ಗೋಣಿಕೊಪ್ಪ ವರದಿ, ಡಿ. ೨೧: ಕಳತ್ಮಾಡು ಲಯನ್ಸ್ ಪ್ರೌಡಶಾಲೆಯಲ್ಲಿ ಎನ್ಸಿಸಿ ಘಟಕ ಉದ್ಘಾಟಿಸಲಾಯಿತು. ೧೯ ಕರ್ನಾಟಕ ಬೆಟಾಲಿಯನ್ ಕಮಾಂಡಿAಗ್ ಅಧಿಕಾರಿ ಕರ್ನಲ್ ಜೆಫ್ರಿನ್ ರ್ನಹ ಎನ್ಸಿಸಿ ನಿಯಮದ ಬಗ್ಗೆ ಮಾಹಿತಿ ನೀಡಿದರು.
೮ನೇ ತರಗತಿಯ ೨೫ ವಿದ್ಯಾರ್ಥಿಗಳಿಗೆ ಎನ್ಸಿಸಿಯಲ್ಲಿ ತೊಡಗಿಕೊಳ್ಳಲು ಅವಕಾಶ ನೀಡಲಾಗಿದೆ. ಮುಂದಿನ ವರ್ಷದಲ್ಲಿ ೯ ನೆ ತರಗತಿ ವಿದ್ಯಾರ್ಥಿಗಳಿಗೂ ಅವಕಾಶ ದೊರೆಯಲಿದೆ. ಗರಿಷ್ಠ ೫೦ ಕೆಡೆಟ್ಗಳು ಇದರ ಲಾಭ ಪಡೆದುಕೊಳ್ಳಬಹುದು. ಎನ್ಸಿಸಿ ಕೆಡೆಟ್ ಮತ್ತು ಪಾಲಕರಿಗೆ ಎನ್ಸಿಸಿ ತರಬೇತಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಸುಬೇದಾರ್ ಮೇಜರ್ ಸಿಜು, ಲಯನ್ಸ್ ಮುಖ್ಯಸ್ಥ ಪಾರುವಂಗಡ ಬೋಸ್ ಪೆಮ್ಮಯ್ಯ, ಕಾರ್ಯದರ್ಶಿ ಶರತ್ ದೇವಯ್ಯ, ಪ್ರಮುಖರಾದ ಕೆ. ಪಿ. ಅಚ್ಚಯ್ಯ, ಮುಖ್ಯ ಶಿಕ್ಷಕಿಯರಾದ ಚಿಯಕ್ಪೂವಂಡ ಲತಾ ಬೋಪಣ್ಣ, ಅಕ್ಕಮ್ಮ, ಎ. ಲವನ್ಕುಮಾರ್, ಲಸಿಕಾ ಕಾರ್ಯಪ್ಪ ಇದ್ದರು.