ವೀರಾಜಪೇಟೆ, ಡಿ. ೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜ ಪೇಟೆ, ಮಹಿಳಾ ಜ್ಞಾನವಿಕಾಸ ಕೇಂದ್ರ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ "ಮಹಿಳೆ ಮತ್ತು ವರ್ತಮಾನದ ಬಿಕ್ಕಟ್ಟುಗಳು" ವಿಷಯಾಧಾರಿತ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಇತ್ತೀಚೆಗೆ ನಡೆಯಿತು.

ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀಮತ್ ಸ್ವಾಮಿ ಧರ್ಮನಾಥನಂದ ಮಹಾರಾಜ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನವಿತ್ತರು. ಮತ್ತೋರ್ವ ಸ್ವಾಮೀಜಿಗಳಾದ ದಯಾಸಾಗರಾನಂದ ಮಹಾರಾಜರು ಕೂಡ ಈ ಸಂದರ್ಭ ಹಾಜರಿದ್ದರು.

ಕಾರ್ಯಕ್ರಮದಲ್ಲಿ "ಮಹಿಳೆ ಮತ್ತು ವರ್ತಮಾನದ ಬಿಕ್ಕಟ್ಟುಗಳು, ವಿಷಯಾಧಾರಿತವಾಗಿ ವಿಚಾರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಿಐಟಿ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಶ್ಮಿತಾ ಅವರು ಮಾಹಿತಿ ನೀಡಿ ಮಹಿಳೆಯು ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಅಕ್ಕನಾಗಿ ಪ್ರತಿಯೊಂದು ಹಂತದಲ್ಲೂ ಒಂದು ಕುಟುಂಬದ ಬೆಳವಣಿಗೆಗೆ ಸಹಕಾರಿ. ಅಂತಹ ಮಹಿಳೆ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾಳೆ. ಸಮಾಜದಲ್ಲಿ ಶೋಷಣೆಗೆ ಒಳಗಾಗದೆ ಯಾವ ರೀತಿ ಬದುಕಬೇಕು ಮತ್ತು ಮನೆಯಲ್ಲಿ ಮಕ್ಕಳೊಂದಿಗೆ, ಕುಟುಂಬಸ್ಥರೊAದಿಗೆ ಯಾವ ರೀತಿ ಬೆರೆಯಬೇಕು ಎಂಬುದರ ಬಗ್ಗೆ ವಿವರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಿಐಟಿ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಶ್ಮಿತಾ ಅವರು ಮಾಹಿತಿ ನೀಡಿ ಮಹಿಳೆಯು ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಅಕ್ಕನಾಗಿ ಪ್ರತಿಯೊಂದು ಹಂತದಲ್ಲೂ ಒಂದು ಕುಟುಂಬದ ಬೆಳವಣಿಗೆಗೆ ಸಹಕಾರಿ. ಅಂತಹ ಮಹಿಳೆ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾಳೆ. ಸಮಾಜದಲ್ಲಿ ಶೋಷಣೆಗೆ ಒಳಗಾಗದೆ ಯಾವ ರೀತಿ ಬದುಕಬೇಕು ಮತ್ತು ಮನೆಯಲ್ಲಿ ಮಕ್ಕಳೊಂದಿಗೆ, ಕುಟುಂಬಸ್ಥರೊAದಿಗೆ ಯಾವ ರೀತಿ ಬೆರೆಯಬೇಕು ಎಂಬುದರ ಬಗ್ಗೆ ವಿವರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ರಂಗೋಲಿ ಸ್ಪರ್ಧೆ ಮತ್ತು ಹೂಗುಚ್ಛ ತಯಾರು ಮಾಡಿಕೊಂಡು ಬಂದ ಸದಸ್ಯರುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತುಂಬಲು ವಿವಿಧ ಜ್ಞಾನವಿಕಾಸ ಕೇಂದ್ರದ ಸದಸ್ಯರು ಸ್ಟಾಲ್‌ಗಳನ್ನು ಅಳವಡಿಸಿ ತಮ್ಮ ಅಭಿವೃದ್ಧಿಯ ಸಂಕೇತವನ್ನು ಪ್ರಚುರಪಡಿಸಿದರು. ಈ ಸಂದರ್ಭ ವೀರಾಜಪೇಟೆ ತಾಲೂಕಿನ ಯೋಜ ನಾಧಿಕಾರಿ ದಿನೇಶ್ ಬಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವೀರಾಜಪೇಟೆ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ ಆರ್., ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಇದ್ದರು. ಮಹಿಳಾ ಸಬಲೀಕರಣದ ವಿಶಿಷ್ಟ ಕಾರ್ಯಕ್ರಮದಲ್ಲಿ ತಾಲೂಕಿನ ಸಾವಿರಕ್ಕೂ ಅಧಿಕ ಸದಸ್ಯರುಗಳು ಪಾಲ್ಗೊಂಡಿದ್ದರು.