ಕುಶಾಲನಗರ, ಡಿ ೨೦: ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯ ಒತ್ತಿನಲ್ಲಿರುವ ಕಾಫಿ ಎಸ್ಟೇಟ್ ಒಂದರಲ್ಲಿ ಶುಂಠಿ ಬೆಳೆಗೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ನೂರಾರು ಮರಗಳ ಹನನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಶಾಲನಗರ ತಾಲೂಕು ಕೊಡಗರಹಳ್ಳಿ ಸಮೀಪ ಖಾಸಗಿ ಎಸ್ಟೇಟ್ ಒಳಭಾಗದಲ್ಲಿ ಸುಮಾರು ೩೫ ಎಕರೆಗೂ ಮೀರಿ ವ್ಯಾಪ್ತಿಯ ಕಾಫಿ ತೋಟವನ್ನು ನೆಲಸಮ ಮಾಡಿ ಈ ಪ್ರದೇಶದಲ್ಲಿರುವ ಸಾವಿರಾರು ಮರಗಳಿಗೆ ಹಾನಿ ಮಾಡುವುದರೊಂದಿಗೆ ಹಲವು ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಬೀಳಿಸಿದ್ದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಗೋಚರಿಸಿದೆ.
ಕೊಡಗರಹಳ್ಳಿ ಬಳಿಯಿಂದ ೧.೫ ಕಿ.ಮೀ. ದೂರದಲ್ಲಿರುವ ನೂರಾರು ಎಕರೆ ಕಾಫಿ ತೋಟದ ನಡುವೆ ಮರಗಳ ಮಾರಣ ಹೋಮ ಆಗಿರುವ ದೃಶ್ಯ ಕಂಡುಬAದಿದ್ದು ಪರಿಸರ ಪ್ರೇಮಿಗಳ ಎದೆ ಝಲ್ ಎನಿಸುವಂತಿದೆ.
ಈ ಪ್ರದೇಶ ವೀಕ್ಷಿಸಿದ ಸಂದರ್ಭ ಪ್ರಕೃತಿಯ ಮೇಲೆ ಅತ್ಯಾಚಾರ ಎಸಗಿದಂತೆ ಕಂಡು ಬಂತು.!!
ಕಾಫಿ ತೋಟಕ್ಕೆ ತೆರಳುವ ರಸ್ತೆಯ ಎರಡು ಭಾಗಗಳ ಕಾಫಿ ತೋಟದ ಮಾಲೀಕರು ಒಬ್ಬರೇ ಆಗಿದ್ದು ಕೊಡಗರಹಳ್ಳಿಯ ಮತ್ತು ಹೆಬ್ಬಾಲೆಯ ಗ್ರಾಮ ಪಂಚಾಯಿತಿ ಕೆಲವು ಜನಪ್ರತಿನಿಧಿಗಳು ಸೇರಿ ತೋಟದ ಮಾಲೀಕರೊಂದಿಗೆ ಒಪ್ಪಂದ ಮಾಡಿ ಶುಂಠಿ ಬೆಳೆಯುವ ಹಿನೆÀ್ನಲೆಯಲ್ಲಿ ಕಳೆದ ಕೆಲವು ಸಮಯದಿಂದ ತೋಟದಲ್ಲಿರುವ ಕಾಫಿ ಗಿಡಗಳೂ ಸೇರಿದಂತೆ ಬೃಹದಾಕಾರವಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ಒAದು ಸಾವಿರಕ್ಕೂ ಅಧಿಕ ಮರಗಳ ಬೃಹತ್ ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಕಲಾಗಿದ್ದು ನೂರಕ್ಕೂ ಅಧಿಕ ಮರಗಳನ್ನು ಬೀಳಿಸಿರುವ ದೃಶ್ಯ ಕಂಡು ಬಂದಿದೆ. ಹಿಟಾಚಿ ಜೆಸಿಬಿ ಬೃಹತ್ ಯಂತ್ರಗಳನ್ನು ಬಳಸಿ ಮರಗಳನ್ನು ಬೀಳಿಸಿರುವ ದೃಶ್ಯ ಗೋಚರಿಸಿದೆ.
