ಕಣಿವೆ, ಡಿ. ೨೦: ನಿವೇಶನ ಹಾಗೂ ವಸತಿ ವಂಚಿತ ನೂರಾರು ಮಂದಿ ಗ್ರಾಮದ ಪೈಸಾರಿ ಜಾಗದಲ್ಲಿ ಅಳವಡಿ ಸಿಕೊಳ್ಳಲು ಮುಂದಾದ ಗುಡಿಸಲು ನಿರ್ಮಾ ಣವನ್ನು ಕಂದಾಯ ಇಲಾಖೆ ಅಧಿಕಾರಿ ಗಳಿಂದ ತಡೆಹಿಡಿದು ತೆರವುಗೊಳಿಸಿದ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ.
ಗ್ರಾಮದ ಭೈರಪ್ಪನಗುಡಿ ರಸ್ತೆಯ ಸರ್ವೆ ನಂಬರ್ ೧೭/೨ ರಲ್ಲಿ ೩೫ ಎಕರೆಗೂ ಹೆಚ್ಚು ಇದ್ದ ಪೈಸಾರಿ ಜಾಗದಲ್ಲಿ ಹೆಬ್ಬಾಲೆ, ಹಳಗೋಟೆ ಹಾಗೂ ಆರನೇ ಹೊಸಕೋಟೆ ಗ್ರಾಮ ಗಳ ನೂರಾರು ಮಂದಿ ವಸತಿ ರಹಿತರು ಹೆಬ್ಬಾಲೆ ಗ್ರಾಮ ಪಂಚಾ ಯಿತಿ ಕಚೇರಿಗೆ ತೆರಳಿ ಹತ್ತಾರು ಬಾರಿ ನಿವೇಶನಗಳ ಸಂಬAಧಿತ ಅರ್ಜಿ ಗಳನ್ನು ನೀಡಿದರೂ ಯಾವುದೇ ಪ್ರಯೋಜನ ದೊರಕದ ಕಾರಣ ಗ್ರಾಮದಲ್ಲಿನ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದಾಗಿ ಗ್ರಾಮದ ಪಾರ್ವತಿ, ಶೋಭಾ, ನಾಗಮ್ಮ, ನಿಂಗಮ್ಮ, ಶಿವಮ್ಮಾಚಾರಿ ಮೊದಲಾದ ವರು ‘ಶಕ್ತಿ’ ಯೊಂದಿಗೆ ದೂರಿಕೊಂಡರು.
ಆದರೆ, ಪೈಸಾರಿ ಜಾಗದಲ್ಲಿ ಗುಡಿ ಸಲು ಹಾಕಲು ಮುಂದಾಗಿದ್ದ ವೇಳೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಹೋದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ಸಂತೋಷ್ ನೇತೃತ್ವದ ತಂಡ ವಸತಿ ನಿವೇಶನ ವಂಚಿತರ ಜೊತೆ ಚರ್ಚಿಸಿ ಅವರೊಂ ದಿಗೆ ಸಮಾಲೋಚಿಸಿದ ನಂತರ ಗುಡಿ ಸಲುಗಳನ್ನು ತೆರವುಗೊಳಿಸಲಾಯಿತು.
ಬಳಿಕ ಮಾತನಾಡಿದ ಕಂದಾಯ ಅಧಿಕಾರಿ ಸಂತೋಷ್, ನಿವೇಶನ ಹಾಗೂ ಮನೆಗಳಿಲ್ಲದ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಬೇಕು. ಏಕಾಏಕಿ ಪೈಸಾರಿ ಜಾಗ ದಲ್ಲಿ ಶೆಡ್ಗಳನ್ನು ನಿರ್ಮಿಸುವಂತಿಲ್ಲ ಎಂದು ತಾಕೀತು ಮಾಡಿದರು.
ಏಕಾಏಕಿ ಪಂಚಾಯಿತಿ ಆಸ್ತಿ ಯನ್ನು ಅತಿಕ್ರಮಿಸಿ ಗುಡಿಸಲು ಕಟ್ಟು ವುದು ಕಾನೂನು ಬಾಹಿರ. ಆದ್ದರಿಂದ ಇಲ್ಲಿ ಯಾರೂ ಗುಡಿಸಲು ಹಾಕಬಾರದು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭ ಪ್ರತಿಕ್ರಿ ಯಿಸಿದ ಹೆಬ್ಬಾಲೆ ಗ್ರಾಮದ ಲೋಕೇಶ್, ನಾಗೇಂದ್ರ, ಜಗದೀಶ್ ಮೊದಲಾದವರು ಗ್ರಾಮದ ನಿವೇಶನ ವಂಚಿತ ಫಲಾನುಭವಿಗಳು ನಮ್ಮ ಸ್ವಾಧೀನದಲ್ಲಿರುವ ಸರ್ವೆ ನಂಬರ್ ೨೮/೬ ರಲ್ಲಿನ ಭೂಮಿಯನ್ನು ಸಂರಕ್ಷಿಸಿ ನ್ಯಾಯ ಕೊಡಬೇಕೆಂದು ಕಂದಾಯ ಅಧಿಕಾರಿಗಳನ್ನು ಕೋರಿದರು.