ಪೊನ್ನಂಪೇಟೆ, ಡಿ. ೧೮: ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಬೀದಿ ನಾಟಕದ ಮೂಲಕ ಅರೋಗ್ಯದ ಅರಿವು ಮೂಡಿಸಲಾಯಿತು. ಪೊನ್ನಂಪೇಟೆ ಜೈ ಭೀಮ್ ಗಡಿನಾಡು ಜಾನಪದ ಕಲಾ ತಂಡದ ಕಲಾವಿದರು ಬೀದಿ ನಾಟಕವನ್ನು ನಡೆಸಿ ಕೊಟ್ಟರು.

ಚೇರಂಬಾಣೆ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚೆಯ್ಯಂಡಾಣೆ, ಭಾಗಮಂಡಲ, ಎಮ್ಮೆಮಾಡು, ಸಂಪಾಜೆ, ಬೆಟ್ಟಗೇರಿ, ಕಕ್ಕಬ್ಬೆ, ಪೆರಾಜೆ, ನಾಪೋಕ್ಲು, ಮದೆನಾಡು, ಬೋಯಿಕೇರಿ ಮತ್ತು ಮಡಿಕೇರಿಯಲ್ಲಿ ನಡೆದ ಬೀದಿನಾಟಕ ಕಾರ್ಯಕ್ರಮದಲ್ಲಿ ತಾಯಿ ಮಗುವಿನ ಆರೈಕೆ, ಭ್ರೂಣ ಹತ್ಯೆ, ಅಂಗಾAಗ ದಾನ, ಆಯುಷ್ಮಾನ್ ಭಾರತ್ ಯೋಜನೆ ಮತ್ತಿತರ ವಿಚಾರಗಳ ಬಗ್ಗೆ ಅರಿವು ಮೂಡಿಸ ಲಾಯಿತು. ಜೈ ಭೀಮ್ ಗಡಿನಾಡು ಜಾನಪದ ಕಲಾ ತಂಡದ ಕಲಾವಿದರಾದ ಎಸ್.ಟಿ.ಗಿರೀಶ್, ಶರತ್ ಕುಮಾರ್, ನಿರ್ಮಲ, ಮಂಜುಳ, ಪುಷ್ಪ, ಅಭಿ, ಮಂಟೇಸ್ವಾಮಿ ಹಾಗೂ ನಾಗಯ್ಯ ಬೀದಿ ನಾಟಕ ಪ್ರದರ್ಶನ ನೀಡಿದರು.