ಹಲವು ಬೆಲೆಬಾಳುವ ಮರಗಳನ್ನು ಕಡಿದಿರುವ ಶಂಕೆ ವ್ಯಕ್ತಗೊಂಡಿದ್ದು, ಹೊರ ಜಿಲ್ಲೆಗಳಿಗೆ ಸಾಗಾಟವಾಗಿರುವ ಬಗ್ಗೆ ಕೂಡ ಗುಸು ಗುಸು ಕೇಳಿ ಬರುತ್ತಿದೆ. ನೂರಾರು ಲೋಡ್ಗಳಷ್ಟು ಟಿಂಬರ್ ಕೂಡ ಸಾಗಾಟವಾಗಿರುವ ಶಂಕೆ ವ್ಯಕ್ತಗೊಂಡಿದೆ. ಎದುರು ಭಾಗದಲ್ಲಿರುವ ಕಾಫಿ ತೋಟದಲ್ಲಿ ಹಲವು ಲೋಡುಗಳಷ್ಟು ಮರದ ದಿಮ್ಮಿ ಮತ್ತು ಸಣ್ಣ ಪುಟ್ಟ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೊಂಬೆಗಳನ್ನು ಸಾಗಿಸಿರುವ ದೃಶ್ಯ ಕೂಡ ಕಂಡು ಬಂದಿದೆ.
ಹಲಸು, ಮತ್ತಿ ಮತ್ತಿತರ ಜಾತಿಗಳ ಮರಗಳನ್ನು ಕಡಿದಿರುವ ಸುಳಿವು ಕೂಡ ಗೋಚರಿಸಿದೆ. ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಲ್ಲಿ ಬೀಟೆ ಮತ್ತಿತರ ಮರಗಳ ತೆರವು ಮಾಡಿರುವ ಬಗ್ಗೆ ಕೂಡ ಸುಳಿವು ಲಭಿಸಬಹುದು ಎನ್ನುತ್ತಾರೆ ಸ್ಥಳೀಯರು.
ಇಷ್ಟೆಲ್ಲ ನಡೆದರೂ ಅರಣ್ಯ ಇಲಾಖೆಗೆ ಮಾತ್ರ ಮರ ಹನನ ಬಗ್ಗೆ ಸುಳಿವು ದೊರೆಯದೇ ಇರುವುದು ಸಂಶಯಕ್ಕೆ ಎಡೆ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ದಿವ್ಯ ನಿರ್ಲಕ್ಷö್ಯ ಇಲ್ಲಿ ಎದ್ದು ಕಾಣುತ್ತಿದೆ.
ಈ ಕಾಫಿ ತೋಟದ ಒಳಗೆ ಕಳೆದ ಹಲವಾರು ವರ್ಷಗಳಿಂದ ಕಾಡಾನೆಗಳು ಓಡಾಡುವ ದೃಶ್ಯ ಸಾಮಾನ್ಯವಾಗಿದ್ದು ಇದನ್ನು ಆನೆ ಕಾರಿಡಾರ್ ಎಂದೇ ಭಾವಿಸಲಾಗಿದೆ.
ಇಂತಹ ಪ್ರದೇಶದಲ್ಲಿ ರಾತ್ರಿ ಹಗಲು ಕಾರ್ಮಿಕರು ಮರ ಕಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದು ಅಲ್ಲೇ ಶೆಡ್ಗಳನ್ನು ನಿರ್ಮಿಸಿರುವ ಸುಳಿವು ಕೂಡ ಕಂಡು ಬಂದಿದೆ. ಗ್ಯಾಸ್ ಸಿಲಿಂಡರ್ ಸ್ಟವ್ ಮತ್ತಿತರ ವ್ಯವಸ್ಥೆಯೊಂದಿಗೆ ಹತ್ತಾರು ಕಾರ್ಮಿಕರು ನಿಗೂಢವಾಗಿ ಈ ಮರಹನನ ಕಾಯಕ ನಡೆಸಿದ್ದಾರೆ ಎನ್ನುವುದು ಖಚಿತಗೊಂಡಿದೆ.
