ಅನಿಲ್ ಎಚ್.ಟಿ.

ಮಡಿಕೇರಿ, ಡಿ. ೨೧: ಜಿಲ್ಲೆಯ ಗಡಿಭಾಗವಾದ ಕರಿಕೆಯಲ್ಲಿನ ಪ್ರೌಢಶಾಲೆ ಶೈಕ್ಷಣಿಕ ಕ್ರಾಂತಿಗೆ ಉದಾಹರಣೆಯಾಗಿ ಕಂಗೊಳಿಸುವ ಬೆಳವಣಿಗೆಗೆ ಸಾಕ್ಷಿಯಾಗಿದೆ. ಶಿಕ್ಷಕರ ಕೊರತೆಯಿಂದ ಪಾಡು ಪಡುತ್ತಿದ್ದ ವಿದ್ಯಾರ್ಥಿಗಳ ಪರದಾಟ ಗಮನಿಸಿದ ಸ್ವಯಂಸೇವಾ ಸಂಸ್ಥೆಗಳ ಸಕಾಲಿಕ ನೆರವು ಗಡಿನಾಡ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವಂತಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣದ ಕಲಿಕೆಯನ್ನು ಕೇರಳ ಗಡಿಯಲ್ಲಿರುವ ಕನ್ನಡನಾಡಿನ ಶಾಲೆಯೊಂದಕ್ಕೆ ನೀಡುವ ಮೂಲಕ ಸರ್ಕಾರೇತರ ಸ್ವಯಂಸAಸ್ಥೆಗಳು ಮಾದರಿಯಾಗಿವೆ.

ಕೇರಳ ರಾಜ್ಯದ ಗಡಿಗೆ ಹೊಂದಿಕೊAಡಿರುವ ಕರಿಕೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ೭೦ ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಶಾಲೆಗೆ ಒಬ್ಬರೇ ಒಬ್ಬ ಖಾಯಂ ಶಿಕ್ಷಕರಿದ್ದಾರೆ.

(ಮೊದಲ ಪುಟದಿಂದ) ಉಳಿದಂತೆ ಮಕ್ಕಳಿಗೆ ಪಾಠ ಹೇಳಿಕೊಡಲು ಅತಿಥಿ ಶಿಕ್ಷಕರನ್ನೇ ನಿಯೋಜಿಸಬೇಕಾದ ಅನಿವಾರ್ಯತೆ ಇತ್ತು. ಮೊದಲು ನೂರಾರು ಮಕ್ಕಳು ಈ ಶಾಲೆಗೆ ಬರುತ್ತಿದ್ದರಾದರೂ ಇತ್ತೀಚಿನ ವರ್ಷಗಳಲ್ಲಿ ಪಕ್ಕದ ಕೇರಳ ರಾಜ್ಯದ ಖಾಸಗಿ ಶಾಲೆಗಳು ತಮ್ಮದೇ ಆದ ವಾಹನಗಳನ್ನು ಕರಿಕೆಗೆ ಕಳುಹಿಸಲಾರಂಭಿಸಿದ್ದರಿAದಾಗಿ ಕರ್ನಾಟಕದ ಈ ಕನ್ನಡ ಶಾಲೆ ಬಿಟ್ಟು ಪಕ್ಕದ ಕೇರಳದಲ್ಲಿನ ಶಾಲೆಗಳಿಗೆ ಈ ವ್ಯಾಪ್ತಿಯ ಮಕ್ಕಳು ತೆರಳುತ್ತಿರುವ ಬೆಳವಣಿಗೆ ನಡೆಯಿತು. ಇದರೊಂದಿಗೆ ಶಾಲೆಯಲ್ಲಿದ್ದ ಅನೇಕ ಶಿಕ್ಷಕರು ಬೇರೆ ಬೇರೆ ಕಡೆ ವರ್ಗಾವಣೆಗೊಂಡು ಕರಿಕೆ ಶಾಲೆಗೆ ತೀವ್ರ ರೀತಿಯಲ್ಲಿ ಶಿಕ್ಷಕರ ಅಭಾವ ಕಂಡುಬAತು.

