ಡಿ. ೧೯: ಸಮೀಪದ ಮಕ್ಕಿ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಮಣ್ಣಿನ ನಾಯಿ ಹರಕೆ, ದೀಪಾರಾಧನೆ, ಅಜ್ಜಪ್ಪ, ವಿಷ್ಣುಮೂರ್ತಿ ಕೋಲ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಡಿ. ೧೬ರಿಂದ ೧೯ರವರೆಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ತಾ. ೧೬ರಂದು ಬೆಳಿಗ್ಗೆ ಮಣ್ಣಿನ ನಾಯಿ ಹರಕೆ, ೧೭ರಂದು ಸಂಜೆ ದೇವಾಲಯದಲ್ಲಿ ಕೊಟ್ಟಿ ಪಾಡುವುದು. ೧೮ ರಾತ್ರಿ ದೀಪಾರಾಧನೆ (ಅಂದಿಬೊಳಕ್), ಮಹಾಪೂಜೆ, ತೋತ ಕೋಲ, ಅನಂತರ ಕರಿಬಾಳ, ಕುಟ್ಟಿಚಾತ ಮತ್ತು ನುಚ್ಚುಟ್ಟೆ ಮತ್ತಿತರ ಕೋಲಗಳು ಬೆಳಗ್ಗಿನವರೆಗೂ ನಡೆದವು.

ತಾ. ೧೯ ರಂದು ಪೂರ್ವಾಹ್ನ ೧೦ ಗಂಟೆಗೆ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಐಕ್ಯನಾದ ಕಲ್ಯಾಟ ಅಜ್ಜಪ್ಪ ಭೂತದ ಕೋಲ (ಈ ಸಂದರ್ಭದಲ್ಲಿ ಕಲ್ಯಾಟ ಅಜ್ಜಪ್ಪನ ದರ್ಶನ ಬರುವ

(ಮೊದಲ ಪುಟದಿಂದ) ಕೊಡಗಿನಾದ್ಯಂತ ಇರುವ ವ್ಯಕ್ತಿಗಳು ಇಲ್ಲಿ ಸೇರಿದ್ದರು) ಅನಂತರ ಅಪರಾಹ್ನ ವಿಷ್ಣುಮೂರ್ತಿ ಕೋಲವು ಕೆಂಡ (ಮೇಲೇರಿ)ದ ಮೇಲೆ ಬೀಳುವ ವಿಧಿವಿಧಾನಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ತೀರ್ಥಪ್ರಸಾದ ಸ್ವೀಕರಿಸಿದರು. ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.