ಮಡಿಕೇರಿ, ಡಿ. ೨೦: ಸುನ್ನಿ ಸ್ಟೂಡೆಂಟ್ ಫೆಡರೇಷನ್ ಜಿಲ್ಲಾ ಸಮಿತಿಯಿಂದ ತಾ. ೨೩ ಮತ್ತು ೨೪ರಂದು ನೆಲ್ಲಿಹುದಿಕೇರಿ ಶಾದಿ ಮಹಲ್‌ನಲ್ಲಿ ಕೊಡಗು ಜಿಲ್ಲಾ ಸಾಹಿತ್ಯೋತ್ಸವ ನಡೆಯಲಿದೆ.

ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಎಸ್‌ಎಫ್ ಅಧ್ಯಕ್ಷ ಝಬೈರ್ ಸಅದಿ ಮಾಲ್ದಾರೆ ಈ ಬಗ್ಗೆ ಮಾಹಿತಿಯಿತ್ತರು. ಸಾಹಿತ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಐದು ವಿಭಾಗ, ಐದು ವೇದಿಕೆಗಳಲ್ಲಿ ಸುಮಾರು ೧೩೦ ಸಾಂಸ್ಕೃತಿ ಸ್ಪರ್ಧೆಗಳು ನಡೆಯಲಿವೆ. ಕನ್ನಡ, ಹಿಂದಿ, ಇಂಗ್ಲೀಷ್, ಮಲಯಾಳಂ, ಉರ್ದು, ಅರೆಬಿಕ್ ಭಾಷೆಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಶಾಸಕದ್ವಯರಾದ ಡಾ. ಮಂಥರ್ ಗೌಡ, ಎ.ಎಸ್. ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್, ಮಲಯಾಳಂ, ಉರ್ದು, ಅರೆಬಿಕ್ ಭಾಷೆಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಶಾಸಕದ್ವಯರಾದ ಡಾ. ಮಂಥರ್ ಗೌಡ, ಎ.ಎಸ್. ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್, ಅಲ್ ಹೈದರೂಸಿ ಕಿಲ್ಲೂರ್ ತಂಗಳ್, ಎಸ್‌ಜೆಎಂ ಜಿಲ್ಲಾಧ್ಯಕ್ಷ ಮುಸ್ತಫ ಸಖಾಫಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಉಸ್ತಾದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯ ದರ್ಶಿ ಜುನೈದ್ ಅಮ್ಮತ್ತಿ, ಕಾರ್ಯ ದರ್ಶಿಗಳಾದ ರಫೀಕ್ ಲತೀಫಿ, ರಿಯಾಜ್ ಗುಹ್ಯ, ಸದಸ್ಯರಾದ ಹನೀಫ್ ಅಶ್ರಫ್, ಜಲೀಲ್ ಹೊಸತೋಟ ಉಪಸ್ಥಿತರಿದ್ದರು.