ಗೋಣಿಕೊಪ್ಪ ವರದಿ, ಡಿ. ೨೧: ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಯೋಜನೆಯ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ಪಾವತಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿಯಮ ವಿರೋಧಿಸಿ ರೈತ ಸಂಘದ ವತಿಯಿಂದ ಗೋಣಿಕೊಪ್ಪ ಚೆಸಾಂ್ಕ ಉಪ ವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ೧೦ ಹೆಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಲ್ಲಿ ಕಾಫಿ ಬೆಳೆಗಾರರು ಬಿಲ್ ಪಾವತಿಸಿದ ನಂತರ ಅವರ ಖಾತೆಗಳಿಗೆ ಡಿಬಿಟಿ ಮೂಲಕ ಮರು ಪಾವತಿಸುವ ನಿಯಮ ಹಿಂಪಡೆಯಬೇಕು ಎಂದು ಪಟ್ಟು ಹಿಡಿದರು.
ಯಾವುದೇ ಷರತ್ತಿಲ್ಲದೇ, ಸಂಪೂರ್ಣ ಉಚಿತಗೊಳಿಸುವಂತೆ ಆಗ್ರಹಿಸಲಾಯಿತು. ಸರ್ಕಾರದ ಡಿಬಿಟಿ ಆದೇಶ ಪತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಬಿಲ್ ಪಾವತಿ ಮಾಡುವಂತೆ ಆದೇಶ ಹೊರಡಿಸಿ, ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಸರಕಾರವೇ ಬಿಲ್ ಪಾವತಿಸಲಿ ಎಂದು ಆಗ್ರಹಿಸಿದರು.
ಸಂಚಾಲಕ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರುಗಳಾದ ಭವಿ ಕುಮಾರ್, ಇಟ್ಟೀರ ಸಬೀತ, ಅಜ್ಜಮಾಡ ಚಂಗಪ್ಪ, ಅಲೆಮಾಡ ಮಂಜುನಾಥ್, ಮಂಡೇಪAಡ ಪ್ರವೀಣ್, ಕಂಬ ಕಾರ್ಯಪ್ಪ, ಕಿಸ ಮಾಚಯ್ಯ, ತೀತರಮಾಡ ರಾಜ ಕರುಂಬಯ್ಯ, ಚೆಪ್ಪುಡೀರ ಕಾರ್ಯಪ್ಪ, ಚೊಟ್ಟೆಕಾಳಪಂಡ ಮನು, ರಾಯ್ ಮಾದಪ್ಪ, ಚೆಕ್ಕೇರ ಕಾಳಯ್ಯ ಇದ್ದರು.