ಶ್ರೀಮಂಗಲ, ಡಿ. ೨೦: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ನಿನಾದ ವಿದ್ಯಾಸಂಸ್ಥೆ ಹಳ್ಳಿಗಟ್ಟು-ಪೊನ್ನಂಪೇಟೆ ಈ ಎರಡು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ತಾ. ೨೧ ರಂದು (ಇಂದು) ಪೂರ್ವಾಹ್ನ ೧೦ ಗಂಟೆಗೆ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ' ಯೋಜನೆಯಲ್ಲಿ ಮೂಕಳೆರ ಟೈನಿ ಪೂಣಚ್ಚ ಅವರು ಬರೆದ ೧೮೬ನೇ ಹೆಜ್ಜೆಯ ಹಾಗೂ ತಂಬಾAಡ ಡ್ಯಾನಿ ನಾಣಯ್ಯ ಬರೆದ ೧೮೭ನೇ ಹೆಜ್ಜೆಯ ಎರಡು ನೂತನ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು.

ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿನಾದ ವಿದ್ಯಾಸಂಸ್ಥೆಯ ಅಧ್ಯಕ್ಷೆ ಚೇಂದಿರ ನಿರ್ಮಲ ಬೋಪಣ್ಣ, ಕಾರ್ಯದರ್ಶಿ ಚೇಂದಿರ ಬೋಪಣ್ಣ, ದತ್ತಿನಿಧಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ, ಇಟ್ಟೀರ ಮಧುರ ಕಾಳಯ್ಯ, ಪುಸ್ತಕ ಲೇಖಕಿ ಮೂಕಳೆರ ಟೈನಿ ಪೂಣಚ್ಚ, ಲೇಖಕ ತಂಬಾAಡ ಡ್ಯಾನಿ ನಾಣಯ್ಯ, ದಾನಿಗಳಾದ ಮೂಕಳೆರ ಸುರೇಶ್ ಪೂಣಚ್ಚ, ತಂಬಾAಡ ಕುಶಿ ನಾಣಯ್ಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೈಬಿಲೀರ ಬೋಪಯ್ಯ ದತ್ತಿನಿಧಿ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ಹಾಗೂ ಇಟ್ಟೀರ ರಾಜಪ್ಪ ದತ್ತಿನಿಧಿ ಚುಟುಕ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.

ಈ ಸಂದರ್ಭ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಶಬ್ದ ಹೇಳುವ ಸ್ಪರ್ಧೆ-ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಭಾಷೆಯಲ್ಲಿ ಆಶುಭಾಷಣ ಸ್ಪರ್ಧೆ- ಕಾಲೇಜು- ಸಾರ್ವಜನಿಕ ವಿಭಾಗದಲ್ಲಿ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು ಹಾಗೂ ಕೊಡವ ಭಾಷೆಯ ಹಾಸ್ಯ ಸ್ಪರ್ಧೆ ನಡೆಸಲಾಗುವುದು. ವಿಜೇತರಿಗೆ ವಿಭಾಗವಾರು ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ನಿನಾದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನ ನಡೆಯಲಿದೆ. ಜಾತಿ ಧರ್ಮದ ನಿರ್ಬಂಧವಿಲ್ಲದೆ ಕೊಡವ ಸಾಹಿತ್ಯ ಸಂಸ್ಕೃತಿಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ಕೂಟದ ಪ್ರಕಟಣೆ ಕೋರಿದೆ.