v ನ್ಯಾ. ಕೆ.ಬಿ. ಪ್ರಸಾದ್ ಕರೆ v ಹಾಡಿಯಲ್ಲಿ ಅಭಿವೃದ್ಧಿ - ಕಾನೂನು ಅರಿವು ಕಾರ್ಯಕ್ರಮ
ಸಿದ್ದಾಪುರ, ಡಿ. ೨೨: ಕಾನೂನು ಅರಿವಿನ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಕಿರು ಉದ್ಯಮ ಶೀಲತೆ ಅಭಿವೃದ್ಧಿಯ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್ ಸಲಹೆ ನೀಡಿದರು
ನಬಾರ್ಡ್ ಮತ್ತು ಓಡಿಪಿ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಬಾಗಿತ್ವದಲ್ಲಿ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿ ಹಾಡಿಯಲ್ಲಿ ಕಾನೂನು ಅರಿವು ಹಾಗೂ ಅಭಿವೃದ್ಧಿ ಕಾರ್ಯಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬುಡಕಟ್ಟು ಆದಿವಾಸಿಗಳು ಶಿಕ್ಷಣದ ಮೂಲಕ ಕಾನೂನು ಅರಿವನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆದಲ್ಲಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ನಬಾರ್ಡ್ನ ಮಹಾ ಪ್ರಬಂಧಕ ಡಾ. ಕೆ.ಎಸ್. ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವು ವರ್ಷಗ ಳಿಂದಲೂ ಆದಿವಾಸಿ ಸಮುದಾಯ ಬಾಂಧವರನ್ನ ಕಿರು ಉದ್ಯಮ ಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮಹಿಳಾ ಸಬಲೀಕರಣ ಯೋಜನಾ ಅಡಿಯಲ್ಲಿ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಓಡಿಪಿ ಸಂಸ್ಥೆಯ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು ಇದರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆ ಯಬೇಕೆಂದರು.
ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು ಮಾತನಾಡಿ, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳನ್ನು ಹೊಂದಿಕೊಳ್ಳ ಬೇಕಾಗಿದೆ. ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಆದಿವಾಸಿ ಕುಟುಂಬಗಳಿಗೆ ಕೋಳಿ, ಹಂದಿ, ಜೇನು, ಕೃಷಿಯೊಂದಿಗೆ ಆರ್ಥಿಕವಾಗಿ ಸ್ವಉದ್ಯೋಗದೊಂದಿಗೆ ಸ್ವಾವಲಂಬಿ ಗಳಾಗಿ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದರು.
ಮುAದಿನ ದಿನಗಳಲ್ಲಿ ಹಂದಿ, ಜೇನು ಸಾಕಾಣಿಕೆಗೆ ಸಹಕಾರ ನೀಡಲಾಗುವುದು ಬುಡಕಟ್ಟು ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು ಮಾತನಾಡಿ, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳನ್ನು ಹೊಂದಿಕೊಳ್ಳ ಬೇಕಾಗಿದೆ. ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಆದಿವಾಸಿ ಕುಟುಂಬಗಳಿಗೆ ಕೋಳಿ, ಹಂದಿ, ಜೇನು, ಕೃಷಿಯೊಂದಿಗೆ ಆರ್ಥಿಕವಾಗಿ ಸ್ವಉದ್ಯೋಗದೊಂದಿಗೆ ಸ್ವಾವಲಂಬಿ ಗಳಾಗಿ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದರು.
ಮುAದಿನ ದಿನಗಳಲ್ಲಿ ಹಂದಿ, ಜೇನು ಸಾಕಾಣಿಕೆಗೆ ಸಹಕಾರ ನೀಡಲಾಗುವುದು ಬುಡಕಟ್ಟು ಬಾಂಧವರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದರು.
ಈ ಸಂದರ್ಭ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪಶು ಸಂಗೋಪನೆ ಇಲಾಖೆಯ ಲಿಂಗರಾಜು, ಸೋಮವಾರಪೇಟೆ ತಾಲೂಕು ಗಿರಿಜನ ವಿಸ್ತರಣಾಧಿಕಾರಿ ಧರ್ಮಮ್ಮ, ಮೈಸೂರು ಓಡಿಪಿ ಸಂಸ್ಥೆಯ. ಮೋಳಿ ಪೂಡ್ತದೂ, ಬಾಳೆಗುಂಡಿ ಹಾಡಿಯ ಆದಿವಾಸಿ ಮುಖಂಡ ರಮೇಶ್, ಓಡಿಪಿ ಸಂಸ್ಥೆಯ ಯೋಜನಾ ಸಂಯೋಜಕ ಮೇಲ್ವಿನ್, ಸಂಯೋಜಕರಾದ ಜೋಯ್ಸ್ ಮೆನೇಜಸ್, ಕಾರ್ಯಕರ್ತ ರಾದ ಧನು ಕುಮಾರ್, ಮಮತಾ, ಶಿಕ್ಷಕಿ ರೇಷ್ಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.