ಮಡಿಕೇರಿ, ಡಿ. ೨೧ : ಬಡವರ ಅನುಕೂಲಕ್ಕಾಗಿ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಯಡಿ ಪಡಿತರ (ಅಕ್ಕಿ) ಹೊಂದಿ ಕೊಳ್ಳಲು ಗ್ರಾಹಕರು ಪರದಾಡಬೇ ಕಾದ ಪರಿಸ್ಥಿತಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎದುರಾಗಿದೆ..!
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಹಿಂದಿನ ಬಿಜೆಪಿ ಸರಕಾರ ನೀಡುತ್ತಿದ್ದ ಐದು ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಈಗಿನ ಕಾಂಗ್ರೆಸ್ ಸರಕಾರ ಮುಂದುವರಿಸಿದೆ. ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯ ಬದ ಲಿಗೆ ಗ್ರಾಹಕರ ಖಾತೆಗೆ ರೂ.೩೭ರಂತೆ ಹಣ ಸಂದಾಯ ಮಾಡುತ್ತಿದೆ. ಆದರೆ ಮಡಿಕೇರಿಯಲ್ಲಿರುವ ಪಡಿತರ ವಿತರಣಾ ಕೇಂದ್ರದಲ್ಲಿ ಉಚಿತ ಅಕ್ಕಿ ಯನ್ನು ಪಡೆದುಕೊಳ್ಳಲು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಪರದಾಡ ಬೇಕಾದ ಪರಿಸ್ಥಿತಿ ಗ್ರಾಹಕರದ್ದಾಗಿದೆ.
ಮಡಿಕೇರಿಯ ಮಹದೇವಪೇಟೆ ಯಲ್ಲಿರುವ ಪಡಿತರ ವಿತರಣಾ ಕೇಂದ್ರದಲ್ಲಿ ದಿನ ನಿತ್ಯ ಗ್ರಾಹಕರು ಪರದಾಡುವ ಪರಿಸ್ಥಿತಿ ಕಾಣಬರು ತ್ತದೆ. ಈ ಪಡಿತರ ಕೇಂದ್ರ ನಡೆಸುತ್ತಿರುವವರಿಗೆ ದೇಚೂರುವಿನ ಲ್ಲಿಯೂ ಒಂದು ಕೇಂದ್ರವಿದೆ. ಇದೀಗ ಇತ್ತೀಚೆಗಷ್ಟೇ ಮಹದೇವಪೇಟೆ ಯಲ್ಲಿರುವ ಮುಸ್ಲಿಂ ಸೊಸೈಟಿಯನ್ನೂ ಕೂಡ ಇವರಿಗೆ ನೀಡಲಾಗಿದೆ. ಈ ಮೂರೂ ಕೇಂದ್ರಗಳಿಗೆ ಒಳಪಡುವ ಗ್ರಾಹಕರು ಒಂದೇ ಕೇಂದ್ರಕ್ಕೆ ಬರಬೇಕಾಗಿರುವದರಿಂದ ಈ ರೀತಿಯ ಸಮಸ್ಯೆ ಎದುರಾಗಿದೆ.
