ಸೋಮವಾರಪೇಟೆ, ಡಿ. ೧೭: ಸಮೀಪದ ಚೌಡ್ಲು ಗ್ರಾಮ ಪಂಚಾ ಯಿತಿಯಿಂದ ೧೦೦ ಮೀಟರ್ ಅಂತರ ದಲ್ಲಿ ಸರ್ಕಾರಿ ಪ್ರೌಢ ಶಾಲಾ ಹಿಂಭಾಗದ ಲ್ಲಿರುವ ರಸ್ತೆಯನ್ನು ಗಿಡಗಂಟಿಗಳು ಆಕ್ರ ಮಿಸಿಕೊಂಡು ಸಾರ್ವ ಜನಿಕರ ಓಡಾಟ ದುಸ್ತರವಾಗಿದ್ದರೂ ಸಂಬAಧಿಸಿದ ಗ್ರಾ.ಪಂ. ನಿರ್ಲಕ್ಷö್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚೌಡ್ಲು ಗ್ರಾಮ ಪಂಚಾಯಿತಿಯ ಮುಂಭಾಗವೇ ಇರುವ ಗ್ರಾಮಕ್ಕೆ ಸಿಮೆಂಟ್ ರಸ್ತೆಯನ್ನು ನಿರ್ಮಿಸಲಾಗಿದ್ದು, ಇದು ಪಟ್ಟಣದ ಮಡಿಕೇರಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದೆ. ಪ್ರಸ್ತುತ ರಸ್ತೆಯ ಒಂದು ಬದಿಯಲ್ಲಿ ಗಿಡಗಂಟಿ, ಕುರುಚಲುಗಳು ಬೆಳೆದು ರಸ್ತೆಯನ್ನು ಆಕ್ರಮಿಸಿಕೊಂಡಿದೆ. ತಿರುವಿನಲ್ಲಿ ಎದುರು ಭಾಗದಿಂದ ಆಗಮಿಸುವ ವಾಹನಗಳು ಕಾಣಿಸದಷ್ಟು ಕಾಡು ಕೂಡಿದ್ದು, ಇದನ್ನು ತೆರವುಗೊಳಿಸುವಂತೆ ಗ್ರಾ.ಪಂ.ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು, ದ್ವಿಚಕ್ರ ವಾಹನಗಳು, ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ಸಾರ್ವಜನಿಕರು ಸಂಚರಿಸುತ್ತಿದ್ದು, ರಸ್ತೆ ಬದಿಯ ಕುರುಚಲುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.