ಮಡಿಕೇರಿ, ಡಿ. ೨೧: ಬಿಳುಗುಂದ, ನಲ್ವತ್ತೋಕ್ಲು, ಹೊಸಕೋಟೆ ಗ್ರಾಮದ ಬೋಂದ ಮುನ್ನೂರೊಕ್ಕಡ ಭದ್ರಕಾಳಿ ದೇವಸ್ಥಾನದ ಅಷ್ಟಬಂಧ ಪುನರ್‌ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ ತಾ. ೨೭ ರಿಂದ ೨೯ರವರೆಗೆ ನೆರವೇರಲಿದೆ.

ತಾ. ೨೭ ರಂದು ಸಂಜೆ ೬ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪ್ರಸಾದ ಶುದ್ಧಿ, ಪುಣ್ಯಾಹ ವಾಚನ, ವಾಸ್ತು ರಕ್ಷೆÆÃಘ್ನ, ಜಲಾಧಿವಾಸ ಹಾಗೂ ಮಹಾಪೂಜೆ ನೆರವೇರಲಿದೆ. ತಾ. ೨೮ ರಂದು ಬೆಳಿಗ್ಗೆ ೬.೩೦ ಗಂಟೆಗೆ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವನ್ಯಾಸ ಹೋಮ, ಮಹಾಪೂಜೆ ನಡೆಯಲಿದೆ. ಸಂಜೆ ೬ ಗಂಟೆಯಿAದ ದುರ್ಗಾ ನಮಸ್ಕಾರ ಪೂಜೆ, ಬಿಂಬ ಶುದ್ಧಿ, ಶಯ್ಯಾಧಿವಾಸ, ಮಹಾಪೂಜೆ ಹಾಗೂ ಕಲಶ ಪ್ರತಿಷ್ಠೆ ನೆರವೇರಲಿದೆ. ತಾ. ೨೯ ರಂದು ಬೆಳಿಗ್ಗೆ ೫ ಗಂಟೆಯಿAದ ಗಣಪತಿ ಹೋಮ, ಪುಣ್ಯಾಹವಾಚನ, ಬ್ರಹ್ಮ ಕಲಶ ಪೂಜೆ, ೭.೨೨ ನಿಮಿಷಕ್ಕೆ ಧನುರ್ ಲಗ್ನದಲ್ಲಿ ಶ್ರೀ ಭದ್ರಕಾಳಿ ದೇವರ ಪ್ರತಿಷ್ಠೆ, ನ್ಯಾಸಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಫಲ ಮಂತ್ರಾಕ್ಷತೆ ನೆರವೇರಲಿದ್ದು, ಬ್ರಹ್ಮ ಕಲಶೋತ್ಸವದ ೩ ದಿನಗಳು ಬೆಳಿಗ್ಗೆ, ಅಪರಾಹ್ನ ಹಾಗೂ ರಾತ್ರಿ ದಾನಿಗಳಿಂದ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.