ಕುಶಾಲನಗರ, ಡಿ. ೨೧: ಶುಂಠಿ ಬೆಳೆಯಲು ಕಾಫಿ ತೋಟದಲ್ಲಿ ಭಾರೀ ಪ್ರಮಾಣದ ಮರಗಳ ಮಾರಣ ಹೋಮ ಮಾಡಿದ ಪ್ರಕರಣದ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಭಾಸ್ಕರ್ , ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಎಂ.ಎ. ರತನ್ ಕುಮಾರ್ ಅವರ ಜೊತೆ ಕೊಡಗರಹಳ್ಳಿ ಸಮೀಪದ ಕಾಫಿ ಎಸ್ಟೇಟ್ ಒಳಭಾಗದಲ್ಲಿ ನಡೆದ ಮರಗಳ ನಾಶ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ನಂತರ ‘ಶಕ್ತಿ’ಯೊಂದಿಗೆ ಮಾತನಾಡಿದ ಡಿಎಫ್‌ಓ ಭಾಸ್ಕರ್, ಕಾಫಿ ತೋಟದ ವ್ಯಾಪ್ತಿಯ ಸುಮಾರು ೩೫ ಎಕರೆ ಪ್ರದೇಶದಲ್ಲಿ ನೂರಾರು ಮರಗಳ ಬೃಹತ್ ಗಾತ್ರದ ಗೊಂಬೆ ರೆಂಬೆಗಳನ್ನು ಕಡಿಯಲಾಗಿದೆ. ಬೃಹತ್ ಕುಶಾಲನಗರ, ಡಿ. ೨೧: ಶುಂಠಿ ಬೆಳೆಯಲು ಕಾಫಿ ತೋಟದಲ್ಲಿ ಭಾರೀ ಪ್ರಮಾಣದ ಮರಗಳ ಮಾರಣ ಹೋಮ ಮಾಡಿದ ಪ್ರಕರಣದ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಭಾಸ್ಕರ್ , ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಎಂ.ಎ. ರತನ್ ಕುಮಾರ್ ಅವರ ಜೊತೆ ಕೊಡಗರಹಳ್ಳಿ ಸಮೀಪದ ಕಾಫಿ ಎಸ್ಟೇಟ್ ಒಳಭಾಗದಲ್ಲಿ ನಡೆದ ಮರಗಳ ನಾಶ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ನಂತರ ‘ಶಕ್ತಿ’ಯೊಂದಿಗೆ ಮಾತನಾಡಿದ ಡಿಎಫ್‌ಓ ಭಾಸ್ಕರ್, ಕಾಫಿ ತೋಟದ ವ್ಯಾಪ್ತಿಯ ಸುಮಾರು ೩೫ ಎಕರೆ ಪ್ರದೇಶದಲ್ಲಿ ನೂರಾರು ಮರಗಳ ಬೃಹತ್ ಗಾತ್ರದ ಗೊಂಬೆ ರೆಂಬೆಗಳನ್ನು ಕಡಿಯಲಾಗಿದೆ. ಬೃಹತ್ (ಮೊದಲ ಪುಟದಿಂದ) ‘ಶಕ್ತಿ’ಯಲ್ಲಿ ಪ್ರಕರಣ ವರದಿ ಮಾಹಿತಿ ಪಡೆದ ರಾಜ್ಯದ ಹಿರಿಯ ಅಧಿಕಾರಿಗಳಿಂದ ತನಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ಬಂದಿರುವುದಾಗಿ ಹೇಳಿದರು. ಪ್ರಕರಣದಲ್ಲಿ ಇಲಾಖೆ ಅಧಿಕಾರಿಗಳ, ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಕೂಡ ತನಿಖೆ ನಡೆಯಲಿದೆ. ಅಕ್ರಮವಾಗಿ ಮರಗಳನ್ನು ಕಡಿದು ಹಾನಿ ಮಾಡಿರುವ ವ್ಯಕ್ತಿಗಳ ಬಗ್ಗೆ ಮತ್ತು ಮರ ಸಾಗಾಟ ವಿಷಯದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಕಾಫಿ ಎಸ್ಟೇಟ್ ಮಾಲೀಕ ಮತ್ತು ಸ್ಥಳದಲ್ಲಿ ಶುಂಠಿ ಬೆಳೆಯಲು ಮಾಲೀಕರೊಂದಿಗೆ ಒಪ್ಪಂದ ಮಾಡಿರುವ ಕೊಡಗರಹಳ್ಳಿಯ ಅಬ್ಬಾಸ್, ಸುಂಟಿಕೊಪ್ಪ ರಫೀಕ್ ಮತ್ತು ಹೆಬ್ಬಾಲೆಯ ಜಾರ್ಜ್ ಬೇಬಿ ಎಂಬವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಮರಹವನಕ್ಕೆ ಸಂಬAಧಿಸಿದAತೆ ಬಳಸಿದ ಜೆಸಿಬಿ ಯಂತ್ರ, ಟ್ರಾö್ಯಕ್ಟರ್ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಇಲಾಖೆ ಮೂಲಕ ಎಚ್ಚರ ವಹಿಸುವುದಾಗಿ ತಿಳಿಸಿದ ಅವರು ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ ‘ಶಕ್ತಿ’ ಬಗ್ಗೆ ಡಿಎಫ್‌ಓ ಭಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.