಿ ಗೀತಾ ಲೇಖನ ಯಜ್ಞ ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ೧೦೦೮ಕ್ಕೂ ಅಧಿಕ ಯಜ್ಞಕರ್ತರ ಭಾಗವಹಿಸುವಿಕೆ ಯೊಂದಿಗೆ ಕೊಡಗು ಜಿಲ್ಲಾ ವ್ಯಾಪ್ತಿಯ ಬೃಹತ್ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರದಾನ ಸಮಾರಂಭ ನಡೆಯಲಿದೆ.

ಸುಮಾರು ೭೦೦ ವರ್ಷಕ್ಕೂ ಅಧಿಕ ಪುರಾತನವಾದ ಪಟ್ಟದ ದೇವರಾಗಿದ್ದುಕೊಂಡು ಪ್ರತಿನಿತ್ಯ ಪೂಜೆ ಸ್ವೀಕರಿಸಿಕೊಂಡು ಬಂದ ಉಡುಪಿ ಸಂಸ್ಥಾನದ ವಿಶೇಷವಾದ ಬೆಳ್ಳಿಯ ತೊಟ್ಟಿಲಿನಲ್ಲಿ ದೇವರಿಗೆ ಪೂಜೆ ಸೇವೆ ಶಯನೋತ್ಸವ ನಡೆಯಲಿದೆ. ಇದೇ ಸಂದರ್ಭ ಶ್ರೀ ಗುರುಗಳ ಪಾದಪೂಜೆ, ಸಂಸ್ಥಾನ ಪೂಜೆ ಕೂಡ ನಡೆಯುವುದು.

ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಕಾರ್ಯಕ್ರಮದಲ್ಲಿ ೧೦೮೦೦ ಆಸಕ್ತರನ್ನು ಶ್ರೀಗಳ ಸಮಕ್ಷಮ ಸಂಕಲ್ಪ ತೊಡುವ ಕಾರ್ಯಕ್ರಮ ಕೂಡ ನಡೆಯಲಿದೆ.

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಲ್ಲಾ ಸಮಿತಿಗಳ ಸಮನ್ವಯ ಪ್ರಮುಖರಾದ ಜನಾರ್ದನ ವಸಿಷ್ಠ, ಎಸ್.ಕೆ. ಸತೀಶ್, ರಮಾ ವಿಜಯೇಂದ್ರ, ಜಿ. ಚಿದ್ವಿಲಾಸ್ ಅವರ ನೇತೃತ್ವದಲ್ಲಿ ನಡೆಯಲಿದೆ.

ಉಪ ಸಮಿತಿಗಳನ್ನು ರಚಿಸಲಾಗಿದ್ದು, ದೇವರ ಸನ್ನಿಧಿ ಮತ್ತು ಪೂಜಾ ಕಾರ್ಯಕ್ರಮಗಳನ್ನು ಕುಶಾಲನಗರದ ಎಂ.ಕೆ. ದಿನೇಶ್, ಅಮೃತ್ ರಾಜ್, ಪುಂಡರಿಕಾಕ್ಷ, ಶಾಂತಿಲಾಲ್ ಜೈನ್, ಗುರುರಾಜ್ ಮತ್ತು ಚಿ.ನಾ. ಸೋಮೇಶ್ ಅವರ ತಂಡಕ್ಕೆ ವಹಿಸಲಾಗಿದೆ.

ಅರ್ಚಕರ ಸೇವೆಗೆ ಕುಶಾಲನಗರದ ಉದ್ಯಮಿಗಳಾದ ಎಸ್. ರಾಜಶೇಖರ್, ಮಧುಸೂದನ್, ವಿಜಯೇಂದ್ರ, ನಾಗೇಂದ್ರಬಾಬು, ಚಂದ್ರಹಾಸ್ ಭಟ್ ಅವರ ತಂಡವನ್ನು ನಿಯೋಜಿಸಲಾಗಿದೆ

ರಮಾ ವಿಜಯೇಂದ್ರ, ಪದ್ಮ ಪುರುಷೋತ್ತಮ್, ಲತಾ ರಮೇಶ್, ಸುಲೋಚನಾ, ಕೊಡಗಿನ ಹರ್ಷ, ಅಶೋಕ ಭಟ್ ಹಾಗೂ ಶ್ರೀಮತಿ ಲಲಿತಾ ಅವರ ನೇತೃತ್ವದಲ್ಲಿ ಭಜನಾ ಮಂಡಳಿ ಮತ್ತು ಸ್ತಿçÃಶಕ್ತಿಗಳ ಒಗ್ಗೂಡಿಸುವಿಕೆ ಕಾರ್ಯಕ್ರಮ ಹಂಚಲಾಗಿದೆ.

ಭಕ್ತಾದಿಗಳಿಗೆ ಅತಿಥಿ ಸತ್ಕಾರ ಮತ್ತು ಆಸನ ವ್ಯವಸ್ಥೆಗೆ ಸ್ಥಳೀಯರಾದ ದೇವರಾಜ, ರಾಜೇಶ್, ಮುನಿಸ್ವಾಮಿ, ಓಬಲ ರೆಡ್ಡಿ, ಜಿ.ಎಲ್. ನಾಗರಾಜ ಅವರ ತಂಡ ನಿಯೋಜಿಸಲಾಗಿದೆ. ಭಗವದ್ಗೀತಾ ಪುಸ್ತಕ ವಿತರಣೆ ಜವಾಬ್ದಾರಿಯನ್ನು ಕುಶಾಲನಗರದ ಲಕ್ಷಿö್ಮ ಮಂಜುನಾಥ್, ಲಕ್ಷಿö್ಮ ಶ್ರೀನಿವಾಸ್, ಕವಿತಾ, ಚಕ್ಕೆರ ಗಣಪತಿ, ಸುಬ್ರಮಣ್ಯ, ಜನಾರ್ಧನ್ ಭಟ್ ಅವರಿಗೆ ವಹಿಸಲಾಗಿದೆ

