ಮಡಿಕೇರಿ, ಡಿ. ೨೧: ಮೈಸೂರಿನಲ್ಲಿರುವ ಕೊಡಗು ಗೌಡ ಸಮಾಜದ ನೂತನ ಸಭಾಂಗಣ ಉದ್ಘಾಟನೆ ತಾ. ೨೩ರಂದು ನಡೆಯಲಿದೆ.

ಬೆಳಿಗ್ಗೆ ೯.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಆಧಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಉದ್ಘಾಟಿಸಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.