ಸಂಪಾಜೆ, ಡಿ. ೨೦: ಓಮಿಕ್ರಾನ್ ರೂಪಾಂತರಿ ‘ಜೆ.ಎನ್.೧’ ಕೇರಳದಲ್ಲಿ ಉಲ್ಭಣಿಸುತ್ತಿರುವ ಹಿನ್ನೆಲೆ ಕೇರಳದೊಂದಿಗೆ ಗಡಿ ಹಂಚಿಕೊAಡಿರುವ ಕೊಡಗು ಜಿಲ್ಲೆಯಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಸಂಪಾಜೆ ಚೆಕ್‌ಪೋಸ್ಟ್ನಲ್ಲಿಯೂ ಕೇರಳದಿಂದ ಬರುವವರ ಮೇಲೆ ನಿಗಾ ಇರಿಸಲಾಗಿದೆ.

ಸಂಪಾಜೆ ಅರಣ್ಯ ತಪಾಸಣಾ ಚೆಕ್‌ಪೋಸ್ಟ್ನಲ್ಲಿ ಮತ್ತೆ ಕೋವಿಡ್ ತಪಾಸಣೆ ಪ್ರಾರಂಭಗೊAಡಿದ್ದು, ಕೇರಳ ರಾಜ್ಯದ ವಾಹನಗಳನ್ನು ನಿಲ್ಲಿಸಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಥರ್ಮಲ್ ಸ್ಕಾö್ಯನಿಂಗ್ ಮೂಲಕ ಪ್ರಯಾಣಿಕರ ಆರೋಗ್ಯವನ್ನು ಪರಿಶೀಲನೆ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ರೋಗ ಲಕ್ಷಣ ಹೊಂದಿರುವವರು ಪತ್ತೆಯಾದಲ್ಲಿ ಪರೀಕ್ಷೆಗೆ ಒಳಪಡಿಸಲು ಸೂಚನೆ ಇದ್ದು, ಅಂತವರು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.

ಕೇರಳದ ಕೆಲವು ಕಡೆಗಳಲ್ಲಿ ಜೆಎನ್-೧ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿಭಾಗದಲ್ಲಿ ಮುಂಜಾಗ್ರತೆ ವಹಿಸಲು ಕರ್ನಾಟಕ ರಾಜ್ಯ ಸರಕಾರ ಸೂಚಿಸಿದ ಹಿನ್ನೆಲೆ ಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತಪಾಸಣೆಗೆ ಮುಂದಾಗಿದೆ.