ಗೋಣಿಕೊಪ್ಪಲು, ಡಿ. ೨೦: ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಕನಿಷ್ಟ ಸೌಕರ್ಯಗಳನ್ನು ಒದಗಿಸಲು ಪಂಚಾಯಿತಿಯಲ್ಲಿ ಅನುದಾನದ ಕೊರತೆ ಎದುರಾಗಿದೆ. ಈ ಹಿಂದೆ ಮಾಡಿದ ಕಾಮಗಾರಿಗಳಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವು ಸಮಯ ಗ್ರಾಮಸ್ಥರು ಸಹಕರಿಸಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿ ದ್ದಂತೆಯೇ ಆದ್ಯತೆ ಮೇರೆಗೆ ಸವಲತ್ತುಗಳನ್ನು ಒದಗಿಸಲಾಗು ವುದೆಂದು ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೆಕ್ಕೆರ ಸೂರ್ಯ ಅಯ್ಯಪ್ಪ ಗ್ರಾಮಸ್ಥರಿಗೆ ತಿಳಿಸಿದರು.
ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಚೆಕ್ಕೆರ ಸೂರ್ಯ ಅಯ್ಯಪ್ಪ, ಗ್ರಾಮದಲ್ಲಿ ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಕರ್ಯ ಗಳ ಕೊರತೆ ಎದುರಿಸುತ್ತಿದ್ದೇವೆ. ಈ ಹಿಂದಿನ ಸಾಲಿನಲ್ಲಿ ಅನುದಾನಗಳು ಲಭ್ಯವಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಪಂಚಾಯಿತಿ ಗಮನ ಸೆಳೆದಿತ್ತು. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಗ್ರಾಮಸ್ಥರ ಅಹವಾಲುಗಳನ್ನು ಈಗಾಗಲೇ ಸ್ವೀಕರಿಸಿದ್ದೇವೆ. ಕ್ರಿಯಾಯೋಜನೆ ತಯಾರಿಸಿದ್ದೇವೆ. ಅನುದಾನ ಬಿಡುಗಡೆ ಯಾಗುತ್ತಿದ್ದಂತೆಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮದ ಹಿರಿಯ ನಾಗರಿಕರಾದ ಮೇಚಂಡ ಸೋಮಯ್ಯ ಮಾತನಾಡಿ, ಅನುದಾನ ಕೊರತೆ ಮುಂದಿಟ್ಟು ಕೊಂಡು ಪಂಚಾಯಿತಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಬರ ಮಾಡಿಕೊಂಡು ಇಲ್ಲಿಯ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಬೇಕು. ಅಗತ್ಯವಿದ್ದಲ್ಲಿ ಹಲವು ನಾಗರಿಕರನ್ನು ಈ ವೇಳೆ ಕರೆಸುವ ಮೂಲಕ ಇಲ್ಲಿನ ಸಮಸ್ಯೆ ಗಳನ್ನು ಶಾಸಕರಿಗೆ ಮನವರಿಕೆ ಮಾಡಿ ಕೊಡುವಂತಾಗಬೇಕು ಎಂದರು.
ಗ್ರಾಮಸ್ಥರ ಸಲಹೆಗೆ ಒಪ್ಪಿಗೆ ಸೂಚಿಸಿದ ಆಡಳಿತ ಮಂಡಳಿ ಆದಷ್ಟು ಬೇಗನೆ ಶಾಸಕರನ್ನು ಭೇಟಿ ಮಾಡುವ ಮೂಲಕ ಪಂಚಾಯಿತಿಗೆ ಆಮಂತ್ರಣ ನೀಡುತ್ತೇವೆ. ಇಲ್ಲಿಯ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡ ಲಾಗುವುದು ಎಂದರು.
೫ ಗ್ರಾಮಗಳಿಗೆ ಅವಶ್ಯವಿರುವ ಆಸ್ಪತ್ರೆಯು ಬಾಳೆಲೆಯಲ್ಲಿ ಇದ್ದರೂ ಇದರಿಂದ ಬಡ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕನಿಷ್ಟ ರೀತಿಯಲ್ಲಿಯೂ ಔಷಧಿಗಳು ಲಭಿಸುತ್ತಿಲ್ಲ. ಈ ಹಿಂದೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆ ಇದೀಗ ನಿಷ್ಕಿçಯವಾಗಿದೆ ಎಂದು ಗ್ರಾಮಸ್ಥರು ಸಭೆಗೆ ಮಾಹಿತಿ ಒದಗಿಸಿದರು.
