ಮಡಿಕೇರಿ, ಡಿ. ೨೦: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಮಡಿಕೇರಿ (ಓಂಃAಖಆ) ಹಾಗೂ ದಿ ಆರ್ಗನೈಜೇಷನ್ ಫಾರ್ ದಿ ಡೆವಲಪ್‌ಮೆಂಟ್ ಆಫ್ ಪೀಪಲ್, ಮೈಸೂರು (ಔಆP) ಸಂಯುಕ್ತಾಶ್ರ ಯದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಕಾರಾಗೃಹ ವಾಸಿಗಳಿಗಾಗಿ ಹಮ್ಮಿಕೊಂಡಿದ್ದ “ಕೌಶಲ್ಯಾಭಿವೃದ್ಧಿ (Sಞiಟಟ ಆeveಟoಠಿmeಟಿಣ Pಡಿogಡಿಚಿmme) ಹಾಗೂ ಜೀವನೋಪಾಯ ಮತ್ತು ಪುನರ್ವಸತಿ ಕಾರ್ಯಕ್ರಮದ (ಇಟeಛಿಣಡಿiಛಿಚಿಟ ಂಟಿಜ Pಟumbiಟಿg ಖಿಡಿಚಿiಟಿiಟಿg) ಸಮಾರೋಪ ಸಮಾರಂಭವನ್ನು ಮಡಿಕೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆಸಲಾಯಿತು.

ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಸಿ.ಶಾಮ್ ಪ್ರಸಾದ್ ಅವರು, ಕಾರಾಗೃಹ ವಾಸಿಗಳನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಕಾರಣಾಂತರಗಳಿAದ ತಪ್ಪು ನಡೆದಿರುತ್ತದೆ. ಒಂದು ಕೆಟ್ಟ ಗಳಿಗೆಯಲ್ಲಿ ಕಾರಾಗೃಹಕ್ಕೆ ಬಂದಿಗಳು ಬರಬೇಕಾಗಿರುತ್ತದೆ. ಈ ಕಾರಣದಿಂದಾಗಿ ಸಮಾಜ ಅವರನ್ನು ಕೆಟ್ಟ ರೀತಿಯಲ್ಲಿ ನೋಡುತ್ತದೆ ಹಾಗೂ ನಾಗರಿಕ ಸಮಾಜವು ಅವರನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಆದರೆ ಇಂತಹ ತರಬೇತಿಗಳ ಮುಖಾಂತರ ಕಾರಾಗೃಹವು ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಮಾರ್ಪಡುತ್ತದೆ. ತರಬೇತಿಯ ಸದುಪಯೋಗದಿಂದ ಬಂದಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ನಬಾರ್ಡ್ ಪ್ರಬಂಧಕರಾದ ಡಾ.ಕೆ.ಎಸ್. ಮಹೇಶ್ ಮಾತನಾಡಿ, ನಬಾರ್ಡ್ ವತಿಯಿಂದ ೪೦ ವರ್ಷಗಳಿಂದ ಸರಾಸರಿ ೪.೫೦ ಲಕ್ಷ ಬಡ ಕುಟುಂಬಗಳಿಗೆ ಸಹಾಯ ಮಾಡಲಾಗುತ್ತಿದ್ದು, ಪ್ರಪ್ರಥಮ ಬಾರಿಗೆ ಕರ್ನಾಟಕದ ಕಾರಾಗೃಹದಲ್ಲಿ ಈ ಸಂಸ್ಥೆಯ ಅಧೀಕ್ಷಕರಾದ ಸಂಜಯ್ ಜಿತ್ತಿ ಅವರ ಸಹಯೋಗದೊಂದಿಗೆ ಇಂತಹ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ತರಬೇತಿಯನ್ನು ಪಡೆದ ಬಂದಿಗಳು ಹೊರಗೆ ಹೋಗಿ ತರಬೇತಿಯ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುಂದೆ ಬರುವಂತೆ ಕರೆ ನೀಡಿದರು.

ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದ ತರಬೇತಿ ನೀಡಲು ದಿ ಆರ್ಗನೈಜೇಷನ್ ಫಾರ್ ದಿ ಡೆವಲಪ್‌ಮೆಂಟ್ ಆಫ್ ಪೀಪಲ್ ಸಂಸ್ಥೆಗೆ ಹಣಕಾಸು ನೆರವು ನೀಡಿದ ನಬಾರ್ಡ್ ಕೊಡಗು ವಿಭಾಗದ ಡಿ.ಡಿ.ಎಮ್ ರಮೇಶ್‌ಬಾಬು ವಿ ಅವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಾರಾಗೃಹ ವಾಸಿಗಳನ್ನು ಉದ್ದೇಶಿಸಿ ಮಾತನಾಡಿ, ಕಾರಾಗೃಹವು ಶಿಕ್ಷೆ ನೀಡುವ ಸ್ಥಳವಲ್ಲ. ಅದು ಪರಿವರ್ತನೆ ಮಾಡುವ ಸ್ಥಳ. ತರಬೇತಿಯಲ್ಲಿ ಬಂದಿಗಳಿಗೆ ವಿತರಣೆ ಮಾಡಲಾದ ಪ್ರಮಾಣ ಪತ್ರ ಹಾಗೂ ಟೂಲ್ ಕಿಟ್‌ಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸದುಪಯೋಗ ಪಡೆದುಕೊಳ್ಳಲು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಸ್ಥೆಯ ಅಧೀಕ್ಷಕರಾದ ಸಂಜಯ್ ಜಿತ್ತಿ ಅವರು ಮಾತನಾಡಿ, ಕಾರಾಗೃಹವು ಕೇವಲ ಶಿಕ್ಷೆ ನೀಡುವ ತಾಣವಲ್ಲ. ಬದಲಾಗಿ ಅದು ಸುಧಾರಣ ಕೇಂದ್ರವಾಗಿದೆ. ಬಂದಿಗಳು ೩೦ ದಿನಗಳ ಕಾಲ ಪಡೆದ ತರಬೇತಿಯನ್ನು ಸದುಪಯೋಗ ಪಡೆಸಿಕೊಂಡು ತಮ್ಮ ಕುಟುಂಬದವರೊAದಿಗೆ ನೆಮ್ಮದಿಯ ಜೀವನ ಸಾಗಿಸಲು ಕರೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶಾಮ್ ಪ್ರಸಾದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಸಾದ್ ಕೆ.ಬಿ, ನಬಾರ್ಡ್ ಮಹಾ ಪ್ರಬಂಧಕರಾದÀ ಡಾ. ಕೆ.ಎಸ್. ಮಹೇಶ್, ಜಿಲ್ಲಾ ನಬಾರ್ಡ್ ಅಭಿವೃದ್ಧಿ ವ್ಯವಸ್ಥಾಪಕರಾದ ರಮೇಶ್ ಬಾಬು.ವಿ, ಒ.ಡಿ.ಪಿ ಮೈಸೂರು ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ಕೇರಾ, ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಂಜಯ್ ಜಿತ್ತಿ ಅವರುಗಳು ತರಬೇತಿ ಪಡೆದ ೫೦ ಬಂದಿಗಳಿಗೆ ಪ್ರಮಾಣ ಪತ್ರ ಮತ್ತು ಟೂಲ್‌ಕಿಟ್‌ಗಳನ್ನು ವಿತರಣೆ ಮಾಡಿದರು.