ಕಡಂಗ-ಚೆಯ್ಯAಡಾಣೆ, ಡಿ. ೨೦: ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು. ನಾವು ಹುಟ್ಟುವಾಗ ಯಾವ ಧರ್ಮದಲ್ಲಿ ಹುಟ್ಟುತ್ತೇವೆ ಎಂದು ನಮಗೆ ಗೊತ್ತಿರುವುದಿಲ್ಲ. ಹುಟ್ಟಿದ ನಂತರ ಒಂದು ಧರ್ಮಕ್ಕೆ ಸೀಮಿತವಾಗುತ್ತೇವೆ ಎಂದು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಹೇಳಿದರು.

ಕಡಂಗದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್. ಎಫ್.) ವೀರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಸಾಹಿತ್ಯೋತ್ಸವದ ಮುಖ್ಯ ದ್ವಾರವಾದ ಮಹೂಂ ಎಂ.ಎ. ಅಬೂಬಕ್ಕರ್ ಸ್ಮಾರಕ ದ್ವಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗಗಳ ಜನರು ಸೌಹಾರ್ಧತೆಯಿಂದ ಬದುಕು ಕಟ್ಟಿಕೊಳ್ಳಲು, ಉತ್ತಮ ಯುವ ಪೀಳಿಗೆಯನ್ನು ಸಮಾಜಕ್ಕೆ ತರಲು ಇಂತಹ ಕಾರ್ಯಕ್ರಮದಿಂದ ಸಾಧ್ಯ. ಎಸ್.ಎಸ್.ಎಫ್.ನ ಸಾಹಿತ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನುಡಿದರು.

ನಿವೃತ್ತ ಸೈನಿಕ ಹಾಗೂ ನಾಪೋಕ್ಲು ಕಡಂಗ-ಚೆಯ್ಯAಡಾಣೆ, ಡಿ. ೨೦: ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು. ನಾವು ಹುಟ್ಟುವಾಗ ಯಾವ ಧರ್ಮದಲ್ಲಿ ಹುಟ್ಟುತ್ತೇವೆ ಎಂದು ನಮಗೆ ಗೊತ್ತಿರುವುದಿಲ್ಲ. ಹುಟ್ಟಿದ ನಂತರ ಒಂದು ಧರ್ಮಕ್ಕೆ ಸೀಮಿತವಾಗುತ್ತೇವೆ ಎಂದು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಹೇಳಿದರು.

ಕಡಂಗದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್. ಎಫ್.) ವೀರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಸಾಹಿತ್ಯೋತ್ಸವದ ಮುಖ್ಯ ದ್ವಾರವಾದ ಮಹೂಂ ಎಂ.ಎ. ಅಬೂಬಕ್ಕರ್ ಸ್ಮಾರಕ ದ್ವಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗಗಳ ಜನರು ಸೌಹಾರ್ಧತೆಯಿಂದ ಬದುಕು ಕಟ್ಟಿಕೊಳ್ಳಲು, ಉತ್ತಮ ಯುವ ಪೀಳಿಗೆಯನ್ನು ಸಮಾಜಕ್ಕೆ ತರಲು ಇಂತಹ ಕಾರ್ಯಕ್ರಮದಿಂದ ಸಾಧ್ಯ. ಎಸ್.ಎಸ್.ಎಫ್.ನ ಸಾಹಿತ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನುಡಿದರು.

ನಿವೃತ್ತ ಸೈನಿಕ ಹಾಗೂ ನಾಪೋಕ್ಲು ಪಾಲ್ಗೊಳ್ಳಲು ಸದಾ ಸಿದ್ಧರಾಗಿರಬೇಕು. ವಿದ್ಯಾರ್ಥಿ ಸಂಘಟನೆಗಳಿAದ ಯುವ ಸಮೂಹ ತಪ್ಪುದಾರಿಗಳಿಂದ ಮುಕ್ತರಾಗಿ ಒಳ್ಳೆಯ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದರು.

೨ ದಿನಗಳು ನಡೆದ ಸ್ವರ್ಧೆಯಲ್ಲಿ ವೀರಾಜಪೇಟೆ ಡಿವಿಷನ್‌ಗೆ ಒಳಪಟ್ಟ ಐದು ಸೆಕ್ಟರ್‌ಗಳ ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದರು.

ಚಾಂಪಿಯನ್ ಆಗಿ ಪಾಲಿಬೆಟ್ಟ ಸೆಕ್ಟರ್ ೭೫೨ ಅಂಕ ಪಡೆದು ಹೊರ ಹೊಮ್ಮಿದರೆ, ೬೨೪ ಅಂಕ ಪಡೆದು ಕಡಂಗ ಸೆಕ್ಟರ್ ರನ್ನರ್ಸ್ಗೆ ತೃಪ್ತಿಪಟ್ಟಿತು.

ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಪತ್ರಕರ್ತ ಅಶ್ರಫ್, ಮೊಯ್ದು ಮುಸ್ಲಿಯಾರ್, ಸಾಬಿತ್ ಮಾಸ್ಟರ್, ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಜೆ.ಡಿ.ಎಸ್. ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ, ಬದ್ರಿಯಾ ಮಸೀದಿ ಕಾರ್ಯದರ್ಶಿ ರಾಶೀದ್, ಕೋಶಾಧಿಕಾರಿ ರಜಾಕ್, ಎಸ್.ವೈ. ಎಸ್. ಕಡಂಗ ಅಧ್ಯಕ್ಷ ಸುಲೈಮಾನ್, ಶಿಯಾಬುದ್ದಿನ್ ಚೌಹರಿ, ಎಸ್.ಎಸ್.ಎಫ್. ವೀರಾಜಪೇಟೆ ಡಿವಿಷನ್ ಕಾರ್ಯದರ್ಶಿ ರಶಾದ್ ಹೊಳಮಾಳ, ಗ್ರಾ.ಪಂ. ಸದಸ್ಯ ಮಮ್ಮದ್, ಇಸ್ಮಾಯಿಲ್ ಅನ್ವಾರಿ ಅಹ್ಸನಿ, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಎಸ್.ವೈ.ಎಸ್., ಎಸ್.ಎಸ್.ಎಫ್. ಹಾಗೂ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಕೇರಳ ಹಾಗೂ ಕರ್ನಾಟಕದ ನುರಿತ ತೀರ್ಪುಗಾರರು ಕಾರ್ಯ ನಿರ್ವಹಿಸಿದರು. ಪ್ರಾರ್ಥನೆಯನ್ನು ಬದ್ರಿಯಾ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ, ಸ್ವಾಗತವನ್ನು ಜಿಲ್ಲಾ ಎಸ್.ಎಸ್.ಎಫ್. ಕಾರ್ಯ ದರ್ಶಿ ಜುನೈದ್ ಅಮ್ಮತ್ತಿ ನಡೆಸಿದರೆ ಕನ್ವೀನರ್ ಮುಜೀಬ್ ವಂದಿಸಿದರು.

- ಅಶ್ರಫ್, ನೌಫಲ್.