ಮಡಿಕೇರಿ, ಡಿ. ೧೯: ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ನಡೆದ ದರೋಡೆ ಪ್ರಕರಣದ ಸಂಬAಧ ಜಿಲ್ಲೆಯ ನಾಲ್ವರು ಸೇರಿದಂತೆ ಒಟ್ಟು ೬ ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ತ್ರಿಶೂರ್ ಜೈಲಿನಿಂದ ಬಂದು ‘ಪೆರೋಲ್’ ಮೇಲೆ ಬಂದು ಕೃತ್ಯವೆಸಗಿದ ಜಿಲ್ಲೆಯ ಆರೋಪಿಯನ್ನು ಪತ್ತೆಹಚ್ಚಲಾಗಿದೆ.

ಈ ಕುರಿತು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ತಾ. ೯ ರಂದು ಕೇರಳದ ಮಲಪುರಂನ ಗುತ್ತಿಗೆದಾರ ಶಂಜ್ಜಾದ್ ಅವರು ಚಿನ್ನದ ಗಟ್ಟಿಯನ್ನು ಮೈಸೂರಿನಲ್ಲಿ ಮಾರಾಟ ಮಾಡಿ ಅದರಲ್ಲಿ ಬಂದಿದ್ದ ರೂ. ೫೦ ಲಕ್ಷವನ್ನು ತೆಗೆದುಕೊಂಡು ಹೋಗುವ ಸಂದರ್ಭ ೧೦ ರಿಂದ ೧೫ ಮಂದಿ ಹಲ್ಲೆ ನಡೆಸಿ ಹಣ ದೋಚಿದ್ದರು ಎಂದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು ೬ ಮಂದಿಯನ್ನು ಬಂಧಿಸಿ ದ್ದಾರೆ ಎಂದು ಮಾಹಿತಿ ನೀಡಿದರು.

ತ್ರಿಶೂರ್ ಜೈಲಿನಲ್ಲಿ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿರುವ ಮಲೆತಿರಿಕೆಯ ದಿನೇಶ್ ಈಗಾಗಲೇ ಕೇರಳದಲ್ಲಿ ಪೊಲೀಸರ ವಶದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಪಡಿಸಲಾಗುವುದು ಎಂದು ವಿವರಿಸಿದರು.

ಉಳಿದಂತೆ ಆರ್ಜಿ ಗ್ರಾಮದ ನಿವಾಸಿ ಹಿಂದೂಪರ ಕಾರ್ಯಕರ್ತ ಎನಿಸಿಕೊಂಡ ನಾಗೇಶ್ (೪೮) , ವೀರಾಜಪೇಟೆಯ ಅರಸು ನಗರ ನಿವಾಸಿ, ಮಗ್ಗುಲ ಗ್ರಾಮದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಪಿ.ಸಿ. ರಮೇಶ್, (೪೬)ವೀರಾಜಪೇಟೆ ಸಮೀಪದ ಪೆಗ್ಗರಿಕಾಡು ನಿವಾಸಿ ಗಳಾದ ಎ.ಕೆ. ರಮೇಶ್ ಅಲಿಯಾಸ್ ಗಾಂಜಾ ರಮೇಶ್ (೩೯), ಪಿಕಪ್ ಪ್ರಶಾಂತ್ (೪೦), ಕೇರಳದ ಕೊನ್ನಪ ರಂಬಿಲ್ ನಿವಾಸಿಗಳಾದ ಅರುಣ್ (೨೯), ಜಂಶಾಬ್ (೨೯) ಬಂಧಿತ ಆರೋಪಿಗಳು. ಇವರು ಗಳಿಂದ ಕೃತ್ಯಕ್ಕೆ ಬಳಸಿದ ಪಿಕಪ್ ವಾಹನ ಹಾಗೂ ಸ್ವಿಫ್ಟ್ ಡಿಸೈರ್

