'

ಚೆಟ್ಟಳ್ಳಿ, ಡಿ. ೨೧: ೨೦೨೩-೨೪ನೇ ಸಾಲಿಗೆ IಅಆP- ಒಖಿಈ ಯೋಜನೆ ಅಡಿಯಲ್ಲಿ ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ನೀಡುತ್ತಿರುವ ಹಲವು ಯೋಜನೆಗಳಿಗೆ ಸಹಾಯಧನ ನೀಡಲು ಅನುಮೋದನೆಯನ್ನು ತಾ. ೩೧ ರವರೆಗೆ ವಿಸ್ತರಿಸಿದೆ.

ರಿಪ್ಲಾಂಟೇಶನ್ (ಮರುನಾಟಿ)- ೨೫ ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ ೧೫ ವರ್ಷ ಮೀರಿದ ಡ್ವಾರ್ಫ್ ಅರೇಬಿಕಾ ತಳಿಗಳು ಹಾಗೂ ೪೦ ವರ್ಷ ಮೀರಿದ ರೋಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ). ಕೆರೆ, ತೆರೆದ ರಿಂಗ್ ಬಾವಿ, ನೀರಾವರಿ (ಸ್ಪಿçಂಕ್ಲರ್-ಡ್ರಿಪ್) ಉಪಕರಣಗಳಿಗೆ ಸಹಾಯಧನ ನೀಡಲಾಗುವುದು.

ನಿಬಂಧನೆಗಳು

೨೫ ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು. ಕಳೆದ ಹತ್ತು ವರ್ಷಗಳಲ್ಲಿ ಅಂದರೆ ೨೦೧೩-೧೪ ರಿಂದ ಕಾಫಿ ಮಂಡಳಿಯಿAದ ಅರ್ಜಿ ಸಲ್ಲಿಸುವ ಕೆಲಸಕ್ಕೆ ಸಹಾಯಧನ ಪಡೆದಿರಬಾರದು.

ಅರ್ಜಿ ಕಾಫಿ ಮಂಡಳಿಯ ಕಚೇರಿಯಲ್ಲಿ ಲಭ್ಯವಿದೆ. ಅಥವಾ ತಿತಿತಿ.iಟಿಜiಚಿಛಿoಜಿಜಿee.oಡಿg ವೆಬ್‌ಸೈಟ್ ಮೂಲಕ ಪಡೆಯಬಹುದು. ಸಹಿ ಮಾಡಿದ ಪಾಸ್‌ಪೋರ್ಟ್ ಅಳತೆಯ ಫೋಟೊ, ಆಧಾರ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು, ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚೆಕ್ಕುಬಂದಿ, ಖಾತಾ ನಕಲು-ಮ್ಯುಟೇಶನ್-ಪಟ್ಟೆ ಪುಸ್ತಕ, ಕೆರೆ, ಬಾವಿ ತಗಲುವ ಅಂದಾಜು ವೆಚ್ಚ ಹಾಗೂ ಕ್ರಿಯಾಯೋಜನೆ, ಸ್ಪಿçಂಕ್ಲರ್-ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ತಾ. ೩೧ ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿ ಅಧಿಕಾರಿ ಮುಖಾರಿಬ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೪೪೯೦೬೩೦೫೭ ಸಂಖ್ಯೆ ಸಂಪರ್ಕಿಸಬಹುದಾಗಿದೆ.