ವೀರಾಜಪೇಟೆ, ಡಿ. ೨೧: ಕ್ರಿಸ್ಮಸ್ ದೇವರ ಹಬ್ಬವಾಗಿದ್ದು, ಯೇಸು ಕ್ರಿಸ್ತರ ಜನನದ ಸಂಕೇತವನ್ನು ತೋರಿಸುತ್ತದೆ. ಜಗತ್ತಿಗೆ ಶಾಂತಿಯ ಸಂದೇಶ ಸಾರುವ ಹಬ್ಬವೇ ಕ್ರಿಸ್ಮಸ್ ಹಬ್ಬವಾಗಿದೆ ಎಂದು ಸಂತ ಅನ್ನಮ್ಮ ಪಿ.ಯು. ಕಾಲೇಜು ಪ್ರಾಂಶುಪಾಲ ರೆ.ಫಾ. ಮದಲೈಮುತ್ತು ಹೇಳಿದರು.
ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನಲ್ಲಿ ನಡೆದ ಕ್ರಿಸ್ಮಸ್ ಆಚರಣೆ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಲೋಕ ಕಲ್ಯಾಣಕಾಗಿ ಯೇಸು ಕ್ರಿಸ್ತರ ಜನನವಾಯಿತು. ಕ್ರಿಸ್ಮಸ್ ಹಬ್ಬವು ಎಲ್ಲರಲ್ಲಿ ಶಾಂತಿ ನೆಮ್ಮದಿಯನ್ನು ಹೊತ್ತು ತರಲಿ ಎಂದು ಶುಭ ಹಾರೈಸಿದರು.
ಸೆಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಪ್ರತಿಯೊಂದು ಹಬ್ಬವು ತನ್ನದೇ ಆದ ಸಂದೇಶವನ್ನು ನೀಡುತ್ತದೆ. ಭಾರತದಲ್ಲಿ ಆಚರಿಸುವ ಹಬ್ಬಗಳು ಸಾಮಾನ್ಯವಾಗಿ ಒಟ್ಟಾಗಿ ಆಚರಿಸುವುದರಿಂದ ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವಕ್ಕೆ ಪೂರಕವಾಗಿದೆ. ಸಮಾನತೆ, ಸಹಬಾಳ್ವೆ, ರಾಷ್ಟç ಪ್ರೇಮ ಬೆಳೆಯಲಿ ಎಂದು ತಿಳಿಸಿದರು.
ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಂತಿ, ಪ್ರೀತಿ, ಭ್ರಾತೃತ್ವ ಕ್ರಿಸ್ಮಸ್ ಹಬ್ಬದ ಸಂದೇಶಗಳಾಗಿವೆ. ಯೇಸು ಕ್ರಿಸ್ತರು ಜನಿಸಿದ ಪುಣ್ಯಕ್ಷಣ ಇದಾಗಿದೆ. ವಿಶ್ವಾದ್ಯಂತ ಆಚರಿಸಲ್ಪಡುವ ಈ ಹಬ್ಬವು ಇಡೀ ವಿಶ್ವದಲ್ಲಿ ಸುಖ ಶಾಂತಿಯನ್ನು ಮೂಡಿಸಲಿ. ಕ್ರೋಧ, ಹಿಂಸೆಗಳು ಕೊನೆಗೊಂಡು ಪರಸ್ಪರ ಅನ್ಯೋನ್ಯತೆ ನೆಲೆಸಲಿ ಎಂದರು.
ಈ ಸಂದರ್ಭ ಕರ್ನಾಟಕ ಕ್ರೆöÊಸ್ತ ಯುವ ಘಟಕಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಕ್ಯಾರೋಲ್ ಗಾಯನ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಉಪನ್ಯಾಸಕರಾದ ವಿವೇಕ್ ನಿರೂಪಿಸಿ, ಮೋನಿಕಾ ವಂದಿಸಿದರು. ಈ ಸಂದರ್ಭ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ಪದವಿ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತದನಂತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.