(ಮೊದಲ ಪುಟದಿಂದ) ಕಾರು ಹಾಗೂ ರೂ. ೩ ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಬಂಧಿತ ಕೇರಳದ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಇನ್ನೂ ೧೦ ರಿಂದ ೧೨ ಮಂದಿ ಶಾಮೀಲಾಗಿರುವ ಕುರಿತು ಮಾಹಿತಿ ಇದ್ದು, ತನಿಖೆ ಮತ್ತಷ್ಟು ಬಿರುಸುಗೊಂಡಿದ್ದು, ಶೀಘ್ರದಲ್ಲಿಯೇ ಉಳಿದವರನ್ನು ಪತ್ತೆಹಚ್ಚಿ ತಕ್ಕಶಿಕ್ಷೆಗೆ ಒಳಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೆÀರೋಲ್‌ನಲ್ಲಿ ಬಂದು ಕೃತ್ಯ

ಘಟನೆಯ ‘ಮಾಸ್ಟರ್ ಮೈಂಡ್’ ತ್ರಿಶೂರ್ ಜೈಲಿನಲ್ಲಿರುವ ದಿನೇಶ್ ಎಂಬಾತ ಪೆÀರೋಲ್‌ನಲ್ಲಿ ಬಂದು ಈ ಕೃತ್ಯ ನಡೆಸಲು ಸಂಚು ರೂಪಿಸಿ, ಜಿಲ್ಲೆಯ ನಾಲ್ವರ ಸಹಾಯ ಪಡೆದುಕೊಂಡು ಕೇರಳದವರನ್ನು ಸೇರಿಸಿಕೊಂಡು ದರೋಡೆ ಮಾಡಿರುವುದು ಪ್ರಥಮ ಹಂತದ ತನಿಖೆಯಿಂದ ಹೊರಬಿದ್ದಿದೆ.

ಆದರೆ, ಘಟನೆ ದಿನೇಶ್‌ಗೆ ಹೇಗೆ ತಿಳಿಯಿತು, ತಿಳಿಸಿದವರು ಯಾರು? ಎಂಬುದರ ಸತ್ಯಾಂಶ ತನಿಖೆಯ ನಂತರ ತಿಳಿಯಬೇಕಾಗಿದೆ. ಪೆರೋಲ್‌ನಲ್ಲಿ ಬಂದ ದಿನೇಶ್ ಸ್ನೇಹಿತ ನಾಗೇಶ್‌ನ ಸಹಾಯ ಪಡೆದು ಕೇರಳದಿಂದ ಬಂದ ೧೦ ಮಂದಿಗೆ ವೀರಾಜಪೇಟೆಯ ಕೃಷ್ಣ ಲಾಡ್ಜ್ನಲ್ಲಿ ವಾಸ್ತವ್ಯಕ್ಕೆ ರೂಂ ವ್ಯವಸ್ಥೆ ಮಾಡಿದ್ದಲ್ಲದೆ, ಅವರಿಗೆ ಅಗತ್ಯವಿರುವ ಸಿಮ್ ಕಾರ್ಡ್, ಡಾಂಗಲ್ ಅನ್ನು ಪೂರೈಸಿದ್ದಾನೆ. ಕೃತ್ಯವೆಸಗಲು ಸ್ಥಳೀಯ ಯುವಕರು ಬೇಕೆಂದ ಸಂದರ್ಭ ನಾಗೇಶ್ ಮೂಲಕ ರಮೇಶ್, ಪ್ರಶಾಂತ್ ಹಾಗೂ ರಮೇಶ್ ಅವರುಗಳನ್ನು ಸೇರಿಸಿಕೊಳ್ಳಲಾಗಿದೆ.

ಕೃತ್ಯ ನಡೆಸಿ ದಿನೇಶ್ ಮರಳಿ ತ್ರಿಶೂರ್ ಜೈಲಿಗೆ ಹೋಗಿದ್ದು, ಆತನನ್ನು ಈ ಪ್ರಕರಣದಲ್ಲಿ ಬಂಧಿಸಬೇಕಾಗಿದೆ.

