ಸುAಟಿಕೊಪ್ಪ, ಡಿ. ೧೯: ಇಲ್ಲಿನ ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯದಲ್ಲಿ ತಾ. ೧೭ ರಂದು ತಿರುವಪ್ಪನ ವೆಳ್ಳಾಟಂ ಶ್ರದ್ಧಾಭಕ್ತಿಯಿಂದ ನಡೆಯಿತು.
ಸುಂಟಿಕೊಪ್ಪ ಸೇರಿದಂತೆ ನಾಕೂರು ಗ್ರಾಮದ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಿರುವಪ್ಪನ ದರ್ಶನ ಪಡೆದರು. ಇದೇ ಸಂದರ್ಭ ದೇವಾಲಯವನ್ನು ವಿದ್ಯುತ್ ದೀಪಾಲಂಕಾರದಿAದ ಅಲಂಕರಿಸಲಾಗಿತ್ತು. ಸಮಿತಿ ವತಿಯಿಂದ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆö ಮಾಡಲಾಗಿತ್ತು.