ಖಾಯA ಶಿಕ್ಷಕರನ್ನು ನಿಯೋಜಿಸುವ ಸ್ಥಳೀಯರ ಪ್ರಯತ್ನಕ್ಕೆ ಅನೇಕ ಬಾರಿ ತೊಡಕುಂಟಾಯಿತು. ಅತಿಥಿ ಶಿಕ್ಷಕರನ್ನೇ ನಂಬಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಗಡಿನಾಡ ಸರ್ಕಾರಿ ಶಾಲೆ ಸಿಲುಕಿತ್ತು. ಇವೆಲ್ಲವನ್ನೂ ಗಮನಿಸಿದ ಸರಗೂರು ಮೂಲದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಎಂಬ ಸರ್ಕಾರೇತರ ಸಂಸ್ಥೆಯು ತನ್ನಲ್ಲಿನ ಸಂಪನ್ಮೂಲವನ್ನು ಕರಿಕೆಯಲ್ಲಿನ ಶಾಲೆಗೆ ನೀಡಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿನೂತನ ರೀತಿಯಲ್ಲಿ ಪಾಠ ಹೇಳಿಕೊಡಲು ಮುಂದಾಯಿತು. ಈ ಉದ್ದೇಶಕ್ಕಾಗಿ ಅನ್ವೇಷಣೆ - ನರ್ಸರೀಸ್ ಆಫ್ ಟ್ಯಾಲೆಂಟ್ ಎಂಬ ತನ್ನ ಪ್ರಮುಖ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕರಿಕೆಯ ಸರ್ಕಾರಿ ಶಾಲೆಗೆ ಪ್ರಾಜೆಕ್ಟರ್, ಸ್ಕಿçÃನ್, ಲ್ಯಾಪ್ ಟಾಪ್, ಬೋರ್ಡ್, ಟ್ಯಾಬ್, ಕಂಪ್ಯೂಟರ್ ಟೇಬಲ್, ಕುರ್ಚಿಗಳು, ಲೈಟ್‌ಗಳು, ಬಾಗಿಲು ಸೇರಿದಂತೆ ಮೂಲಸೌಕರ್ಯಗಳನ್ನು ಸುಮಾರು ರೂ. ೪ ಲಕ್ಷ ಅಂದಾಜು ವೆಚ್ಚದಲ್ಲಿ ೧೫ ದಿನಗಳ ಹಿಂದೆ ಕಲ್ಪಿಸಿತು. ಜೊತೆಗೆ ತರಗತಿ ಕೋಣೆಯೊಂದಕ್ಕೆ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಸಫಲವಾಯಿತು.

ಇದೀಗ ಕರಿಕೆ ಸರ್ಕಾರಿ ಶಾಲೆಯು ಆಧುನಿಕ ಸೌಲಭ್ಯಗಳೊಂದಿಗೆ ಕಂಗೊಳಿಸುತ್ತಿದೆ. ಶಾಲೆಯಲ್ಲಿನ ೪ ಅತಿಥಿ ಶಿಕ್ಷಕರು ಪಠ್ಯ ಬೋಧನೆ ಮಾಡುತ್ತಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಪಠ್ಯದ ವಿಚಾರವನ್ನು ಕ್ವಾಲ್ಕೋಂ ಇಂಡಿಯಾ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯವರು ನೀಡಿದ ವಿಡಿಯೋ ಸಿಡಿಗಳಲ್ಲಿ ಅಡಕವಾಗಿರುವ ವಿಷಯಾಧಾರಿತ ಪಠ್ಯ ವಿಚಾರಗಳನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಿ ಹೊಸ ವಿಚಾರಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಕಳೆದ ವರ್ಷ ಕರಿಕೆ ಶಾಲೆಯು ಶೇ.೧೦೦ ರ ಫಲಿತಾಂಶ ಪಡೆದಿದೆ. ಸಾಕಷ್ಟು ಬುದ್ಧಿವಂತ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಖಂಡಿತವಾಗಿಯೂ ಈ ಸಾಲಿನಲ್ಲಿಯೂ ಶೇ.೧೦೦ ರ ಫಲಿತಾಂಶಕ್ಕೆ ಪ್ರಯತ್ನಿಸಿದ್ದೇವೆ. ಒಂದು ಕಡೆ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಪಾಠ ಕಲಿಸಬೇಕೆಂಬ ನಮ್ಮ ಉದ್ದೇಶಕ್ಕೆ ಹಿನ್ನಡೆಯಾದಾಗ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನವರು ನೀಡಿದ ಮೂಲಸೌಕರ್ಯಗಳು, ಆಧುನಿಕ ಪಠ್ಯ ಕ್ರಮದ ತಂತ್ರಜ್ಞಾನ ಕರಿಕೆಯಂಥ ಗಡಿಭಾಗದ ಸರ್ಕಾರಿ ಶಾಲೆಗೆ ವರವಾಗಿ ಪರಿಣಮಿಸಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಪಾಠ ಕಲಿಯಲು ಹೊಸ ಉತ್ಸಾಹ ಬಂದAತಾಗಿದೆ ಎಂದು ಹೆಮ್ಮೆಯಿಂದ ಹೇಳುವರು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಜಿ.ರಾಜಶೇಖರ್.

