ಮಡಿಕೇರಿ, ಡಿ. ೧೯: ಮಡಿಕೇರಿ ದಸರಾ ಉತ್ಸವದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಹಾಗೂ ಪ್ರಕಾಶಮಾನವಾದ ವಿದ್ಯುತ್ ಲೈಟ್ ಉಪಕರಣಗಳನ್ನು ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅವು ಗಳನ್ನು ಅಳವಡಿಸಲು ಬಳಸಲಾಗಿದ್ದ ವಾಹನಗಳ ಮಾಲೀಕರಿಗೆ ಪೊಲೀಸ್ ಇಲಾಖೆ ನೋಟೀಸ್ ಜಾರಿ ಮಾಡಿದೆ.

ಮಡಿಕೇರಿ ದಸರಾ ಉತ್ಸವದಲ್ಲಿ ಡಿಜೆ ಬಳಕೆಗೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರ ವಹಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಹೈಕೋರ್ಟ್ ವಕೀಲ, ವಾಯ್ಸ್ ಆಫ್ ಪಬ್ಲಿಕ್ ಮುಖಂಡ ಎನ್.ಪಿ. ಅಮೃತೇಶ್ ಅವರು ದಸರಾಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ವಿಜಯದಶಮಿಯಂದು ನ್ಯಾಯಾಲಯದ ನಿಯಮ ಪಾಲಿಸದ ಆರೋಪದಡಿ ಮಡಿಕೇರಿಯ ಹತ್ತು ಮಂಟಪ ಸಮಿತಿಗಳ ವಿರುದ್ಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಹತ್ತು ಮಂಟಪಗಳ ಪ್ರಮುಖರಿಗೆ ನೋಟೀಸ್ ಜಾರಿ ಮಾಡಿ ಅಗತ್ಯ ಮಾಹಿತಿಗಳನ್ನು ಪಡೆಯಲಾಗಿತ್ತು. ಇದೀಗ ಡಿಜೆ ಸೌಂಡ್ ಸಿಸ್ಟಮ್ ಹಾಗೂ ಲೈಟ್ ಅಳವಡಿಸಲಾಗಿದ್ದ ವಾಹನಗಳ ಮಾಲೀಕರಿಗೂ ನೋಟೀಸ್ ಜಾರಿಗೊಳಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಸಂಬAಧ ವಾಹನ ಮತ್ತು ಡಿಜೆ ಸೌಂಡ್ಸ್ ಸ್ಪೀಕರ್ ಹಾಗೂ ಸೌಂಡ್ ಸಿಸ್ಟಮ್ ಲೈಟ್‌ಗಳನ್ನು ವಾಹನ ದಾಖಲಾತಿ ಸಹಿತ ಮಡಿಕೇರಿ ನಗರ ಠಾಣೆಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಇದರಿಂದಾಗಿ ಮಂಟಪ ಸಮಿತಿಗಳ ಪ್ರಮುಖರಲ್ಲದೆ ವಾಹನಗಳ ಮಾಲೀಕರುಗಳು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿಜಯದಶಮಿಯಂದು ಮಡಿಕೇರಿಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ, ಹೊರ ರಾಜ್ಯಗಳಿಂದ ಡಿಜೆ ಸೌಂಡ್ಸ್ನ್ನು, ಲೈಟ್ಸ್ಗಳನ್ನು ತರಿಸ ಲಾಗಿದ್ದು, ಮುಂದೇನು ಮಾಡುವುದು ಎಂದು ತಿಳಿಯದೆ ವಾಹನ ಮಾಲೀಕರು ಹಾಗೂ ಸಮಿತಿಗಳ ಪ್ರಮುಖರು ಪರಿತಪಿಸುವಂತಾಗಿದೆ.

ಸಭೆ ಕರೆದು ತೀರ್ಮಾನ

ಪೊಲೀಸ್ ಇಲಾಖೆ ನೋಟೀಸ್ ಜಾರಿ ಮಾಡಿರುವ ಸಂಬAಧ ದಶಮಂಟಪ ಸಮಿತಿಗಳ ಸಭೆಯನ್ನು ಸದ್ಯದಲ್ಲಿಯೇ

(ಮೊದಲ ಪುಟದಿಂದ) ಕರೆದು ಚರ್ಚಿಸಿ ಸಮಿತಿಯ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಪ್ರದರ್ಶನಕ್ಕೆ ಮಾತ್ರ ಬಳಸಲಾಗಿದೆ

ನಿಯಮ ಉಲ್ಲಂಘನೆ (ಮೊದಲ ಪುಟದಿಂದ) ಕರೆದು ಚರ್ಚಿಸಿ ಸಮಿತಿಯ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಪ್ರದರ್ಶನಕ್ಕೆ ಮಾತ್ರ ಬಳಸಲಾಗಿದೆ

ನಿಯಮ ಉಲ್ಲಂಘನೆ ಮಾಡದಂತೆ ದಶಮಂಟಪ ಸಮಿತಿಗೆ ಸೂಚಿಸಲಾಗಿತ್ತು. ದಶಮಂಟಪ ಸಮಿತಿಯವರು ಕೂಡ ಇದಕ್ಕೆ ಒಪ್ಪಿದ್ದರು. ಮಂಟಪಗಳ ಕಥಾ ಸಾರಾಂಶ ಪ್ರದರ್ಶನ ಸಂದರ್ಭ ಡಿಜೆ ಬಳಕೆ ಮಾಡಲಾಗಿದೆ ಹೊರತು ಉಳಿದ ಸಂದರ್ಭಗಳಲ್ಲಿ ಮಾಡಿಲ್ಲ ಎಂದು ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದ್ದಾರೆ.ಚರ್ಚಿಸಿ ನಿರ್ಧಾರ

ಐತಿಹಾಸಿಕ ಹಿನ್ನೆಲೆಯುಳ್ಳ ಎಲ್ಲೆಡೆ ಹೆಸರುವಾಸಿಯಾಗಿರುವ ಮಡಿಕೇರಿ ದಸರಾ ಉತ್ಸವದಲ್ಲಿ ಡಿಜೆಗೆ ನಿರ್ಬಂಧ ಸರಿಯಲ್ಲ. ಪ್ರಸ್ತುತದ ಬೆಳವಣಿಗೆಗಳ ಬಗ್ಗೆ ಜಿಲ್ಲೆಯ ಶಾಸಕದ್ವಯರೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.

ಕಳೆಗುಂದುವ ಸಾಧ್ಯತೆಯಿದೆ

ದಶಮಂಟಪ ಸಮಿತಿಗಳ ಮರ‍್ನಾಲ್ಕು ತಿಂಗಳ ಶ್ರಮದ ಫಲವಾಗಿ ದಸರಾ ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ಈ ರೀತಿಯ ಬೆಳವಣಿಗೆಗಳಿಂದ ದಶಮಂಟಪ ಸಮಿತಿಗಳಿಗೆ ಮುಂದಿನ ದಿನಗಳಲ್ಲಿ ದಸರಾ ಬಗ್ಗೆ ಆಸಕ್ತಿ ಕಡಿಮೆಯಾಗುವುದರ ಜೊತೆಗೆ ದಸರಾ ಉತ್ಸವ ಕಳೆಗುಂದುವ ಸಾಧ್ಯತೆಯಿದೆ ಎಂದು ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಅಭಿಪ್ರಾಯಿಸಿದ್ದಾರೆ.