ದೋಚಿದ್ದು ರೂ. ೬೧ ಲಕ್ಷ - ಇದ್ದಿದ್ದು ೯೯೬ ಗ್ರಾಂ ಚಿನ್ನ

ಪ್ರಕರಣ ದಾಖಲಾಗುವ ಸಂದರ್ಭ ಶಂಜ್ಜಾದ್ ತನ್ನ ಪತ್ನಿಯ ೭೫೦ ಗ್ರಾಂ ಚಿನ್ನವನ್ನು ಗಟ್ಟಿ ಮಾಡಿ ಮೈಸೂರಿನಲ್ಲಿ ಮಾರಾಟ ಮಾಡಿ ಬಂದ ರೂ. ೫೦ ಲಕ್ಷ ಹಣವನ್ನು ತೆಗೆದುಕೊಂಡು ಹೋಗುವ ಸಂದರ್ಭ ದರೋಡೆಯಾಗಿದೆ ಎಂದು ದೂರು ದಾಖಲಿಸಿದ್ದರು. ಆದರೆ, ತನಿಖೆಯ ನಂತರ ದೋಚಿದ್ದು ೫೦ ಅಲ್ಲ, ರೂ. ೬೧ ಲಕ್ಷದ ೭೦ ಸಾವಿರ, ಮಾರಾಟವಾಗಿದ್ದು ೭೫೦ ಗ್ರಾಂ ಅಲ್ಲ, ೯೯೬ ಗ್ರಾಂ ಚಿನ್ನ ಎಂಬ ನೈಜಾಂಶ ಬಯಲಾಗಿದೆ. ಮೈಸೂರಿನ ಅಶೋಕಪುರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ ಚಿನ್ನದ ಗಟ್ಟಿಯನ್ನು ಕೂಡ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ರೂ. ೩ ಲಕ್ಷ ವಶ

೩ ತಂಡವಾಗಿ ಕಾರ್ಯಾಚರಣೆ ಕೈಗೊಂಡ ಪರಿಣಾಮ ಶೀಘ್ರವಾಗಿ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು, ನಾಗೇಶ್ ಹಾಗೂ ಗಾಂಜಾ ರಮೇಶ್ ಅವರುಗಳಿಂದ ಸದ್ಯಕ್ಕೆ ರೂ. ೩ ಲಕ್ಷ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನೂ ರೂ. ೩ ಲಕ್ಷದಷ್ಟು ಹಣ ಇನ್ನೆರಡು ದಿನಗಳಲ್ಲಿ ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ವಿವರಿಸಿದರು.

ಉಳಿದವರ ಬಂಧನಕ್ಕೆ ಬಲೆ

ಪ್ರಕರಣದಲ್ಲಿ ತಲೆಮರೆಸಿಕೊಂಡ ಉಳಿದ ೧೦-೧೨ ಮಂದಿ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ. ಅವರ ಜಾಡು ಹಿಡಿಯಲಾಗಿದೆ. ಸದ್ಯದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ರಾಮರಾಜನ್ ವಿಶ್ವಾಸ ವ್ಯಕ್ತಪಡಿಸಿದರು.

ಇದರ ಹಿಂದಿರುವ ಎಲ್ಲರನ್ನು ಪತ್ತೆಹಚ್ಚಲಾಗುವುದು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಲೇ ಇದೆ. ನಿತ್ಯ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜಿಲ್ಲೆಯ ಡಿ.ಸಿ.ಆರ್.ಬಿ., ತಾಂತ್ರಿಕ ವಿಭಾಗ ಸೇರಿದಂತೆ ಪೊಲೀಸರು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾರ್ಗದರ್ಶನ, ಡಿವೈಎಸ್‌ಪಿ ಮೋಹನ್ ಕುಮಾರ್ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ಕುಟ್ಟ ಸಿಪಿಐ ಮಂಜಪ್ಪ, ಗೋಣಿಕೊಪ್ಪ ಉಪನಿರೀಕ್ಷಕಿ ರೂಪಾ ಬಿರಾದರ್, ಪೊನ್ನಂಪೇಟೆ ಉಪನಿರೀಕ್ಷಕರುಗಳಾದ ಜಿ. ನವೀನ್, ಹೆಚ್.ಎಸ್. ಸುಬ್ರಮಣ್ಯ, ವೀರಾಜಪೇಟೆ ನಗರ ಉಪನಿರೀಕ್ಷಕ

ರವೀಂದ್ರ, ಗ್ರಾಮಾಂತರ ಉಪನಿರೀಕ್ಷಕ ಸಿ.ಸಿ. ಮಂಜುನಾಥ್ ಸೇರಿದಂತೆ ಗೋಣಿಕೊಪ್ಪ, ವೀರಾಜಪೇಟೆ ನಗರ, ಗ್ರಾಮಾಂತರ, ಪೊನ್ನಂಪೇಟೆ, ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿಗಳು, ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳಿದ್ದರು.