ವೀರಾಜಪೇಟೆ, ಡಿ. ೧೯: ವೀರಾಜಪೇಟೆ ಸಮೀಪದ ಅಮ್ಮತ್ತಿ ಸರಕಾರಿ ಶಾಲಾ ಮೈದಾನದಲ್ಲಿ ತ್ರಿ ವೀಲ್ ಕ್ರಿಕೆಟರ್ಸ್ ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟ ನಡೆಯಿತು. ಅಂತಿಮ ಪಂದ್ಯಾಟದಲ್ಲಿ ವೀರಾಜಪೇಟೆ ತಂಡ ಹಾಗೂ ಶ್ರೀಮಂಗಲ ತಂಡ ಭಾಗವಹಿಸಿದವು. ವೀರಾಜಪೇಟೆ ತಂಡವನ್ನು ಸೋಲಿಸಿ ಶ್ರೀಮಂಗಲ ತಂಡ ನಗದು ಹಾಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಈ ಪಂದ್ಯಾಟದ ಉದ್ಘಾಟನೆಯನ್ನು ಕಾಂಗ್ರೆಸ್ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸೇವೆ ಅಪಾರ. ಆಟೋ ಚಾಲಕರು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಕೊರೋನ ಸಮಯದಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ದಾರೆ ಎಂದರು.

ಈ ಸಂದರ್ಭ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಅಭಿಜಿತ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಜು ಸುಬ್ರಮಣಿ, ಪೊಲೀಸ್ ಅಧಿಕಾರಿ ವಾಣಿಶ್ರೀ ಹಾಗೂ ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಆಟೋ ಚಾಲಕ ಸಂಘದ ಸದಸ್ಯರು ಹಾಜರಿದ್ದರು.