ಭಾಗಮಂಡಲ, ಡಿ. ೧೯: ಭಾಗಮಂಡಲ ಗ್ರಾಮ ಪಂಚಾಯಿತಿ ವತಿಯಿಂದ ಕೋರಂಗಾಲದಲ್ಲಿ ೫.೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಬಸ್ಸು ತಂಗುದಾಣವನ್ನು ಮಂಗಳವಾರ ಉದ್ಘಾಟಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ನೂತನ ತಂಗುದಾಣವನ್ನು ಉದ್ಘಾಟಿಸಿದರು. ಗ್ರಾಮ ಪಂಚಾ ಯಿತಿ ಸದಸ್ಯ ಹೊಸೂರು ಸತೀಶ್ ಕುಮಾರ್ ಮಾತನಾಡಿ ಹಲವು ಸೌಕರ್ಯಗಳೊಂದಿಗೆ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ತಂಗುದಾಣಕ್ಕೆ ಹೊಂದಿಕೊAಡAತೆ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೈಗೊಂಡ ಯೋಜನೆಯಾಗಿದೆ.
ಬಸು ತಂಗುದಾಣದ ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದರು. ಉಪಾಧ್ಯಕ್ಷೆ ಗಂಗಮ್ಮ ಪಂಚಾಯಿತಿ ಸದಸ್ಯರಾದ ಜಯಂತ್ ಪಮಿತಾ, ವೀಣಾ, ಶಶಿಕಲಾ, ನಿತ್ಯಾನಂದ, ದುರ್ಗಾವತಿ ಪೂವಮ್ಮ, ಪಿಡಿಓ ನಂದ, ಕುಯ್ಯಮುಡಿ ಮನೋಜ್, ವಾಜಪೇಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ಪಾಲ್ಗೊಂಡಿದ್ದರು. ನೇಗಿಲಯೋಗಿ, ಬೆಳೆಯ ಸಿರಿ ಮೊಳಕೆಯಲ್ಲಿ ಎಪಿಜೆ ಅಬ್ದುಲ್ ಕಲಾಂ,ಚAದ್ರಯಾನದ ವಿಕ್ರಂ ಲ್ಯಾಂಡರ್ ಸೇರಿದಂತೆ ಆಕರ್ಷಕ ಚಿತ್ರಗಳೊಂದಿಗೆ ಬಸ್ ತಂಗುದಾಣ ಜನರನ್ನು ಆಕರ್ಷಿಸುತ್ತಿದೆ.
-ಸುನಿಲ್