ವೀರಾಜಪೇಟೆ: ವಿರಾಜಪೇಟೆ ನಗರದ ತೆಲುಗರ ಬೀದಿಯಲ್ಲಿರುವ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಸಂಭ್ರಮದಿAದ ಆಚರಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ದೇವರಿಗೆ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕಗಳು, ಮಹಾ ಮಂಗಳಾರತಿ ನಡೆದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ದೇವಾಲಯದ ವತಿಯಿಂದ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾರಿಯಮ್ಮ ದೇವರಿಗೆ ಪೂಜೆ ಸಲ್ಲಿಸಿದರು.
ನಗರದ ಗಡಿಯಾರ ಕಂಬದ ಬಳಿಯಿರುವ ಶ್ರೀ ಮುನೇಶ್ವರ ದೇವಸ್ಥಾನ, ಮಹಾಗಣಪತಿ ದೇವಸ್ಥಾನ, ಛತ್ರಕರೆ ಬಳಿಯಿರುವ ಶ್ರೀ ವಿರಾಂಜನೇಯ ದೇವಸ್ಥಾನ, ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಸ್ಥಾನ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಇತರೆಡೆ ದೇವಾಲಯಗಳಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಅರಪಟ್ಟು ಭಗವತಿ ದೇವಾಲಯ
ಕಡಂಗ: ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ಸುಬ್ರಹ್ಮಣ್ಯ ದೇವರಿಗೆ ಎಳನೀರು ಹಾಗೂ ಹಾಲಿನ ಅಭಿಷೇಕ ನಡೆಸಲಾಯಿತು.
ನಂತರ ದೇವರಿಗೆ ಮಹಾಮಂಗಳಾರತಿ ಜೊತೆ ಮಹಾಪೂಜೆ ನಡೆಯಿತು. ತೀರ್ಥ-ಪ್ರಸಾದ ವಿತರಣೆಯ ನಂತರ ನೆರೆದಿದ್ದ ಭಕ್ತರಿಗೆ ಕೋಡಿರ ಸುಭಾಷ್ ಮುತ್ತಣ್ಣ ಮತ್ತು ಕುಟುಂಬ ಅನ್ನದಾನ ಏರ್ಪಡಿಸಿದ್ದರು.
ದೇವಸ್ಥಾನದ ಅರ್ಚಕ ಕೀರ್ತಿಶ್ ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷೆ ಚಿತ್ರ ಬೆಳ್ಳಿಯಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಭಕ್ತಾದಿಗಳು ಅಧಿಕ ಸಂಖೆಯಲ್ಲಿ ಭಾಗವಹಿಸಿದ್ದರು.
ಸಿದ್ದಾಪುರದ ಹೈಸ್ಕೂಲ್ ಗ್ರಾಮ ಸಿದ್ದಾಪುರ: ಸಿದ್ದಾಪುರದ ಹೈಸ್ಕೂಲ್ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಎರಡು ದಿನಗಳಿಂದ ವಿಜೃಂಭಣೆಯಿAದ ನಡೆಯಿತು.
ದೇವಾಲಯದಲ್ಲಿ ಕಾವಡಿ ಕುಣಿತ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಶ್ರೀ ಬೈತೂರಪ್ಪ ಶ್ರೀ ಪೊವ್ವೆದಿ ಬಸವೇಶ್ವರ ದೇವಾಲಯ ವೀರಾಜಪೇಟೆ: ವೀರಾಜಪೇಟೆಯ ಹೆಗ್ಗಳ ಗ್ರಾಮದಲ್ಲಿರುವ ಪಾಲ್ಟ್ ಮಕ್ಕಿ ನಾಗಬನದ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಸೇವೆಗಳನ್ನು ನಡೆಸಲಾಯಿತು.
ಅರ್ಚಕ ವೇಣುಗೋಪಾಲ್ ಭಟ್ ದೈವಿಕ ಕಾರ್ಯ ನೆರವೇರಿಸಿದರು. ಸಂಕಲ್ಪ ಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು. ನಾಗನ ಮೂರ್ತಿಗೆ ಸೀಯಾಳ ಹಾಗೂ ಹಾಲಿನ ಅಭಿಷೇಕ ನಡೆಸಿದರು. ನಾಗತಂಬಿಲವನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಮಹಾಪೂಜೆಯನ್ನು ನೆರವೇರಿಸಿ ತದನಂತರ ಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು.
