ಪಾಲಿಬೆಟ್ಟ, ಡಿ. ೧೯: ನಿಂಬೆಹಣ್ಣು ಅಂದರೆ ಸಾಧಾರಣವಾಗಿ ಎಲ್ಲರಿಗೂ ಗೊತ್ತಿರುವಂತದ್ದೆ. ಅದರ ತೂಕವು ಅಂದಾಜು ೧೦೦ ಗ್ರಾಂನಷ್ಟು ಇರಬಹುದು. ಆದರೆ ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಬೆಳೆದ ಗಿಡದಲ್ಲಿ ಬರೋಬ್ಬರಿ ೫ ಕೆ.ಜಿ. ತೂಕದ ಭಾರಿ ಗಾತ್ರದ ಗಜ ನಿಂಬೆಹಣ್ಣು ಕಂಡು ಕಾರ್ಮಿಕರು ಸ್ಥಳೀಯ ರೈತರು ಬೆರಗಾಗಿದ್ದಾರೆ.

ಪಾಲಿಬೆಟ್ಟದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಈ ನಿಂಬೆಹಣ್ಣು ಕಂಡುಬAದಿದೆ. ಅಂದಾಜು ೫ ಅಡಿ ಎತ್ತರದ ೨ ಗಿಡಗಳಲ್ಲಿ ಸಣ್ಣ ಗಾತ್ರದಿಂದ ಬರೋಬರಿ ೬ ಕೆಜಿ ತೂಕದ ನಿಂಬೆ ಹಣ್ಣುಗಳು ಕಂಡುಬAದು ಅಚ್ಚರಿ ಮೂಡಿಸಿದೆ. ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಅವರು ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದರು. ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಎಸೆÀದಿದ್ದರೂ ಕೆಲ ದಿನಗಳ ನಂತರ ಸಣ್ಣ ಎರಡು ಗಿಡಗಳು ಬೆಳೆದು ಬಂದವು. ನಂತರ ಗಿಡವನ್ನು ಕಿತ್ತು ತೋಟದ ಬದಿಯಲ್ಲಿ ಆರ್ಗನಿಕ್ ಗೊಬ್ಬರವನ್ನು ಬಳಸಿ ಗುಂಡಿ ತೋಡಿ ನೆಡಲಾಗಿತ್ತು.

ಅಂದಾಜು ಮೂರು ವರ್ಷಗಳ ಕಾಲ ಗಿಡ ಮಾತ್ರ ಬೆಳೆಯಲಾರಂಭಿಸುತ್ತಾದರೂ ಗಿಡದಲ್ಲಿ ಹೂವು ಕಾಯಿಗಳು ಯಾವುದು ಕಂಡುಬರಲಿಲ್ಲ. ಇದು ಯಾವ ಗಿಡ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಇತ್ತೀಚಿಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳೊಂದಿಗೆ ಸಣ್ಣ ಕಾಯಿಗಳು ಕಾಣಿಸಿಕೊಂಡವು. ಕೆಲ ತಿಂಗಳ ನಂತರ ಕಾಯಿಗಳು ದೊಡ್ಡದಾಗುತ್ತಾ ಬಾರಿ ಗಾತ್ರದಲ್ಲಿ ಹಣ್ಣುಗಳಾಗಿ ಕಾಣಿಸಿಕೊಂಡಿವೆ.

ಗಜನಿಂಬೆಯ ಬಗೆಗಳಲ್ಲಿ ಇದು ಬಹು ಮುಖ್ಯವಾದದ್ದು. ಸಾಮಾನ್ಯವಾಗಿ ಎಲ್ಲ ತರಹದ ವಾತಾವರಣಕ್ಕೂ ಹೊಂದಿಕೊAಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರದ್ದು. ಸಣ್ಣ ಬೀಜಗಳನ್ನು ಹೊಂದಿದೆ. ಹಣ್ಣುಗಳಲ್ಲಿ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಯೊಂದಿಗೆ ಹಲವು ಆರೋಗ್ಯಕರ ಉಪಯೋಗ ಔಷಧಿ ಗುಣಗಳಿಗೆ ಬಳಕೆಯಾಗುತ್ತಿದೆ ಎನ್ನಲಾಗಿದೆ. ತಮ್ಮ ಕಾಫಿ ತೋಟದಲ್ಲಿ ಬೆಳೆದ ಗಜನಿಂಬೆ ಫಸಲನ್ನ ಸ್ಥಳೀಯ ದೇವಸ್ಥಾನಗಳಿಗೆ ನೀಡಿದ್ದಾರೆ. -ಪುತ್ತಂ ಪ್ರದೀಪ್