ದೇಚೂರು ಕೇಂದ್ರದಲ್ಲಿ ದೇಚೂರು, ಪುಟಾಣಿನಗರ, ಚೈನ್ ಗೇಟ್, ಬ್ರಾಹ್ಮಣರ ಬೀದಿ ಸೇರಿದಂತೆ ಇತರ ಭಾಗದವರಿಗೆ ಪಡಿತರ ನೀಡಬೇಕಾ ಗಿದೆ. ಎವಿ ಶಾಲೆಯ ಕೇಂದ್ರದಲ್ಲಿ ಮಹದೇವಪೇಟೆ, ಗದ್ದುಗೆ, ಆಜಾದ್ ನಗರ ಸೇರಿದಂತೆ ಇತರ ಭಾಗದವರಿಗೆ ಹಾಗೂ ಮುಸ್ಲಿಂ ಸೊಸೈಟಿಯಲ್ಲಿ ತ್ತದೆ. ಈ ಪಡಿತರ ಕೇಂದ್ರ ನಡೆಸುತ್ತಿರುವವರಿಗೆ ದೇಚೂರುವಿನ ಲ್ಲಿಯೂ ಒಂದು ಕೇಂದ್ರವಿದೆ. ಇದೀಗ ಇತ್ತೀಚೆಗಷ್ಟೇ ಮಹದೇವಪೇಟೆ ಯಲ್ಲಿರುವ ಮುಸ್ಲಿಂ ಸೊಸೈಟಿಯನ್ನೂ ಕೂಡ ಇವರಿಗೆ ನೀಡಲಾಗಿದೆ. ಈ ಮೂರೂ ಕೇಂದ್ರಗಳಿಗೆ ಒಳಪಡುವ ಗ್ರಾಹಕರು ಒಂದೇ ಕೇಂದ್ರಕ್ಕೆ ಬರಬೇಕಾಗಿರುವದರಿಂದ ಈ ರೀತಿಯ ಸಮಸ್ಯೆ ಎದುರಾಗಿದೆ.
ದೇಚೂರು ಕೇಂದ್ರದಲ್ಲಿ ದೇಚೂರು, ಪುಟಾಣಿನಗರ, ಚೈನ್ ಗೇಟ್, ಬ್ರಾಹ್ಮಣರ ಬೀದಿ ಸೇರಿದಂತೆ ಇತರ ಭಾಗದವರಿಗೆ ಪಡಿತರ ನೀಡಬೇಕಾ ಗಿದೆ. ಎವಿ ಶಾಲೆಯ ಕೇಂದ್ರದಲ್ಲಿ ಮಹದೇವಪೇಟೆ, ಗದ್ದುಗೆ, ಆಜಾದ್ ನಗರ ಸೇರಿದಂತೆ ಇತರ ಭಾಗದವರಿಗೆ ಹಾಗೂ ಮುಸ್ಲಿಂ ಸೊಸೈಟಿಯಲ್ಲಿ ಕೊಡುವ ಬಾಡಿಗೆ ಅದಕ್ಕಿಂತಲೂ ಹೆಚ್ಚಾಗುತ್ತಿದೆ.
ನಮಗೆ ಮೊದಲು ಕೊಡುತ್ತಿದ್ದ ಹಾಗೆ ಮಹದೇವಪೇಟೆಯ ಮುಸ್ಲಿಂ ಸೊಸೈಟಿಯಲ್ಲಿಯೇ ಪಡಿತರ ನೀಡುವಂತಾಗಬೇಕೆAಬದು ಆ ವಿಭಾ ಗದ ಗ್ರಾಹಕರದ್ದಾದರೆ, ಇತ್ತ ನಮಗೆ ದೇಚೂರುವಿನಲ್ಲಿಯೇ ಪಡಿತರ ವಿತರಣೆ ಮಾಡಬೇಕು ಎಂಬದು ಈ ವಿಭಾಗದ ಗ್ರಾಹಕರ ಆಗ್ರಹವಾಗಿದೆ.
ಆದರೆ, ಇವರುಗಳ ಬೇಡಿಕೆ ಯನ್ನು ಕೇಳುವವರೇ ಇಲ್ಲ. ಕೇಳಿದರೆ ಎಲ್ಲಿ ಸಿಕ್ಕುವ ಪಡಿತರಕ್ಕೆ ಕತ್ತರಿ ಹಾಕುತ್ತಾರೋ ಅನ್ನೋ ಆತಂಕ ಗ್ರಾಹಕರದ್ದು. ಒಬ್ಬರೇ ಮಾಲೀಕರಿಗೆ ಮೂರು ಕೇಂದ್ರವನ್ನು ಹೇಗೇ ನೀಡಿದರು ಎಂಬದು ಗ್ರಾಹಕರನ್ನು ಕಾಡುತ್ತಿರುವ ಪ್ರಶ್ನೆ..!?