ಸೋಮವಾರಪೇಟೆ, ಡಿ. ೧೯: ೬೬ ಕೆ.ವಿ. ವಿದ್ಯುತ್ ಸ್ಥಾವರದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಐಗೂರು ಎಫ್-೩ ಫೀಡರ್ನಲ್ಲಿ ತುರ್ತು ನಿರ್ವಹಣೆ ಕೆಲಸ ಹಮ್ಮಿಕೊಂಡಿದ್ದು, ತಾ. ೨೦ ರಿಂದ (ಇಂದಿನಿAದ) ನಗರೂರು, ಬಜೆಗುಂಡಿ, ಬೇಳೂರು, ಕಾರೆಕೊಪ್ಪ, ಬೇಳೂರು ಬಸವನಹಳ್ಳಿ, ಐಗೂರು, ಯಡವಾರೆ, ಸಜ್ಜಳ್ಳಿ, ಹೊಸತೋಟ, ಕಾಜೂರು ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಎಇಇ ರವಿ ತಿಳಿಸಿದ್ದಾರೆ.
ತಾ. ೨೦, ೨೨, ೨೪, ೨೬, ೨೮, ೩೦ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ಮೇಲ್ಕಂಡ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.