ಸುಂಟಿಕೊಪ್ಪ, ಡಿ. ೧೭: ಮೈಸೂರು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅಂತಿಮ ವರ್ಷದ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕವನ್ನು ಗಳಿಸಿದ ಸುಂಟಿಕೊಪ್ಪ ಶೈನಿ ಡಿಸೋಜ ಅವರನ್ನು ಕೆದಕಲ್ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಅವರನ್ನು ಅಭಿನಂದಿಸಿ ಗೌರವಿಸಿದರು.

ಸದಸ್ಯರುಗಳಾದ ಶಿವಶಂಕರ್, ಬಿದ್ದಪ್ಪ, ಸಂಜು ಪೊನ್ನಪ್ಪ, ವಿಸ್ಮಿತಾ, ಪುಷ್ಪಾ, ಪಂಚಾಯಿತಿ ಕಾರ್ಯದರ್ಶಿ ಸುನಿತಾ, ಸಿಬ್ಬಂದಿಗಳಾದ ರಾಮಚಂದ್ರ, ಬಾಲಚಂದ್ರ ಹಾಗೂ ಶೈನಿ ಡಿಸೋಜ ಪೋಷಕರಾದ ಗ್ಯಾಬ್ರಿಯಲ್ ಡಿಸೋಜ (ರೈಯು) ಮತ್ತು ಸಿಸಿಲಿಯ ಡಿಸೋಜ ಹಾಗೂ ಗ್ರಾಮಸ್ಥರು ಹಾಜರಿದ್ದರು.