ನಾಪೋಕ್ಲು, ಡಿ. ೨೨: ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಇಲ್ಲಿಗೆ ಸಮೀಪದ ಹಳೆತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಆಂದೋಲನವನ್ನು ಮಾಡಲಾಯಿತು.
ಅಂಗನವಾಡಿಯ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಂಟಿ ಕಡಿದು ಸ್ವಚ್ಛಗೊಳಿಸಿದಲ್ಲದೆ ತರಕಾರಿ ಬೆಳೆಸಲು ಪೂರಕವಾದ ಮಡಿ ನಿರ್ಮಿಸಿದರು. ಬೆಳಗಿನ ಸಂಜೆವರೆಗೆ ಮಾಡಿದಂತಹ ಈ ಶ್ರಮದಾನದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಬಾಳೆಯಡ ದಿವ್ಯ, ಉಮಾಲಕ್ಷಿö್ಮ, ಚಂದ್ರಕಲಾ, ದಿಲೀಶ್ ,ಶಂಕರ, ಶರವಣ ಮತ್ತು ಅಂಗನವಾಡಿಯ ಶಿಕ್ಷಕಿಯಾದ ಜ್ಯೋತಿ, ಸಹಾಯಕಿ ಸರೋಜಾ ಅವರು ಸೇವೆಯಲ್ಲಿ ಹಾಜರಿದ್ದರು.