ಮಡಿಕೇರಿ, ಡಿ. ೧೭: ನಗರದ ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ನ ಚುನಾವಣೆ ತಾ. ೨೪ ರಂದು ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ನಡುವೆ ಬಿಜೆಪಿ ಪಾಳಯದಲ್ಲಿ ನಡೆದ ಘಟನಾವಳಿಗಳು ಬಂಡಾಯಕ್ಕೆ ಕಾರಣವಾಗಿದೆ.
೧೩ ಸ್ಥಾನಗಳಿರುವ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ಸನ್ನಿಹಿತವಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಕಾರ್ಯಗಳು ನಡೆದಿವೆ. ಮೊದಲು ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸುವ ೧೩ ಮಂದಿಯನ್ನು ಅಂತಿಮಗೊಳಿಸಲಾಗಿತ್ತು. ಅಭ್ಯರ್ಥಿಗಳು ಕರಪತ್ರ ಮುದ್ರಿಸಿ ಮತದಾರರಿಗೆ ಹಂಚಿಕೆ ಮಾಡುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು.
ಬಿಜೆಪಿ ಬೆಂಬಲಿತರಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅಂತಿಮಗೊAಡಿದ್ದ ಪೊನ್ನಚ್ಚನ ಮಧುಸೂದನ್ ಹಾಗೂ ಹಿಂದುಳಿದ ವರ್ಗ (ಬಿ) ಕ್ಷೇತ್ರದಿಂದ ಅಂತಿಮಗೊAಡಿದ್ದ ಕನ್ನಂಡ ಎ ಸಂಪತ್ ಅವರುಗಳ ನಡುವಿನ ಕ್ಷೇತ್ರ ಬದಲಾವಣೆ ಮಾಡುವ ಒತ್ತಡದಿಂದ ಮಧುಸೂದನ್ ಇದೀಗ ಯಾವುದೇ ಪಕ್ಷದ ಬೆಂಬಲ ಇಲ್ಲದೆ ಬಿಜೆಪಿ ವಿರುದ್ಧ ‘ರೆಬಲ್’ ಆಗಿ ಕಣದಲ್ಲಿದ್ದಾರೆ.
ಮಾಜಿ ಶಾಸಕರ ಒತ್ತಡ
ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಮತ ಚಲಾಯಿಸಲು ೧೬೦೦ ಮತದಾರರು ಅರ್ಹರಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದರು ಈ ವೇಳೆಯಲ್ಲಿ ಕನ್ನಂಡ ಸಂಪತ್ ತೆರಿಗೆ ಪಾವತಿದಾರರಾಗಿರುವ ಕಾರಣ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಕೇಳಿಕೊಂಡಿದ್ದಾರೆ.
ಈ ವೇಳೆ ಬೋಪಯ್ಯ ಅವರು ತಮ್ಮ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿರುವ ಪೊನ್ನಚ್ಚನ ಮಧುಸೂದನ್ ಅವರನ್ನು ಸಂಪತ್ ಅವರು ಸ್ಪರ್ಧೆ ಮಾಡಬೇಕಿದ್ದ ಹಿಂದುಳಿದ ವರ್ಗ (ಬಿ) ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಮಧುಸೂದನ್ ತಾನು ತೆರಿಗೆ ಪಾವತಿದಾರ ಆಗಿರುವ ಕಾರಣ ಆ ಕ್ಷೇತ್ರದಿಂದ ಸ್ಪರ್ಧೆ ಅಸಾಧ್ಯ ಎಂಬ ಉತ್ತರ ನೀಡಿದ್ದಾರೆ.
ತಾ. ೧೨ ರಂದು ಕನ್ನಂಡ ಸಂಪತ್ ಹೊರತುಪಡಿಸಿ ಮಧುಸೂದನ್ ಸೇರಿದಂತೆ ೧೨ ಮಂದಿ ಬಿಜೆಪಿ ಬೆಂಬಲಿತರು ನಾಪಪತ್ರ ಸಲ್ಲಿಸಿದ್ದರು. ಈ ಸಂದರ್ಭವೂ ಮಧು ಅವರನ್ನು ನಾಮಪತ್ರ ಹಿಂತೆಗೆದುಕೊಳ್ಳಲು ಮನವೊಲಿಸುವ ಪ್ರಯತ್ನಗಳು ನಡೆದವು. ಆದರೆ, ಮಧುಸೂದನ್ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲು ಮುಂದಾಗಲಿಲ್ಲ.
ನಂತರ ನಡೆದ ವಿದ್ಯಮಾನದಲ್ಲಿ ಸಾಮಾನ್ಯ ಕ್ಷೇತ್ರದಿಂದ ಕನ್ನಂಡ ಸಂಪತ್ ಅವರನ್ನು ಅಂತಿಮಗೊಳಿಸಿ ಸಂಪತ್ ಅವರಿದ್ದ ಸ್ಥಾನಕ್ಕೆ ನಗರಸಭೆ ಸದಸ್ಯ ಮಹೇಶ್ ಜೈನಿ ಅವರನ್ನು ಕಣಕ್ಕಿಳಿಸಲಾಗಿದೆ. ಇದಾದ ಬಳಿಕ ಕರಪತ್ರಗಳಲ್ಲಿ ಹೆಸರು ಬದಲಾವಣೆ ಮಾಡಿ ಹಂಚಿಕೆ ಕಾರ್ಯ ನಡೆಯುತ್ತಿದೆ.
ಇವೆಲ್ಲ ಘಟನಾವಳಿಗಳಿಂದ ನೊಂದು ಮಧುಸೂದನ್ ಇದೀಗ ಸ್ವತಂತ್ರö್ಯವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ತಾ. ೧೬ ರಂದು ಸಾಮಾನ್ಯ ಕ್ಷೇತ್ರದಿಂದ ಸಂಪತ್ ಹಾಗೂ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಮಹೇಶ್ ಜೈನಿ ಉಮೇದುವಾರಿಕೆೆಯನ್ನು ಸಲ್ಲಿಸಿದ್ದಾರೆ. ಟಿಹೆಚ್.ಜೆ. ರಾಕೇಶ್