ಸುಂಟಿಕೊಪ್ಪ, ಡಿ. ೨೦: ಸುಂಟಿಕೊಪ್ಪ ಹೋಬಳಿಯ ಹರದೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆ ತಾ. ೧೯ ರಂದು ನಿಗದಿಯಾಗಿದ್ದು, ಗ್ರಾಮಸಭೆಗೆ ನೋಡಲ್ ಅಧಿಕಾರಿ ಬಾರದಿರುವ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆ ಮುಂದೂಡಲಾಗಿದೆ.
ಹರದೂರು ಗ್ರಾಮ ಪಂಚಾಯಿತಿಯು ೧೧ ಮಂದಿ ಸದಸ್ಯರನ್ನು ಹೊಂದಿದ್ದು. ೫ ವಾರ್ಡ್ಗಳನ್ನು ಹೊಂದಿದೆ ಈವರೆಗೆ ೫ ವಾರ್ಡ್ ಸಭೆಗಳು ನಡೆದಿದ್ದು ಗ್ರಾಮಸಭೆ ನಿಗದಿಯಾಗಿತ್ತು.
೧೧ ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷೆ ಪಿ.ಟಿ. ಉಷಾ ಸಭೆಗೆ ಆಗಮಿಸಿದ್ದರು. ಪಶುಪಾಲನಾ ಇಲಾಖೆಯ ಸೋಮವಾರಪೇಟೆ ತಾಲೂಕಿನ ಸಹಾಯಕ ನಿರ್ದೇಶಕ ಬದಾಮಿ ಅವರು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದು, ಅವರು ನಿಗದಿತ ಸಮಯ ಕಳೆದರೂ ಸಭೆಗೆ ಹಾಜರಾಗದೆ ಇದ್ದ ಹಿನ್ನಲೆಯಲ್ಲಿ ಸಭೆ ರದ್ದುಗೊಂಡಿತು. ವಿಪರ್ಯಾಸ ವೆಂದರೆ ಗ್ರಾಮಸಭೆಯ ತಿಳುವಳಿಕೆ ಗ್ರಾಮಸ್ಥರಿಗೆ ಇಲ್ಲದಿದ್ದ ಹಿನ್ನಲೆಯಲ್ಲಿ ಬೆರಳೆಣಿಕೆ ಮಂದಿ ಉಪಸ್ಥಿತರಿದ್ದು, ಹಾಜರಿದ್ದ ಕೆಲ ಮಂದಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ತಾನು ಸಹಾಯಕ ನಿರ್ದೇಶಕ ಪಶು ವೈದ್ಯಾಧಿಕಾರಿ ಯಾಗಿದ್ದು, ೩ ಪಶು ವೈದ್ಯಕೀಯ ಕೇಂದ್ರಗಳ ಉಸ್ತುವಾರಿಯಲ್ಲಿದ್ದು ಒತ್ತಡದಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ.
ಆದ್ದರಿಂದ ಸಭೆಗೆ ಆಗಮಿಸುವಾಗ ೧ ಗಂಟೆ ತಡವಾಗಿದೆ ಎಂದು ತಿಳಿಸಿದರೂ ಗ್ರಾಮಸ್ಥರು ಅವರ ಮಾತಿಗೆ ಕಿವಿಗೊಡದೆ ಅಸಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರ ನಿರ್ಧಾರದಂತೆ ಸಭೆಯನ್ನು ಮುಂದೂಡಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಸಲೀಂ ತಿಳಿಸಿದರು.