‘ಶಕ್ತಿ’ ಸ್ಥಳಕ್ಕೆ ತೆರಳಿದ ಸಂದರ್ಭ ಕಾಫಿ ತೋಟದ ಒಳಭಾಗದಲ್ಲಿ ಶುಂಠಿ ಬೆಳೆಸಲು ತೋಟದ ಮಾಲೀಕರೊಂದಿಗೆ ಒಪ್ಪಂದ ಮಾಡಿರುವ ಅಬ್ಬಾಸ್ ಎಂಬವರು ಪ್ರತಿಕ್ರಿಯಿಸಿದ್ದು ಶುಂಠಿ ಬೆಳೆಯಲು ನಾವು ಈ ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಮರಗಳನ್ನು ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಅವರನ್ನು ‘ಶಕ್ತಿ’ ಸಂಪರ್ಕಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು, ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ತಮ್ಮ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಅಕ್ರಮವಾಗಿ ಮರ ಹನನ ನಡೆದಿದೆ. ಈ ಬಗ್ಗೆ ತೋಟದ ಮಾಲೀಕರು ಮತ್ತು ಶುಂಠಿ ಬೆಳೆಗಾರರಾದ ಅಬ್ಬಾಸ್, ಬೇಬಿ ಜಾರ್ಜ್, ರಫೀಕ್ ಸೇರಿದಂತೆ ನಾಲ್ವರ ಮೇಲೆ ಕೇಸು ದಾಖಲಿಸಲಾಗುವುದು. ಘಟನೆಗೆ ಸಂಬAಧಿಸಿದAತೆ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಮರ ತೆರವುಗೊಳಿಸಲು ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಕ್ರಮವಾಗಿ ಬೀಳಿಸಿರುವ ಮರಗಳನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಬೃಹತ್ ಗಾತ್ರದ ಹಲವು ಮರಗಳನ್ನು ಹಿಟಾಚಿ, ಜೆಸಿಬಿ ಬಳಸಿ ಬೀಳಿಸಿದ್ದು, ಬಹುತೇಕ ಮರಗಳು ನೆಲಕಚ್ಚಿವೆ. ಸುಮಾರು ೩೫ ಎಕರೆಗೂ ಹೆಚ್ಚಿನ ವ್ಯಾಪ್ತಿ ಪ್ರದೇಶದ ಕಾಫಿ ಗಿಡಗಳನ್ನು ತೆರವುಗೊಳಿಸಿ ತೋಟವನ್ನು ಸಮತಟ್ಟು ಮಾಡಿರುವ ದೃಶ್ಯ ಕಂಡು ಬಂತು.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾಹಿತಿ ಸಂಗ್ರಹಿಸಿ, ಪ್ರತಿಕ್ರಿಯಿಸಿರುವ ಮಡಿಕೇರಿ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಶುಂಠಿ ಬೆಳೆ ಬೆಳೆಸಲು ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಭಾರೀ ಪ್ರಮಾಣದ ಮರಗಳನ್ನು ಹಾನಿ ಮಾಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ಕೆಲವು ಸ್ಥಳೀಯರು ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ. ಇದಕ್ಕೆ ಸಂಬAಧಿಸಿದ ಅಧಿಕಾರಿಗಳು ಮತ್ತು ಮರ ಹನನ ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಕಳೆದ ಎರಡು ದಿನಗಳಿಂದ ‘ಶಕ್ತಿ’ ಎರಡು ಬಾರಿ ಸ್ಥಳಕ್ಕೆ ತೆರಳಿದ್ದು ಮರ ಹನನದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಕೆಲವು ರಾಜಕೀಯ ಒತ್ತಡವು ಕೂಡ ಬರುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿದಲ್ಲಿ ಪ್ರಕರಣದ ಹಿಂದೆ ಇರುವ ಹಲವು ಕೈಗಳು ಬಯಲಾಗುವ ಸಾಧ್ಯತೆ ಅಧಿಕವಾಗಿದೆ.
ತನಿಖಾ ವರದಿ: ಚಂದ್ರಮೋಹನ ಎಂ.ಎನ್.