ಈ ನಡುವೇ ಕೆಲವು ತಿಂಗಳ ಹಿಂದೆ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾಗಿದ್ದ ಎ.ಸೌಮ್ಯ ಪೊನ್ನಪ್ಪ ಅವರ ಪ್ರಯತ್ನದ ಫಲವಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಣ ತಜ್ಞ ಚಂದ್ರಶೇಖರ ದಾಮ್ಲೆ ಅವರು ತಮ್ಮ ಶಾಲೆಯಿಂದ ಕೆಲವು ಅತಿಥಿ ಶಿಕ್ಷಕರನ್ನು ಕರಿಕೆ ಶಾಲೆಗೆ ಪಾಠ ಹೇಳಲು ಕಳುಹಿಸಿಕೊಟ್ಟರು. ಇದು ಕೂಡ ಕರಿಕೆ ಶಾಲೆಯ ಮಕ್ಕಳಿಗೆ ಸಾಕಷ್ಟು ರೀತಿಯಲ್ಲಿ ನೆರವಾಯಿತು. ಶಿಕ್ಷಕರ ಕೊರತೆಯಿಂದ ಪಾಠ ವಂಚಿತ ಮಕ್ಕಳಿಗೆ ದಾಮ್ಲೆ ಅವರ ಸಕಾಲಿಕ ಸಹಾಯ ವರದಾನವಾಯಿತು. ಸ್ವಯಂಸೇವಾ ಸಂಸ್ಥೆಗಳು, ಸ್ವಯಂಕಾರ್ಯಕರ್ತರು, ತಂತ್ರಜ್ಞಾನಗಳ ಸಹಾಯದಿಂದ ಕರಿಕೆ ಎಂಬ ಗಡಿನಾಡ ಶಾಲೆಯೊಂದು ಈಗ ಮಾದರಿ ಶಾಲೆಯಾಗುವ ಹಾದಿಯಲ್ಲಿದೆ. ಸರ್ಕಾರ ಎಲ್ಲಾ ಕಡೆ ತಲುಪಲು ಅಸಾಧ್ಯವಾದ ಸಂದರ್ಭದಲ್ಲಿ ವಿವೇಕಾನಂದ ಯೂತ್ ಮೂವ್ ಮೆಂಟ್, ಸ್ನೇಹಸಂಸ್ಥೆಯAಥ ಸ್ವಯಂಸೇವಾ ಸಂಸ್ಥೆಗಳು ತಮ್ಮ ಕೈಲಾದ ಸಹಾಯದ ಮೂಲಕ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಮುಂದಾಗುವ ಬೆಳವಣಿಗೆ ಶ್ಲಾಘನೀಯ ಎಂದು ಈಗ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಸಮನ್ವಯಾಧಿಕಾರಿಯಾಗಿರುವ ಸೌಮ್ಯ ಪೊನ್ನಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ಕರ್ನಾಟಕದಲ್ಲಿ ಈಗಾಗಲೇ ೧೮ ಸರ್ಕಾರಿ ಶಾಲೆಗಳಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ಕ್ವಾಲ್ಕೋಂ ಇಂಡಿಯಾ ಸಹಯೋಗದಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಅನ್ವೇಷಣೆ - ನರ್ಸರೀಸ್ ಆಫ್ ಟ್ಯಾಲೆಂಟ್ ಎಂಬ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ನೆರವು ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದೆ. ಕೊಡಗಿನಲ್ಲಿ ಕರಿಕೆ ಸರ್ಕಾರಿ ಶಾಲೆ ಈ ಸೌಲಭ್ಯದ ಉಪಯೋಗ ಪಡೆದುಕೊಂಡಿದೆ ಎಂದು ಸಂಸ್ಥೆಯ ಖಜಾಂಚಿ ಗೋಣಿಕೊಪ್ಪಲುವಿನ ಡಾ. ಕೆ.ಎನ್. ಚಂದ್ರಶೇಖರ್ ಹೇಳಿದರು.

ಮನಸ್ಸಿದ್ದರೆ ಮಾರ್ಗ ಎಂಬAತೆ ಕರಿಕೆಯ ಶಾಲಾ ವಿದ್ಯಾರ್ಥಿಗಳಿಗೆ ಸ್ವಯಂಸೇವಾ ಸಂಸ್ಥೆ ನೀಡಿದ ಆಧುನಿಕ ತಂತ್ರಜ್ಞಾನದ ಸಹಾಯ ಇದೀಗ ವರವಾಗಿ ಪರಿಣಮಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಕರಿಕೆ ಶಾಲೆಗೆ ಸೇರ್ಪಡೆಯಾಗಲು ಸೂಕ್ತ ಸೌಲಭ್ಯಗಳು ಅವಕಾಶ ಕಲ್ಪಿಸಿದೆ. ಕನ್ನಡನಾಡಿನ ಸರ್ಕಾರಿ ಶಾಲೆಗಳು ಉಳಿಯಬೇಕೆಂಬ ಸಂಕಲ್ಪಕ್ಕೆ ಸ್ವಯಂಸೇವಾ ಸಂಸ್ಥೆಯ ಸೇವಾ ಕಾರ್ಯ ಮಾದರಿಯಾಗಿದೆ.