ಪಂಚಾಯಿತಿ ವ್ಯಾಪ್ತಿಯು ನಾಗರ ಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿಕೊAಡಿದೆ. ಆನೆಗಳ ಹಾಗೂ ಹುಲಿಗಳ ಕಾಟ ಅಧಿಕವಿದೆ. ಈ ನಿಟ್ಟಿನಲ್ಲಿ ರೈತರು ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಹಗಲಿನ ವೇಳೆಯೇ ಹುಲಿಗಳು ಹಸುವಿನ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ರೈತರ ಜೀವನ ನಿರ್ವಹಣೆ ಕಷ್ಟವಾಗಿದೆ.
ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಕೊಟ್ಟಿಗೆ ನಿರ್ಮಾಣ ಆದಷ್ಟು ಬೇಗನೆ ಮಾಡಿಕೊಡುವಂತೆ ಸಭೆ ಯಲ್ಲಿ ರೈತರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ದಿವಾಕರ್ ಈಗಾಗಲೇ ಅನುದಾನ ಲಭ್ಯವಿದ್ದು ಕೊಟ್ಟಿಗೆ ಅಗತ್ಯವುಳ್ಳವರು ಇಲಾಖೆಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದರು.
ಕಾಫಿ ಬೋರ್ಡ್, ಕೃಷಿ ಅಧಿಕಾರಿ, ಜಲ್ಜೀವನ್ ಮಿಷನ್, ಪಂಚಾಯತ್ ರಾಜ್ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಈ ವೇಳೆ ಮಾತನಾಡಿದ ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಕಾಫಿ ಕುಯ್ಯುವ ಸಮಯದಲ್ಲಿ ಶಾಲೆಗೆ ಮಕ್ಕಳು ಗೈರು ಹಾಜರಾಗುತ್ತಿದ್ದಾರೆ. ಪೋಷಕರು ಈ ಬಗ್ಗೆ ಗಮನ ಹರಿಸಬೇಕು. ಬಹುತೇಕ ಆದಿವಾಸಿಗಳ ಮಕ್ಕಳ ಹೆಚ್ಚಾಗಿ ಇರುವುದರಿಂದ ಪರೀಕ್ಷೆ ವೇಳೆಯಲ್ಲಿ ಹಾಜರಾತಿಯ ಕೊರತೆ ಕಂಡು ಬಂದಲ್ಲಿ ಪರೀಕ್ಷೆಗೆ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ ಆ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡಬೇಕು ಎಂದರು.
ಬರ ಘೋಷಣೆ ಆಗಿರುವು ದರಿಂದ ಮುಂದಿನ ಸಾಲಿನಲ್ಲಿ ಭತ್ತದ ಬೀಜ ಉತ್ಪಾದನೆಯು ಕಡಿಮೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸುತ್ತಮುತ್ತಲಿನ ರೈತರು ತಾವು ಬೆಳೆದಿರುವ ಉತ್ತಮ ಗುಣಮಟ್ಟದ ಭತ್ತವನ್ನು ಶೇಖರಣೆ ಮಾಡಿ ಇಟ್ಟುಕೊಂಡಲ್ಲಿ ಮುಂದಿನ ಅವಧಿಯಲ್ಲಿ ಭತ್ತದ ಬೆಳೆಗೆ ಅನುಕೂಲವಾಗಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿಗಳಾದ ಡಾ. ಡಿ.ಎಸ್. ಮುಕಾರಿಬ್, ರೈತರಿಗೆ ಮಂಡಳಿಯ ವತಿಯಿಂದ ನಡೆಯುವ ಕಾರ್ಯ ಕ್ರಮಗಳ ಬಗ್ಗೆ ಹಾಗೂ ಸವಲತ್ತುಗಳ ಬಗ್ಗೆ ಸುದೀರ್ಘ ಮಾಹಿತಿ ಒದಗಿಸಿದರು. ಸಭೆಯಲ್ಲಿ ಗ್ರಾಮದ ಹಿರಿಯರಾರ ಅಳಮೇಂಗಡ ಬೋಸ್, ಮೇಚಂಡ ಸೋಮಯ್ಯ, ಅಡ್ಡೇಂಗಡ ಅಪ್ಪಯ್ಯ, ಮುಕ್ಕಾಟಿರ ಗಣೇಶ್ ಉತ್ತಯ್ಯ, ಮೋಹನ್, ಕೆ. ಮಧು ಮುಂತಾದವರು ಸಭೆಯಲ್ಲಿ ಉಪಯುಕ್ತ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮ್ಮುಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ಕವಿತ, ಪಣಿಯರ ರಾಜು, ಎ.ಆರ್. ಪವಿತ, ಜೆ.ಎಸ್. ಅಪ್ಪಣ್ಣ, ಸುಮತಿ, ಎ. ಅಮ್ಮಯ್ಯ ಉಪಸ್ಥಿತರಿದ್ದರು. ನೋಡಲ್ ಅಧಿಕಾರಿಯಾಗಿ ಎಂ. ಮೋಹನ್ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಪೂಣಚ್ಚ, ದೀಪ್ತಿ ಹಾಜರಿದ್ದರು.