ಸತ್ಯಗೆ ಜಾಮೀನು

ಮಡಿಕೇರಿ, ಡಿ. ೨೦: ಹನಿಟ್ರ‍್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ನಿಂದ ನೊಂದು ಆತ್ಮಹತ್ಯೆಗೆ ಶರಣಾದ ಮಾಜಿ ಯೋಧ ಸಂದೇಶ್ ಸಾವಿನ ಪ್ರಕರಣಕ್ಕೆ ಸಂಬAಧಿಸಿದ ಆರೋಪಿ ಮಡಿಕೇರಿಯ ಉದ್ಯಮಿ ಸತ್ಯ ಅವರಿಗೆ ಉಚ್ಚ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಡೆತ್ ನೋಟ್ ಬರೆದಿಟ್ಟು ಮಡಿಕೇರಿಯ ಪಂಪಿನ ಕೆರೆಗೆ ಹಾರಿ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಪ್ರಕರಣಕ್ಕೆ ಸಂಬAಧಿಸಿದ ಐವರನ್ನು ಬಂಧಿಸಲಾಗಿತ್ತು. ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖವಾಗಿದ್ದ ಸತ್ಯ ಪರಾರಿಯಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಅರ್ಜಿ ತಿರಸ್ಕರಿಸಿತ್ತು.

ಬಳಿಕ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸತ್ಯಗೆ ಇದೀಗ ಷರತ್ತು ಬದ್ಧ ಜಾಮೀನು ದೊರೆತಿದೆ.

ಸತ್ಯ ವಿದೇಶಕ್ಕೆ ಪರಾರಿಯಾಗಿರುವ ಮಾಹಿತಿ ಆಧಾರದಲ್ಲಿ ಪೊಲೀಸರು ‘ಲುಕ್ ಔಟ್’ ನೋಟೀಸ್ ಕೂಡ ಜಾರಿ ಮಾಡಿದ್ದರು. ಹೈಕೋರ್ಟ್ ವಕೀಲ ಕೊಟ್ಟಂಗಡ ಸೋಮಣ್ಣ ಸತ್ಯ ಪರ ವಾದ ಮಂಡಿಸಿದರು.