ಶ್ರೀಗಳ ಪಾದಪೂಜೆ, ತೊಟ್ಟಿಲು ಪೂಜೆ ಹಾಗೂ ಹಣ ನಿರ್ವಹಣೆಗಾಗಿ ಬಿ.ಆರ್. ನಾಗೇಂದ್ರ ಪ್ರಸಾದ್, ಎಸ್.ಕೆ. ಸತೀಶ್, ಕೆ.ಆರ್. ರಾಜಶೇಖರ್, ಅಮೃತ್ ರಾಜ್, ರಂಗಸ್ವಾಮಿ, ರಾಮದಾಸ್, ಪುಂಡರಿಕಾಕ್ಷ, ಉದಯಕುಮಾರ್, ಉಮಾ ಶಂಕರ್, ಶರವಣ ಕುಮಾರ್, ಚಕ್ರಪಾಣಿ ಅವರಿಗೆ ವಹಿಸಲಾಗಿದೆ.

ಸ್ವಾಗತ ಸಮಿತಿಯಲ್ಲಿ ಚಂದ್ರಶೇಖರ್, ಬೋಸ್ ಮೊಣ್ಣಪ್ಪ, ಶರವಣಕುಮಾರ್, ನಾಗೇಗೌಡ, ಪದ್ಮಪುರುಷೋತ್ತಮ್, ಗುರುರಾಜ್ ಅಮ್ಮತ್ತಿ, ಊಟೋಪಚಾರ ವ್ಯವಸ್ಥೆಗೆ ಹೆಚ್.ಎಂ. ಚಂದ್ರು, ನಂಜುAಡ ಸ್ವಾಮಿ, ಪ್ರವೀಣ್, ಸುರೇಶ್ ಕಣಿವೆ, ರಾಜೇಶ್, ರಾಜೀವ್, ವೇಣು, ಮಂಜುನಾಥ್ ಮಲ್ಯ ಮತ್ತು ಪ್ರಚಾರ ಸಮಿತಿಯನ್ನು ಚಂದ್ರಮೋಹನ್ ಮತ್ತು ವನಿತಾ ಚಂದ್ರಮೋಹನ್ ಅವರ ನೇತೃತ್ವದ ತಂಡಕ್ಕೆ ವಹಿಸಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯ ಬೃಹತ್ ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರಧಾನ ಸಮಾರಂಭ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ.

ಡಿಸೆAಬರ್ ೨೬ರಂದು ಸಾಯಂಕಾಲ ನಾಲ್ಕು ಗಂಟೆಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಕುಶಾಲನಗರ ಗಣಪತಿ ದೇವಾಲಯ ಬಳಿ ಆಗಮಿಸಲಿದ್ದು, ಅಲ್ಲಿಂದ ಸಾಂಪ್ರದಾಯಿಕವಾಗಿ ಬರಮಾಡಿ ಕೊಂಡು ನಂತರ ಪೂರ್ಣ ಕುಂಭ ಕಳಸದೊಂದಿಗೆ ಮಹಿಳೆಯರು, ಭಕ್ತಾದಿಗಳು ರಥ ಬೀದಿಯ ಮೂಲಕ ಕಾರ್ಯಕ್ರಮ ನಡೆಯುವ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಸಾಗಲಿದ್ದಾರೆ..

ಈ ಸಂದರ್ಭ ರಥ ಬೀದಿಯ ಉದ್ದಕ್ಕೂ ಪ್ರತಿ ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ರಸ್ತೆ ಉದ್ದಕ್ಕೂ ಅಲಂಕಾರ ಮಾಡಲಾಗುವುದು ಎಂದು ಸಮಿತಿಯ ಪ್ರಮುಖರು ಮಾಹಿತಿ ನೀಡಿದ್ದಾರೆ.

ವಿಶ್ವದಾದ್ಯಂತ ಕೋಟಿ ಭಕ್ತರ ಕೈಯಿಂದ ಭಗವದ್ಗೀತಾ ಶ್ಲೋಕ ಗಳನ್ನು ಬರೆಸುವ ಮೂಲಕ ಉಡುಪಿ ಕೃಷ್ಣನಿಗೆ ಅರ್ಪಿಸಿ ಪುನರಪಿ ಪ್ರಸಾದ ರೂಪವಾಗಿ ಸ್ವೀಕರಿಸಿ ಭಕ್ತಾದಿಗಳ ಮನೆಯ ದೇವರ ಕೋಣೆಯಲ್ಲಿ ಶಾಶ್ವತವಾಗಿ ಇರಿಸಿ ಕೊಂಡು ಮುಂದಿನ ಪೀಳಿಗೆಗೆ ಗೀತೆಯ ಮೌಲ್ಯಗಳನ್ನು ಹಸ್ತಾಂತರಿಸುವ ಪೂಜ್ಯ ಶ್ರೀಪಾದರ ಮಹೋನ್ನತ ಜಾಗತಿಕ ಧಾರ್ಮಿಕ ಸಂಕಲ್ಪಕ್ಕೆ ಕೊಡಗು ಜಿಲ್ಲೆಯ ಧಾರ್ಮಿಕ

ನಗರಿ ಕುಶಾಲನಗರ ಸಿದ್ಧಗೊಂಡಿದೆ.

-ಚAದ್ರಮೋಹನ್ ಎಂ.ಎನ್.