ಚೆಟ್ಟಳ್ಳಿ ಅಮ್ಮತ್ತಿ: ಅಮ್ಮತ್ತಿಯ ಭದ್ರಕಾಳಿ ದೇವಾಲಯದಲ್ಲಿ ಷಷ್ಠಿ ಮಹೋತ್ಸ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಸುಬ್ರಹ್ಮಣ್ಯ ದೇವರಿಗೆ ಅಭಿಷೇಕದಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಸಿದ್ದಾಪುರ, ಅಮ್ಮತ್ತಿ, ಕಾವಾಡಿ, ಹೊಸರು ಸುತ್ತಮುತ್ತಲಿನ ಭಾಗದ ನೂರಾರು ಭಕ್ತರು ದೇವಾಲಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಆಗಮಿಸಿದ ಸರ್ವ ಭಕ್ತಾದಿಗಳಿಗೆ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬೊಮ್ಮಂಡ ನಾಚಪ್ಪ, ಕೇಚಂಡ ಕುಶಾಲಪ್ಪ, ಸದಸ್ಯರು, ದಾನಿಗಳು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಶ್ರೀ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸುಬಹ್ಮಣ್ಯ ಷಷ್ಠಿಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಸೇರಿದಂತೆ ವಿವಿಧ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಿಸಲಾಗಿತ್ತು. ಬೆಳಿಗ್ಗಿನಿಂದ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆಸಿ ಶ್ರೀ ಸುಬ್ರಹ್ಮಣ್ಯ ನಾಗ ದೇವತಾ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಆರ್ಚಕರಾದ ಭಾನುಪ್ರಕಾಶ್ ಭಟ್, ರಮೇಶ್ ಭಟ್ ಅವರು ದಿನದ ವಿಶೇಷ ಪೂಜಾ ಕೈಂಕರ್ಯ ಮಹಾಮಂಗಳಾರತಿಯನ್ನು ನೇರವೇರಿಸಿದರು. ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭ ದೇವಾಲಯದ ಟ್ರಸ್ಟಿ ಹಾಗೂ ಅಧ್ಯಕ್ಷ ಕೆ.ಎನ್. ಪೂಣಚ್ಚ, ಕಾರ್ಯದರ್ಶಿ ಬಿ.ಸಿ. ದಿನೇಶ್, ಖಜಾಂಚಿ ಡಾ. ಎ.ಬಿ. ತಮ್ಮಯ್ಯ, ತಕ್ಕಮುಖ್ಯಸ್ಥ ಕುಮಾರ್, ಪ್ರಧಾನ ಟ್ರಸ್ಟಿಗಳಾದ ಕೆ.ಎಸ್. ಮಂಜುನಾಥ್, ಜಗನ್ನಾಥ್ ರೈ, ದತ್ತ ಸೋಮಣ್ಣ, ಎಂ.ಎಸ್. ಸುರೇಶ್ ಚಂಗಪ್ಪ, ಸನ್ನಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನ
ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯAತೆ ಈ ವರ್ಷವೂ ಷಷ್ಠಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಷಷ್ಠಿ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡ ಪುನೀತ ಭಾವವನ್ನು ಹೊಂದಿದರು.
ಮಹಾಮAಗಳಾರತಿಯ ತೀರ್ಥ ಪ್ರಸಾದ ವಿತರಣೆಯ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಮಂಜಯ್ಯ ಟಿ.ಎಸ್., ಗೌರವ ಕಾರ್ಯಾಧ್ಯಕ್ಷ ಅಧ್ಯಕ್ಷ ಟಿ.ಎನ್. ರಮೇಶ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ., ಖಜಾಂಚಿ ಗೋಪಾಲ ಎನ್.ಪಿ. ಹಾಗೂ ಹಿರಿಯರಾದ ಶ್ರೀನಿವಾಸ್ ಟಿ.ವಿ., ಆನಂದಸ್ವಾಮಿ ಟಿ.ಎ., ಅಡಳಿತ ಮಂಡಳಿ ನಿರ್ದೇಶಕರಾದ ಸೂರ್ಯಕುಮಾರ ಟಿ.ಕೆ. ಭವಾನಿ ಟಿ.ವಿ. ಹಾಗೂ ಇತರರು ಹಾಜರಿದ್ದರು. ದೇವಾಲಯದ ಮುಖ್ಯ ಆರ್ಚಕ ಸುದೀರ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.ಸುಂಟಿಕೊಪ್ಪದ ವಿವಿಧೆಡೆ
ಸುಂಟಿಕೊಪ್ಪ: ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಉತ್ಸವವನ್ನು ಆಚರಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪದ ಉಲುಗುಲಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಉತ್ಸವವನ್ನು ಆಚರಿಸಲಾಯಿತು.
ಶ್ರೀ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಂಜುನಾಥ ಉಡುಪ ಅವರು ವಿಶೇಷ ಪೂಜೆ ದೇವರಿಗೆ ಅಲಂಕಾರ, ಅಭಿಷೇಕ ಅಲಂಕಾರ ಹೋಮ, ಹವನಾದಿಪೂಜೆ, ಮಹಾಮಂಗಳಾರತಿಯನ್ನು ನೆರವೇರಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಉಲುಗುಲಿ, ಸುಂಟಿಕೊಪ್ಪ, ನಾರ್ಗಾಣೆ, ಗುಂಡುಗುಟ್ಟಿ, ಹರದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಇತಿಹಾಸ ಪ್ರಸಿದ್ಧ ಹರಿಹರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ತೀರ್ಥ ಪ್ರಸಾದ ಸೇವಿಸಿ, ಹರಕೆ ತೀರಿಸುವ ಮೂಲಕ ಪುನೀತರಾದರು. ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು. ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಂಜೆ ನಡೆದ ದೇವರ ನೆರಪು ಬಲಿ ನೃತ್ಯ ನೆರೆದಿದ್ದ ಭಕ್ತಾದಿಗಳನ್ನು ರೋಮಾಂಚನಗೊಳಿಸಿತು.
ಈ ಸಂದರ್ಭ ತಕ್ಕ ಮುಖ್ಯಸ್ಥ ಚಿಮ್ಮುಣಿರ ಅರ್ಜುನ ಪೆಮ್ಮಯ್ಯ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು. ಮುಖ್ಯ ಅರ್ಚಕರಾದ ರಾಘವೇಂದ್ರ ವೈಲಾಯ ಅವರ ವೃಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.