ಗೋಣಿಕೊಪ್ಪ ವರದಿ, ಡಿ. ೨೦: ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಎಟಿಎಂ ಸೇವೆ ಗ್ರಾಹಕರಿಗೆ ಹೆಚ್ಚು ಸೇವೆ ನೀಡುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಹೇಳಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಬಾಳೆಲೆ ಶಾಖೆಯಲ್ಲಿ ಎಟಿಎಂ ಸೇವೆಯನ್ನು ಲೋಕಾರ್ಪ ಣೆಗೊಳಿಸಿ ಮಾತನಾಡಿ, ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿನ ಎಟಿಎಂ ಸೇವೆಗಿಂತ ಉತ್ತಮ ಸೇವೆ ನೀಡುತ್ತಿದೆ. ಇದರಿಂ ದಾಗಿ ಎಟಿಎಂ ಸ್ಥಾಪನೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಶಾಖೆ ಸಿಇಒ ಉಮಾಕಾಂತ್, ಬಾಳೆಲೆ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಪಿ. ಜಿ. ಜಾನಕ್ಕಿ, ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಚಿಮ್ಮಣಮಾಡ ಎಸ್. ಗಣಪತಿ, ಬಾಳೆಲೆ ಎಪಿಸಿಎಂಸಿ ಅಧ್ಯಕ್ಷ ಅರಮಣಮಾಡ ಪಿ. ಗಣಪತಿ ಇದ್ದರು.