ವೀರಾಜಪೇಟೆ, ಡಿ.೧೯ : ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ಕಾವೇರಿ ಕೊಡವಕೇರಿಯ ಈ ವರ್ಷದ ಪುತ್ತರಿ ಊರೊರ್ಮೆ ಕಾರ್ಯಕ್ರಮ ಕೊಡವ ಸಮಾಜದ ಸಭಾಂಗಣದಲ್ಲಿ ಕೇರಿ ಅಧ್ಯಕ್ಷರಾದ ಮೇರಿಯಂಡ ಅರಸು ಅಚ್ಚಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಸಾಹಿತಿ ಹಾಗೂ ಪತ್ರಿಕಾ ಅಂಕಣಕಾರ ಐತಿಚಂಡ ರಮೇಶ್ ಉತ್ತಪ್ಪ ಮುಖ್ಯ ಅತಿಥಿಗಳಾಗಿದ್ದರು. ಕೊಡಗಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಕೇರಿಗಳ ಪಾತ್ರ ಮಹತ್ತರವಾಗಿದೆ. ಕಳೆದ ಹಲವು ವರ್ಷಗಳಿಂದ ಕ್ಷೀಣಗೊಳ್ಳುತ್ತಿರುವ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ಇಂದು ಹೆಚ್ಚಾಗಿರುವುದು ಆಶಾದಾಯಕ ವಾಗಿದೆ. ಕೊಡವರ ಐನ್‌ಮನೆಗಳನ್ನು ಉಳಿಸಿ ಸಂರಕ್ಷಿಸಿದಲ್ಲಿ ಪರಂಪರೆ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನಾಂಗ ಬಾಂಧವರು ಕಾರ್ಯಪ್ರವೃತ್ತರಾಗಬೇಕಾದ ಸಂದರ್ಭ ಇದು ಎಂದರು.

ಕಾರ್ಯಕ್ರಮದ ಅಂಗವಾಗಿ ಕೇರಿ ಸದಸ್ಯರುಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ಕೇರಿ ಸದಸ್ಯರುಗಳ ಮಕ್ಕಳನ್ನು ಸನ್ಮಾನಿಸಲಾಯಿತು. ಕೇರಿ ಉಪಾಧ್ಯಕ್ಷ ಅಂಜಪರವAಡ ಅನಿಲ್ ಮಂದಣ್ಣ, ಸಮಿತಿ ಸದಸ್ಯರುಗಳಾದ ಬೊಪ್ಪಂಡ ತ್ರಿಶೂಲ್ ಗಣಪತಿ, ತಾತಂಡ ಮಿನ್ನ, ಪಾಂಡAಡ ಕಾವ್ಯ ರಚನ್, ಬೊಳ್ಳಿಯಪಂಡ ಆಶಾ, ಬಾಳೆಕುಟ್ಟಿರ ಗಣಪತಿ, ಚಿಲ್ಲವಂಡ ರೇಖಾ, ಚೊಟ್ಟೆರ ರಮೇಶ್, ಮುಕ್ಕಾಟಿರ ರಾಯ್ ವೇದಿಕೆಯ ಲ್ಲಿದ್ದರು. ಕಾರ್ಯದರ್ಶಿ ಚೊಟ್ಟೆರ ಬೆಳ್ಳಿಯಪ್ಪ ಧನ್ಯವಾದವಿತ್ತರು.